ಮೈಸೂರು: ‘ಮಹಿಳೆಯರು ಸಮಾನ ಹಕ್ಕುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರು ನಡೆಸಿದ ಹೋರಾಟ ಹಾಗೂ ನೀಡಿದ ಕೊಡುಗೆ ಅಪಾರವಾದುದು’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ. ಸವಿತಾ ಸ್ಮರಿಸಿದರು.

ಇಲ್ಲಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಗುರುವಾರ ಮೈಸೂರು ವಿ.ವಿ. ಮಾನಸಗಂಗೋತ್ರಿಯ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ, ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಅಂಬೇಡ್ಕರ್ ಮತ್ತು ಮಹಿಳಾ ಪ್ರಗತಿ’ ವಿಷಯದ ಕುರಿತು ಎರಡು ದಿನಗಳ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳೆಯರು ಹಲವು ಕಾರಣಗಳಿಂದ ಹಾಗೂ ಹುಸಿ ಮೌಲ್ಯಗಳಿಂದಾಗಿ ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿರುವುದನ್ನು ತಪ್ಪಿಸಲು ಅವರು ಶ್ರಮಿಸಿದರು. ಮಹಿಳಾ ಸಮುದಾಯದ ಬಿಡುಗಡೆಗಾಗಿ ತಮ್ಮನ್ನು ತೆತ್ತುಕೊಂಡರು. ಮಹಿಳಾ ವ್ಯಕ್ತಿತ್ವವನ್ನು ನಿರಾಕರಿಸುವ ದೌರ್ಜನ್ಯದಿಂದ ಕೂಡಿರುವ ನಿಲುವುಗಳನ್ನು ಅವರು ಪ್ರಖರವಾಗಿ ವಿರೋಧಿಸಿದರು. ಮತದಾನದ ಹಕ್ಕು ದೊರೆಯುವಂತೆ ಮಾಡಿದರು’ ಎಂದರು.

‘ಮಹಿಳೆ ಶಿಕ್ಷಣ ಪಡೆದು ವಿಚಾರವಂತಳಾದರೆ ಅಸ್ಪೃಶ್ಯತೆ, ಜಾತಿ ಪದ್ಧತಿ, ಅಸಮಾನತೆ, ಮೂಢನಂಬಿಕೆ, ಬಡತನ ದೂರಾಗುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಮಹಿಳಾ ವಿಮೋಚನೆಗೆ ಸದಾ ಆದ್ಯತೆ ನೀಡಿದ್ದ ಅವರನ್ನು ಮರೆಯಬಾರದು’ ಎಂದರು.

ಸೌಲಭ್ಯಗಳಿಗಾಗಿ: ‘ವಿದ್ಯಾರ್ಥಿ ದಿಸೆಯಲ್ಲೇ ಮಹಿಳಾ ಸ್ಥಿತಿಗತಿ ಬಗ್ಗೆ ಮಾತನಾಡಿದ್ದರು. ಹೆರಿಗೆ ರಜೆ, ಕಡಿಮೆ ದರದಲ್ಲಿ ಪಡಿತರ ಮೊದಲಾದ ಸೌಲಭ್ಯಗಳು ದೊರೆಯಬೇಕು ಎಂದು ಪ್ರತಿಪಾದಿಸಿದ್ದರು. ಈಗ ರಾಜ್ಯ ಸರ್ಕಾರ ಅವರದೇ ಆಶಯದಂತೆ ಶಕ್ತಿ, ಗೃಹಲಕ್ಷ್ಮಿ ಮೊದಲಾದವುಗಳನ್ನು ಕೊಟ್ಟಿರುವುದು ಸ್ವಲ್ಪವಾದರೂ ಸಮಾಧಾನ ತರುವಂತಹ ವಿಚಾರ’ ಎಂದು ಅಭಿಪ್ರಾಯಪಟ್ಟರು.

‘ಈಗ, ಋತುಚಕ್ರ ರಜೆ ನೀಡಿದ್ದಕ್ಕೆ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಹೀಗಿರುವಾಗ, ಆ ಕಾಲದಲ್ಲೇ ಹಿಂದೂ ಧರ್ಮ, ಮನುವಾದಿಗಳನ್ನು ಎದುರು ಹಾಕಿಕೊಂಡು ಮಹಿಳಾ ಸಮಾನತೆಗಾಗಿ ಅಂಬೇಡ್ಕರ್ ಎಷ್ಟರ ಮಟ್ಟಿಗೆ ಹೋರಾಟ ಮಾಡಿರಬಹುದು? ಅಂತಹ ಮಹಾನ್ ನಾಯಕರನ್ನು ಇಂದಿಗೂ ನೋಡುವುದಕ್ಕೆ ಆಗುವುದಿಲ್ಲ’ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಸಾಬೀರ ಅಹ್ಮದ್ ಮುಲ್ಲಾ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಎಸ್. ಅನಿತಾ, ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರಕುಮಾರ್, ಹಿರಿಯ ಪ್ರಾಧ್ಯಾಪಕ ಪ್ರೊ.ಜೆ.ಸೋಮಶೇಖರ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-39-1937843582

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.