ಮೈಸೂರು: ‘ವ್ಯಂಗ್ಯಚಿತ್ರಗಳು ಘಟನೆ ವಿಶ್ಲೇಷಿಸುವ ಜೊತೆಗೆ ನೋಡುಗರಲ್ಲಿ ತಲ್ಲಣ ಸೃಷ್ಟಿಸುವಷ್ಟು ಪರಿಣಾಮಕಾರಿ’ ಎಂದು ಪ್ರಮತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಚ್.ವಿ.ರಾಜೀವ್ ಹೇಳಿದರು.

ಇಲ್ಲಿನ ರಾಮಾನುಜ ರಸ್ತೆಯಲ್ಲಿರುವ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ವಿಶ್ವ ವ್ಯಂಗ್ಯಚಿತ್ರಕಾರರ ದಿನಾಚರಣೆ ಅಂಗವಾಗಿ ಬ್ಯಾಂಟರ್ ಬಾಬು ಪಬ್ಲಿಕೇಷನ್ ವತಿಯಿಂದ ಆಯೋಜಿಸಿದ್ದ ವ್ಯಂಗ್ಯಚಿತ್ರಕಾರ ಎಂ.ವಿ.ನಾಗೇಂದ್ರ ಬಾಬು ರಚಿತ ‘ಯುದ್ಧ ಹಾಗೂ ಶಾಂತಿ’ ವ್ಯಂಗ್ಯ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜಕ್ಕೆ ಸೂಕ್ಷ್ಮ ವಿಚಾರ ತಿಳಿಸುವ ಕೆಲಸವನ್ನು ವ್ಯಂಗ್ಯಚಿತ್ರಗಳು ಪ್ರತಿನಿಧಿಸಿವೆ. ಪ್ರಸ್ತುತ ಕಾಲದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ತಿಳಿಸಿವೆ. ಯುದ್ಧ ಮತ್ತು ಶಾಂತಿ ನಡುವಿನ ಕಾಲಘಟ್ಟದ ಸನ್ನಿವೇಶದಲ್ಲಿ ಸಮಾಜದ ಏರುಪೇರುಗಳನ್ನು ವ್ಯಂಗ್ಯಚಿತ್ರ ಮೂಲಕ ಚಿತ್ರಿಸಿರುವುದು ವಿಶೇಷ’ ಎಂದರು.

‘ವ್ಯಂಗ್ಯಚಿತ್ರಗಳ ಮೂಲಕ ಯುದ್ಧದ ಭೀಕರತೆ, ರಾಜಕೀಯ ತಂತ್ರಗಳು ಮತ್ತು ಮಾನವೀಯ ಸಂಕಷ್ಟಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಹಲವು ಪ್ರಮುಖ ಅಂಶಗಳನ್ನು ವಿಡಂಬನೆ ಮೂಲಕ ಬಿಡಿಸಲಾಗಿದೆ. ಬದುಕಿನ ಸವಾಲುಗಳನ್ನು ಪಕ್ಕಕ್ಕಿಟ್ಟು ಧ್ಯೇಯಕ್ಕಾಗಿ ಬಾಬು ಅವರು ಸಾಗುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

ಕಾರ್ಟೂನ್ ಸೂಪರ್ ಹೀರೋ ‘ಆ್ಯಂಫಿಮ್ಯಾನ್’ ಬಿತ್ತಿಚಿತ್ರ ಬಿಡುಗಡೆ ಮಾಡಿದ ಸಮಾಜ ಸೇವಕ ಡಾ.ಕೆ.ರಘುರಾಂ ವಾಜಪೇಯಿ, ‘ವಿಶ್ವಕ್ಕೆ ಯುದ್ಧದ ಬದಲಾಗಿ ಶಾಂತಿ ಬೇಕಾಗಿದೆ ಎಂಬುದನ್ನು ವ್ಯಂಗ್ಯಚಿತ್ರಗಳ ಮೂಲಕ ವಿವರಿಸಲಾಗಿದೆ. ಯುದ್ಧದ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಶಾಂತಿಯ ಪರವಾಗಿ ನಿಲ್ಲಲು ಚಿತ್ರಗಳು ಪ್ರೇರೇಪಿಸುತ್ತವೆ’ ಎಂದರು.

ಶಿಲ್ಪ ಕಲಾವಿದ ಎಲ್.ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ವ್ಯಂಗ್ಯಚಿತ್ರಕಾರ ಎಂ.ವಿ.ನಾಗೇಂದ್ರ, ಬ್ಯಾಂಟರ್ ಬಾಬು ಪಬ್ಲಿಕೇಷನ್ನ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಆರ್.ಯೋಗನರಸಿಂಹನ್, ಕಾರ್ಯದರ್ಶಿ ಆರ್.ಚಕ್ರಪಾಣಿ, ಸಂಚಾಲಕ ಎನ್.ಅನಂತ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-39-1263610645

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.