ಮೈಸೂರು: ‘ದಲಿತ ಸಮುದಾಯವನ್ನು ಕೋಮುವಾದ ಆಪೋಶನ ತೆಗೆದುಕೊಳ್ಳುತ್ತಿರುವ ದುರ್ಬರ ಸನ್ನಿವೇಶ ಎದುರಾಗಿದೆ. ಕೋಮುವಾದದ ಮುಂದಾಳುಗಳಾದರೆ ಅಂಬೇಡ್ಕರ್ ಎಷ್ಟು ದುಃಖ ಪಡುತ್ತಾರೆ ಎಂಬ ಎಚ್ಚರ ಇರಬೇಕಿದೆ’ ಎಂದು ವಿಮರ್ಶಕಿ ಪ್ರೊ.ಎಂ.ಎಸ್.ಆಶಾದೇವಿ ಹೇಳಿದರು.

ಮಾನಸಗಂಗೋತ್ರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿಯಲ್ಲಿ ‘ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಮಾಜ ಪರಿವರ್ತನೆ’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ‘ಸಾಂಸ್ಕೃತಿಕ, ಸಾಮಾಜಿಕ ಹೊಣೆಗಾರಿಕೆಯಿಂದ ವಿಮುಖರಾಗುತ್ತಿದ್ದೇವೆ ಎಂಬ ಪ್ರಶ್ನೆ ನಮಗೆ ಕಾಡಬೇಕಿದೆ’ ಎಂದರು.

‘ಅಪ್ರಿಯವಾದ ಸತ್ಯಗಳನ್ನು ಆಡದೇ ಹೋದರೆ ಅಂಬೇಡ್ಕರ್ ಪ್ರತಿಪಾದಿಸಿದ ಆಶಯಗಳೊಂದಿಗೆ ಸಾಗಲು ಸಾಧ್ಯವಿಲ್ಲ. ಪ್ರಾಮಾಣಿಕತೆ, ಅನ್ಯಾಯದ ವಿರುದ್ಧ ಹೋರಾಟದ ಮನೋಧರ್ಮ ತೋರದೇ, ನಡೆದು ಬಂದ ಹಾದಿಯ ಆತ್ಮವಿಮರ್ಶೆ ಮಾಡದಿದ್ದರೆ ಕಷ್ಟವಾಗುತ್ತದೆ. ಪೋಷಾಕಿನ ಅನುಕರಣೆಯಿಂದ ಅಂಬೇಡ್ಕರ್ವಾದಿ ಆಗಲು ಆಗದು. ಅವರಂತೆಯೇ ಜ್ಞಾನದ ದೊಂದಿ ಆಗಬೇಕು. ಓದುತ್ತಲೇ ಪ್ರಾಣ ಬಿಡಬೇಕೆನ್ನುವ, ಪ್ರತಿಪಾದಿಸಿದ ಸಾಮಾಜಿಕ ಮೌಲ್ಯಗಳ ವಿಷಯದಲ್ಲಿ ರಾಜಿ ಆಗಲಾರೆ ಎಂಬ ಬಾಬಾಸಾಹೇಬರ ಬುದ್ಧಪ್ರಜ್ಞೆ ನಮ್ಮಲ್ಲಿಯೂ ಮೂಡಬೇಕು’ ಎಂದರು.

ಕವಿ ಸಿದ್ದಲಿಂಗಯ್ಯ ಅವರ ಕವಿತೆಯ, ‘ಮಹಾರಾಷ್ಟ್ರದ ಮಣ್ಣಿನಲ್ಲಿ ಮೂಡಿಬಂದ ಗುಡುಗು ಸಿಡಿಲೇ, ಮಳೆಯನೇಕೆ ತಾರಲಿಲ್ಲ. ಮಿಂಚು ಮಾಯ ಅಷ್ಟೆಯಾ’ ಎಂಬ ಸಾಲನ್ನು ವಾಚಿಸಿದ ಆಶಾದೇವಿ ಅವರು, ‘ಅಂಬೇಡ್ಕರ್ ಹೋರಾಟ ಅಪೂರ್ಣವಾಗಿದ್ದು, ಅವರ ಹೋರಾಟವನ್ನು ಮುಂದುವರಿಸುವ ಜವಾಬ್ದಾರಿಯನ್ನು ನಮ್ಮ ಹೆಗಲ ಮೇಲೆ ಇಟ್ಟಿದ್ದಾರೆ’ ಎಂದು ವಿವರಿಸಿದರು.

ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ಎಂ.ಕೆ.ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜು, ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರಕುಮಾರ್, ಕೆ.ಎನ್.ಮಂಜುನಾಥ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-39-378638108

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.