ಮೈಸೂರು: ‘ಅಂಬೇಡ್ಕರ್ ವಿಚಾರಧಾರೆ ದೇಶದ ದೊಡ್ಡ ಶಕ್ತಿಯಾಗಿದ್ದು, ಅವರ ಹೆಸರಿನಲ್ಲಿ ನಾವೆಲ್ಲರೂ ಸಂಘಟಿತರಾಗಿ ಭಾರತವನ್ನು ಭೀಮ ದೇಶವನ್ನಾಗಿ ಮಾಡಬೇಕು’ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ರಂಗೇಗೌಡ ತಿಳಿಸಿದರು.

ಇಲ್ಲಿನ ವಿಜಯನಗರ 3ನೇ ಹಂತದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ನಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಿದ್ದ ‘ಜ್ಞಾನೋತ್ಸವ’ ಉದ್ಘಾಟಿಸಿ ಮಾತನಾಡಿದರು.

‘ಅಂಬೇಡ್ಕರ್ ನೊಂದವರ ಅಸ್ಮಿತೆ. ಜ್ಞಾನವನ್ನು ದೇಶಕ್ಕಾಗಿ ಧಾರೆ ಎರೆದರು. ಸಮಾಜ ಕಲ್ಯಾಣ ಇಲಾಖೆಯು ಅಂಬೇಡ್ಕರ್ ತತ್ವಗಳನ್ನು ಚಾಚೂ ತಪ್ಪದೆ ಅನುಷ್ಠಾನಗೊಳಿಸುತ್ತಿದೆ. ಜನರು ಅವರ ಆಶಯ ಈಡೇರಿಸಲು ಶ್ರಮಿಸಬೇಕು’ ಎಂದರು.

ಅಹಿಂದ ಮುಖಂಡ ಜವರಪ್ಪ ಮಾತನಾಡಿ, ‘ವಿದ್ಯಾರ್ಥಿಗಳು ಸಮಾಜದಲ್ಲಿರುವ ಮೌಢ್ಯ, ಕಂದಾಚಾರಗಳನ್ನು ಧಿಕ್ಕರಿಸಿ ವೈಜ್ಞಾನಿಕವಾಗಿ ಚಿಂತನೆ ಮಾಡಬೇಕು. ಸಮಾಜದಲ್ಲಿರುವ ಅಸಮಾನತೆ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಬೇಕು’ ಎಂದು ಹೇಳಿದರು.

ಚಿಂತಕ ಸುರೇಶ್ ಗೌತಮ್, ಎ.ಎಸ್.ಜನಾರ್ಧನ್, ಅಬಕಾರಿ ಇನ್ಸ್ಪೆಕ್ಟರ್ ಪಿ.ರಾಘವೇಂದ್ರ, ನಿಲಯಪಾಲಕ ಪ್ರದೀಪ್ ಕೆ.ಎ.ಎಸ್, ಮಹೇಶ್ ಕೆ., ಕಾರ್ತಿಕ್, ಚಿಕ್ಕೀರಯ್ಯಾ, ರಾಜೇಶ್ವರಿ, ಚಂದ್ರಮ್ಮ, ಮಹೇಶ್, ಶಿವಮಲ್ಲಯ್ಯ, ಗುರುಪ್ರಸಾದ್, ಮಹಾಂತೇಶ್ ಮಾಟೋಳಿ, ಜಗದೀಶ್, ಮಹೇಶ್, ಚೇತನ್ದೊಡ್ಡಯ್ಯ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-39-1171252856

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.