ಮೈಸೂರು: ‘ಕಥೆಗಳು ನಮ್ಮ ಬದುಕಿನ ಭಾಗ. ಕೃತಕ ಬುದ್ಧಿಮತ್ತೆಯ ಈ ಕಾಲದಲ್ಲಿ ನಮ್ಮ ಮಕ್ಕಳಿಗೆ ಇಂತಹ ಕೃಷಿ ಹಾಗೂ ಜಾನಪದ ಕಥೆಗಳನ್ನು ಓದಿಸಬೇಕಿದೆ’ ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಹೇಳಿದರು.

ನಗರದ ಎಂಜಿನಿಯರ್ಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ತುಮಕೂರಿನ ಧಾನ್ಯ ಪ್ರಕಾಶನ ಹೊರತಂದಿರುವ, ಜಿ.ಕೃಷ್ಣಪ್ರಸಾದ್ ಮತ್ತು ಮಲ್ಲಿಕಾರ್ಜುನ ಹೊಸಪಾಳ್ಯ ಅವರ ‘ಭೂಮಿಗೆ ರಾಗಿ ಬಂದಿದ್ದು’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

‘ಮಣ್ಣೆಂದರೆ ಅಸ್ಪೃಶ್ಯತೆ ಅಲ್ಲ. ಇಂದು ಮಕ್ಕಳಿಗೆ ಪ್ರಕೃತಿಯನ್ನು ಅರ್ಥ ಮಾಡಿಸುವ ಕೆಲಸ ಆಗುತ್ತಿಲ್ಲ. ಹೀಗಾಗಿ ಇದನ್ನು ಚಿಣ್ಣರ ಮನಸ್ಸಿನಲ್ಲಿ ಬಿತ್ತಿ ಬೆಳೆಸಬೇಕಿದೆ. ಕಥೆಗಳನ್ನು ಕೇಳುವ ಮನಸ್ಸು ಹಾಗೂ ಲೋಕವನ್ನು ನಾವೆಲ್ಲರೂ ಸಿದ್ಧಪಡಿಸಬೇಕಿದೆ’ ಎಂದು ಆಶಿಸಿದರು.

‘ಈ ಕಾಲದ ಶೇ 25ರಷ್ಟು ಮಕ್ಕಳಿಗೆ ರಾಗಿ ಅಂಗಡಿಯಲ್ಲಿ ಸಿಗುತ್ತದೆ ಎಂಬುದಷ್ಟೇ ಗೊತ್ತು. ಅದೊಂದು ಬೆಳೆ ಎಂಬುದು ಗೊತ್ತಿಲ್ಲ. ಹಾಗಾಗಿ ಈ ಬಾರಿ ಚಿಣ್ಣರ ಮೇಳವನ್ನು ‘ಈ ಮಣ್ಣು ನಮ್ಮದು’ ಎಂಬ ಆಶಯದಲ್ಲಿ ನಡೆಸಲಾಗುತ್ತಿದೆ’ ಎಂದು ವಿವರಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕ ಆರ್. ಸಂತೋಷ್ ನಾಯಕ್, ‘ಭೂಮಿಗೆ ರಾಗಿ ಬಂದಿದ್ದು’ ಕೃತಿಯು ಕೃಷಿ ಮತ್ತು ಪರಿಸರ ಕುರಿತಾದ ಜನಪದ ಕಥೆಗಳ ಸಂಗ್ರಹ. 41 ಪುಟ್ಟ ಕಥೆಗಳು ಪುಸ್ತಕದಲ್ಲಿವೆ. ಜಾನಪದ ಕಥೆಗಳಲ್ಲಿ ಬದುಕಿನ ಸಾರವಿದ್ದು, ಅದನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಕಿವಿಮಾತು ಹೇಳಿದರು.

‘ಹಳ್ಳಿಗರು ತಮ್ಮ ಕೃಷಿಕದೃಷ್ಟಿಕೋನದಿಂದ ರಾಮಾಯಣ, ಮಹಾಭಾರತಗಳನ್ನು ನೋಡುವ ಬಗೆಯನ್ನೂ ಇಲ್ಲಿನ ಕೆಲವು ಕಥೆಗಳು ಕಟ್ಟಿಕೊಡುತ್ತವೆ’ ಎಂದರು.

ಲೇಖಕ ಜಿ. ಕೃಷ್ಣಪ್ರಸಾದ್, ‘ಪುಸ್ತಕದಲ್ಲಿನ ಹೆಚ್ಚಿನ ಕಥೆಗಳು ಎರಡೂವರೆ ದಶಕಗಳ ಹಿಂದೆ ಕರ್ನಾಟಕ-ತಮಿಳುನಾಡು ಗಡಿಭಾಗದ ಕಾಡು ಹಳ್ಳಿಗಳಲ್ಲಿ ನಾನು ಮತ್ತು ಮಲ್ಲಿಕಾರ್ಜುನ ಅವರು ಕೆಲಸ ಮಾಡುವಾಗ ಕೇಳಿದ ಹಾಗೂ ದಾಖಲಿಸಿದ ವಿಚಾರಗಳೇ ಆಗಿವೆ. ರಾಜ್ಯದ ಇತರೆ ಭಾಗಗಳ ಹಳ್ಳಿಗಾಡಿನ ಕೆಲವು ಕಥೆಗಳನ್ನೂ ಇಲ್ಲಿ ಕಾಣಬಹುದು’ ಎಂದು ತಿಳಿಸಿದರು.

‘ಮಕ್ಕಳಿಗೆ ರಾಗಿ ಕಥನಗಳು ಗೊತ್ತಾಗಬೇಕು. ಇಲ್ಲದಿದ್ದರೆ ಆ ತಳಿ ನಾಶವಾಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ನಮ್ಮ ಕೃಷಿ ಸಂಸ್ಕೃತಿ ಹಾಗೂ ನೆಲಮೂಲ ಕಥನಗಳು ದಾಖಲಾಗಬೇಕು’ ಎಂದು ಹೇಳಿದರು.

ಸಾಹಿತಿ ರೂಪಾ ಮಾಚಿಗಣಿ, ಲೇಖಕ ಮಲ್ಲಿಕಾರ್ಜುನ ಹೊಸಪಾಳ್ಯ ಇದ್ದರು.

ನಂತರ ಕೃತಿ ಕುರಿತು ನಡೆದ ಸಂವಾದದಲ್ಲಿ ಪರಿಸರ ಬಳಗದ ಪರಶುರಾಮೇಗೌಡ, ಬೆಳವಲ ರಾಮಕೃಷ್ಣಪ್ಪ, ಸರ್ವೋದಯ ಬಳಗದ ಲೀಲಾ ಶಿವಕುಮಾರ್, ‘ಪ್ರಜಾವಾಣಿ’ ಮೈಸೂರು ಬ್ಯೂರೋ ಮುಖ್ಯಸ್ಥ ಕೆ. ನರಸಿಂಹಮೂರ್ತಿ ಮಾತನಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-39-1118871973

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.