ಮೈಸೂರು: ಎನ್ಟಿಎ (ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ) ನಡೆಸುವ ಜೆಇಇ ಮೇನ್ 2026ರ ಪರೀಕ್ಷೆಯಲ್ಲಿ ಆಕಾಶ್ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್ (ಎಇಎಸ್ಎಲ್) ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದು, ಅವರನ್ನು ಇಲ್ಲಿನ ಕುವೆಂಪುನಗರ ಕೇಂದ್ರದಲ್ಲಿ ಸನ್ಮಾನಿಸಲಾಯಿತು.

ಪ್ರಚೇತ್ ಜೈಶಂಕರ್ ಮರಾಠೆ (99.728 ಪರ್ಸೆಂಟೈಲ್), ನಿಶಾಂತ್ ರಾಜ್ ಎಚ್.ಎನ್. (99.477), ಎಸ್. ಶರವಣನ್ (98.882), ಮೈತ್ರೇಯ ಕೊಂಪೆಲ್ಲಾ (98.846) ಮತ್ತು ಚಿರಾಗ್ (98.474) ಮೊದಲಾದವರು ಉತ್ತಮ ಪ್ರದರ್ಶನ ತೋರಿದ್ದಾರೆ. ಆದರ್ಶ್ಕುಮಾರ್ ಬೆಹೆರಾ ಅಖಿಲ ಭಾರತ ರ್ಯಾಂಕಿಂಗ್ನಲ್ಲಿ 43ನೇ ಸ್ಥಾನ ಹಾಗೂ ರಾಜ್ಯಮಟ್ಟದಲ್ಲಿ 2ನೇ ರ್ಯಾಂಕ್ ಪಡೆದಿದ್ದಾರೆ. ಗಣಿತ ಮತ್ತು ರಸಾಯನವಿಜ್ಞಾನ ವಿಷಯಗಳಲ್ಲಿ ಶೇ. 100ರಷ್ಟು ಅಂಕ ಗಳಿಸಿ ಗಮನಸೆಳೆದಿದ್ದಾರೆ.

ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಎಇಎಸ್ಎಲ್ ಮುಖ್ಯ ಅಕಾಡೆಮಿಕ್ ಹಾಗೂ ಬಿಸಿನೆಸ್ ಹೆಡ್ ಧೀರಜ್ ಕುಮಾರ್ ಮಿಶ್ರಾ, ‘ನಮ್ಮ ವಿದ್ಯಾರ್ಥಿಗಳು ತೋರಿರುವ ಸಾಧನೆಯು ಅವರ ಕಠಿಣ ಪರಿಶ್ರಮ, ಶಿಸ್ತು ಹಾಗೂ ಆಕಾಶ್ ಶಿಕ್ಷಣ ವ್ಯವಸ್ಥೆಯ ಬದ್ಧತೆಗೆ ಕನ್ನಡಿಯಾಗಿದೆ. ಅಚ್ಚುಕಟ್ಟಾದ ಶೈಕ್ಷಣಿಕ ಯೋಜನೆ, ಪರಿಣತರ ಮಾರ್ಗದರ್ಶನ ಹಾಗೂ ನಿರಂತರ ಅಭ್ಯಾಸದಿಂದಾಗಿ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದಿದ್ದಾರೆ’ ಎಂದು ಹೇಳಿದರು.

ಅಕಾಡೆಮಿಕ್ ಹೆಡ್ ಎಸ್.ಬಾಲಶ್ರೀನಿವಾಸನ್, ಆರ್ಎಸ್ಎಚ್ಜಿ ಅನಿಲ್ಕುಮಾರ್ ಎಚ್.ಆರ್., ಶಾಖಾ ಮುಖ್ಯಸ್ಥರಾದ ಸೂರಜ್ ಡಿ., ಮೊಹಮ್ಮದ್ ಮುಬಾರಕ್ ಪಾಷ, ಎಎಚ್ಎಂ ಸಂಜೀವ್ಕುಮಾರ್ ಝಾ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-39-1949135438

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.