ಮೈಸೂರು: ‘ಕೃತಕ ಬುದ್ಧಿಮತ್ತೆಯು (ಎಐ) ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಪರಿವರ್ತಿಸುವ ಅಪಾರ ಸಾಮರ್ಥ್ಯ ಹೊಂದಿದೆ’ ಎಂದು ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಪ್ರೊ–ಚಾನ್ಸಲರ್ ಬಿ.ಸುರೇಶ್ ಹೇಳಿದರು.

ಇಲ್ಲಿನ ಜೆಎಸ್ಎಸ್ ತಾಂತ್ರಿಕ ಸಂಸ್ಥೆ ಆವರಣದಲ್ಲಿ ಜೆಎಸ್ಎಸ್ ವಿಜ್ಞಾನಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯಹಾಗೂ ಕರ್ನಾಟಕದ ಮಾಜಿ ಕುಲಪತಿಗಳ ವೇದಿಕೆಯಿಂದ ಈಚೆಗೆ ನಡೆದ ‘ಕೃತಕ ಬುದ್ಧಿಮತ್ತೆಯ ಮೂಲಕ ಭಾರತದಲ್ಲಿ ಉನ್ನತ ಶಿಕ್ಷಣದ ಪುನರ್ಕಲ್ಪನೆ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಬೋಧನೆ, ಕಲಿಕಾ ವಿಧಾನಗಳ ಸುಧಾರಣೆ, ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆ, ವೈಯಕ್ತಿಕ ಕಲಿಕಾ ಅನುಭವ ಒದಗಿಸುವುದು ಹಾಗೂ ದತ್ತಾಂಶ ಆಧಾರಿತ ಶೈಕ್ಷಣಿಕ ನಿರ್ಧಾರಗಳಲ್ಲಿ ಎಐ ನೆರವಾಗುತ್ತದೆ. ಎಐ ಅನ್ನು ವಿಶ್ವವಿದ್ಯಾಲಯದ ನೀತಿಗಳು, ಆಡಳಿತ ವ್ಯವಸ್ಥೆ, ಪಠ್ಯಕ್ರಮ, ಸಂಶೋಧನೆ ಹಾಗೂ ನಿರ್ವಹಣೆಯೊಂದಿಗೆ ಸಂಯೋಜಿಸಬೇಕಿದೆ’ ಎಂದರು.

ವಿವಿಧ ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸಿದ 40ಕ್ಕೂ ಹೆಚ್ಚು ಮಾಜಿ ಕುಲಪತಿಗಳು, ಶಿಕ್ಷಣ ತಜ್ಞರು, ಶೈಕ್ಷಣಿಕ ನಾಯಕರು, ಕೈಗಾರಿಕಾ ವಲಯದ ಪರಿಣತರು, ಸಂಶೋಧಕರು ಹಾಗೂ ನೀತಿ ನಿರೂಪಕರು ಚರ್ಚೆ ನಡೆಸಿದರು.

ಕುಲಪತಿ ಎ.ಎನ್.ಸಂತೋಷ್ ಕುಮಾರ್, ಆರ್ಮ್ ಹೋಲ್ಡಿಂಗ್ ಸಂಸ್ಥೆ ಪ್ರತಿನಿಧಿ ಜಯಕುಮಾರ್ ಸಿಂಗಾರಂ ಹಾಗೂ ಅಧ್ಯಕ್ಷತೆ ವಹಿಸಿದ್ದ ವೇದಿಕೆ ಅಧ್ಯಕ್ಷ ಎಸ್.ಚಂದ್ರಶೇಖರ ಶೆಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-39-2101893186

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.