ಮೈಸೂರು: ‘ಬಸವಣ್ಣನ ಬಳಿಕ ಸ್ತ್ರೀ ಸಮಾನತೆಗೆ ಹೆಚ್ಚು ಶ್ರಮಿಸಿದವರು ಅಂಬೇಡ್ಕರ್’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅಭಿಪ್ರಾಯಪಟ್ಟರು.

ಅಶೋಕ ಯೂತ್ ಅಸೋಸಿಯೇಷನ್ನಿಂದ ಇಲ್ಲಿನ ಅಶೋಕ ವೃತ್ತದಲ್ಲಿ ಬುಧವಾರ ನಡೆದ ಬಾಬಾ ಸಾಹೇಬ್ ಅಂಬೇಡ್ಕರ್ 135ನೇ ಜನ್ಮದಿನಾಚರಣೆ ಪ್ರಯುಕ್ತದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕುಟುಂಬ ಯೋಜನೆ ಕಲ್ಪನೆಯನ್ನು ಮೊದಲು ಪ್ರಸ್ತಾಪಿಸಿ, ಮಹಿಳೆಯ ಆರೋಗ್ಯದ ಕಾಳಜಿ ವಹಿಸಿದವರು ಅಂಬೇಡ್ಕರ್. ಅವರಿಂದಾಗಿ ಮಹಿಳೆಯರಿಗೆ ಶಿಕ್ಷಣ, ರಾಜಕೀಯ ಹಾಗೂ ಆರ್ಥಿಕ ಸ್ವಾತಂತ್ರ್ಯ ಲಭಿಸಿದೆ. ತಮ್ಮ ಪತ್ನಿ ರಮಾಬಾಯಿ ತ್ಯಾಗವನ್ನು ಸ್ಮರಿಸುವ ಅಂಬೇಡ್ಕರ್ ಮಹಿಳೆಯರ ಸಂಕಷ್ಟವನ್ನು ಅರಿತಿದ್ದ ಮಹಾನ್ ವ್ಯಕ್ತಿ’ ಎಂದು ಸ್ಮರಿಸಿದರು.

‘ಅಂಬೇಡ್ಕರ್ ಕಡೆವರೆಗೂ ಜಾತಿ ವಿನಾಶಕ್ಕೆ ಹೋರಾಡಿದರು. ವೈಯಕ್ತಿಕ ಲಾಭಕ್ಕಾಗಿ ಹೋರಾಟ ಮಾಡಲಿಲ್ಲ. ಯಾವುದೇ ಕಾರ್ಯಕ್ರಮ ಆಯೋಜಿಸಿದರೂ, ಆ ವೇದಿಕೆಯಲ್ಲಿ ಹೆಣ್ಣುಮಕ್ಕಳಿಗೆ ಶೇ 50 ಸ್ಥಾನ ನೀಡದೇ ಹೋದರೆ ಅಂಬೇಡ್ಕರ್ಗೆ ಅಗೌರವ ಸಲ್ಲಿಸಿದಂತೆ’ ಎಂದರು.

ನಾಗೇಶ್ ಕಂದೇಗಾಲ, ಅರುಣ್ ಮೇಚಿ, ನಿರ್ಮಲಾ ಅವರು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಗೀತೆಗಳನ್ನು ಹಾಡಿದರು. ಕಲಾವತಿ ದಯಾನಂದ್ ಹಾಡಿದ ‘ಯಾಕೆ ಬಡಿದಾಡ್ತಿ ತಮ್ಮ ಮಾಯಾ ನೆಚ್ಚಿ ಸಂಸಾರ ಮೆಚ್ಚಿ’ ಹಾಡು, ಶೃತಿ ವಿ.ಎಸ್. ಧ್ವನಿಯಲ್ಲಿ ಮೂಡಿದ ‘ಬದುಕು ಜಟಕಾ ಬಂಡಿ’ ಹಾಡು ಗಮನ ಸೆಳೆಯಿತು.

ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಮುಖಂಡರಾದ ಎಂ.ಕೆ.ಸೋಮಶೇಖರ್, ಪುರುಷೋತ್ತಮ್, ಉದ್ಯಮಿ ಚಲುವರಾಜು, ಮುಖಂಡ ಆರ್.ಸಿ.ಮಹೇಶ್, ಭಾಸ್ಕರ್, ರವಿ, ಅಶೋಕ ಯೂತ್ ಅಸೋಸಿಯೇಷನ್ನ ಪಿ.ಟಿ.ಕೃಷ್ಣ, ಗುರುರಾಜ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-39-597425684

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.