ಮೈಸೂರು: ‘ಆಂಟಿಬಯೋಟಿಕ್ (ಪ್ರತಿಜೀವಕಗಳು) ಔಷಧಿಯನ್ನು ಅನವಶ್ಯವಾಗಿ ಹಾಗೂ ಅತಿಯಾಗಿ ಬಳಸುತ್ತಿರುವುದರಿಂದ ಆರೋಗ್ಯದ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಬೇಕು. ಎಚ್ಚರವನ್ನೂ ವಹಿಸಬೇಕು’ ಎಂಬ ಸಲಹೆ ತಜ್ಞರಿಂದ ವ್ಯಕ್ತವಾಯಿತು.

ಇಲ್ಲಿನ ಶಿವರಾತ್ರೀಶ್ವರ ನಗರದ ಜೆಎಸ್ಎಸ್ ಫಾರ್ಮಸಿ ಕಾಲೇಜು ಸಭಾಂಗಣದಲ್ಲಿ ಜೆಎಸ್ಎಸ್– ಎಎಚ್ಇಆರ್ನಿಂದ ಎಎನ್ಆರ್ಎಫ್ (ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ)ದ ಪ್ರಾಯೋಜಕತ್ವದಲ್ಲಿ ಶುಕ್ರವಾರದಿಂದ ಎರಡು ದಿನಗಳವರೆಗೆ ಹಮ್ಮಿಕೊಂಡಿರುವ ‘ಸೂಕ್ಷ್ಮಜೀವಿ ಪ್ರತಿರೋಧದ ಯುಗದಲ್ಲಿ ನಿಖರವಾದ ಪ್ರತಿಜೀವಕ ಚಿಕಿತ್ಸೆ’ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ, ‘ಎಲ್ಲ ಕಾಯಿಲೆಗಳಿಗೂ ಆಂಟಿಬಯೋಟಿಕ್ ಔಷಧಿ ಬಳಸುವ ಅಗತ್ಯವಿಲ್ಲ’ ಎಂಬುದನ್ನು ತಜ್ಞರು ಪ್ರತಿಪಾದಿಸಿದರು.

‘ಅತಿಯಾದ ಬಳಕೆಯಿಂದ ಬ್ಯಾಕ್ಟೀರಿಯಾಗಳು ಆಂಟಿಬಯೋಟಿಕ್ಗಳಿಗೆ ಪ್ರತಿರೋಧ ತೋರುತ್ತವೆ. ನಂತರ ಆ ಔಷಧಿ ಕೆಲಸ ಮಾಡುವುದಿಲ್ಲ’ ಎಂದು ತಿಳಿಸಿದರು.

ಸಹಕಾರ ಅಗತ್ಯ: ಉದ್ಘಾಟಿಸಿದ ಮಲೇಷ್ಯಾದ ಆರೋಗ್ಯ ಸಚಿವಾಲಯದ ಕ್ಲಿನಿಕಲ್ ಫಾರ್ಮಸಿಸ್ಟ್ ಡಾ.ಲೀ ಜಿಯಾನ್ ಲಿನ್ ಮಾತನಾಡಿ, ‘ಆಂಟಿಬಯೋಟಿಕ್ ಸಮರ್ಪಕ ಬಳಕೆಯ ನಿಟ್ಟಿನಲ್ಲಿ ‘ಚಿಕಿತ್ಸಕ ಔಷಧಿ ಮೇಲ್ವಿಚಾರಣೆ’ (ಟಿಡಿಎಂ) ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಏಷ್ಯಾದಲ್ಲಿ ಜಾಗೃತಿ ಹೆಚ್ಚಬೇಕಾಗಿದೆ. ಈ ಭಾಗದಲ್ಲಿ ಚಿಕಿತ್ಸಾ ಕ್ರಮದಲ್ಲಿ ವೈವಿಧ್ಯತೆ ಹೆಚ್ಚಿರುವುದರಿಂದ ಸವಾಲುಗಳೂ ಇವೆ. ಮೂಲಸೌಲಭ್ಯ, ಅಗತ್ಯ ಪ್ರಯೋಗಾಲಯಗಳು, ಕ್ಲಿನಿಕಲ್ ಅರಿವು ಹಾಗೂ ತರಬೇತಿಯ ಕೊರತೆಯು ಕೂಡ ಅಡ್ಡಿಯಾಗಿದೆ. ಈ ಅಂತರವನ್ನು ನಿಭಾಯಿಸಲು ಸಮನ್ವಯದ ಸೇತುವೆಯ ಅಗತ್ಯವಿದೆ’ ಎಂದರು.

‘ರೋಗಿಗಳ ಸುರಕ್ಷತೆಯ ನಿಟ್ಟಿನಲ್ಲಿ ಪರಸ್ಪರ ಜ್ಞಾನ ವಿನಿಮಯ, ಸಂಶೋಧನೆ ಹಾಗೂ ಸಹಭಾಗಿತ್ವ ಅಗತ್ಯವಾಗಿದೆ. ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ವಿಭಾಗಗಳವರೂ ಒಟ್ಟಾಗಿ ಕೆಲಸ ಮಾಡುವುದರಿಂದ ‘ಚಿಕಿತ್ಸಕ ಔಷಧಿ ಮೇಲ್ವಿಚಾರಣೆ’ಯನ್ನು ಸಶಕ್ತಗೊಳಿಸಬಹುದಾಗಿದೆ’ ಎಂದು ಹೇಳಿದರು.

ಟಿಡಿಎಂ ಅಗತ್ಯ: ಜೆಎಸ್ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ನಾರಾಯಣಪ್ಪ ಡಿ, ‘ಈಗಿನ ಪರಿಸ್ಥಿತಿಯಲ್ಲಿ ‘ಚಿಕಿತ್ಸಕ ಔಷಧಿ ಮೇಲ್ವಿಚಾರಣೆ’ ಬಹಳಷ್ಟು ಅಗತ್ಯವಾಗಿದೆ. ಏಕೆಂದರೆ, ನಾವು ಪ್ರತಿಜೀವಕಗಳನ್ನು ಹೆಚ್ಚಾಗಿ ಬಳಸುತ್ತಿದ್ದೇವೆ, ದುರ್ಬಳಕೆಯೂ ನಡೆಯುತ್ತಿದೆ. ಇದನ್ನು ತಡೆಯಬೇಕಾಗುತ್ತದೆ. ವೈರಲ್ ಜ್ವರದಂತಹ ಸಣ್ಣಪುಟ್ಟ ಸಮಸ್ಯೆಗೂ ಪ್ರತಿಜೀವಕಗಳ ಔಷಧಿ ತೆಗೆದುಕೊಳ್ಳುತ್ತಿದ್ದೇವೆ. ಇದು ನಾವೇ ಮಾಡುತ್ತಿರುವ ತಪ್ಪು. ಇದರಿಂದಾಗಿ ಹಲವು ಸವಾಲುಗಳು ಎದುರಾಗುತ್ತಿವೆ. ಹೀಗಾಗಿ, ಅರಿವು ಮೂಡಬೇಕಾದ ಅಗತ್ಯವಿದೆ’ ಎಂದರು.

ಇದೇ ವೇಳೆ, ಜೆಎಸ್ಎಸ್ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಟಿಡಿಎಂ (1.0) ಕೇಂದ್ರವನ್ನು ಉದ್ಘಾಟಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಜೆಎಸ್ಎಸ್–ಎಎಚ್ಇಆರ್ ಡೀನ್ (ಸಂಶೋಧನೆ) ಡಾ.ಪ್ರಶಾಂತ್ ವಿಶ್ವನಾಥ್, ಜೆಎಸ್ಎಸ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಂ. ಪ್ರಮೋದ್ಕುಮಾರ್, ಪ್ರಾಧ್ಯಾಪಕರಾದ ಬಿ.ಎಂ. ಗುರುಪಾದಯ್ಯ, ಜಿ.ವಿ. ಪೂಜಾರ್ ಪಾಲ್ಗೊಂಡಿದ್ದರು.

ಶ್ರೀಜಿತಾ ತಂಡದವರು ಪ್ರಾರ್ಥಿಸಿದರು. ಸವಿತಾ ಆರ್.ಎಸ್. ಸ್ವಾಗತಿಸಿದರು. ಶ್ವೇತಾ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-51-73893832

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.