ಮೈಸೂರು: ವಿಶ್ವೇಶ್ವರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಪುರುಷರ ವಿದ್ಯಾರ್ಥಿ ನಿಲಯದಲ್ಲಿ ಅಂಬೇಡ್ಕರ್ ಜನ್ಮದಿನಾಚರಣೆ ಪ್ರಯುಕ್ತ ಏ.25ರಂದು ಮಧ್ಯಾಹ್ನ 1.30ಕ್ಕೆ ‘ಭೀಮೋತ್ಸವ’ ಆಯೋಜಿಸಲಾಗಿದೆ.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ ಉತ್ಸವ ಉದ್ಘಾಟಿಸಲಿದ್ದು, ಸಹಾಯಕ ನಿರ್ದೇಶಕ ಎ.ಎನ್.ಜನಾರ್ಧನ್, ಹೋರಾಟಗಾರ ಅಹಿಂದ ಜವರಪ್ಪ ಅತಿಥಿಗಳಾಗಿ ಪಾಲ್ಗೊಳ್ಳುವರು.

ನಂತರ ನಡೆಯುವ ವಿಚಾರ ಸಂಕಿರಣದಲ್ಲಿ ‘ಮಹಿಳೆಯರ ಹಕ್ಕುಗಳು ಮತ್ತು ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಮತ್ತು ಅಂಬೇಡ್ಕರ್’ ಕುರಿತು ಎಐಟಿಯುಸಿಯ ಪಿ.ಎಸ್.ಸಂಧ್ಯಾ, ‘ಪ್ರಸ್ತುತ ದಿನಮಾನಗಳಲ್ಲಿ ಅಂಬೇಡ್ಕರ್ ಓದು ಮುಖ್ಯ ಏಕೆ’ ಕುರಿತು ‘ಪ್ರಜಾವಾಣಿ’ ಮೈಸೂರು ಬ್ಯೂರೊ ಮುಖ್ಯಸ್ಥ ಕೆ.ನರಸಿಂಹಮೂರ್ತಿ ವಿಚಾರ ಮಂಡಿಸುವರು. ಪ್ರೊ.ಕವಿತಾ ರೈ ಅಧ್ಯಕ್ಷತೆ ವಹಿಸುವರು.

ಎರಡನೇ ಗೋಷ್ಠಿಯಲ್ಲಿ ಮಹೇಶ್ ಇರಸವಾಡಿ, ಆರ್.ಎಸ್.ಸಂದೀಪ್, ಲೇಖಕ ಕೆ.ಎಲ್.ಚಂದ್ರಶೇಖರ ಐಜೂರು ಪಾಲ್ಗೊಳ್ಳುವರು. ಸಮಾರೋಪ ಭಾಷಣವನ್ನು ವಾರ್ಡನ್ ಕೆ.ಮಹೇಶ್ ಮಾಡಲಿದ್ದು, ಶಿಶು ಅಭಿವೃದ್ಧ ಯೋಜನಾಧಿಕಾರಿ ಎಂ.ತಿಬ್ಬಯ್ಯ, ಪತ್ರಕರ್ತ ವಿನೋದ್ ಮಹಾದೇವಪುರ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-38-189828933

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.