ಮೈಸೂರು: ‘ಚಿಣ್ಣರ ಕಲಾ ಪ್ರತಿಭೆಯನ್ನು ಅರಳಿಸುವ, ಪ್ರೋತ್ಸಾಹ ಕೊಡುವ ಕೆಲಸವನ್ನು ಪೋಷಕರು ಮಾಡಬೇಕು’ ಎಂದು ರಂಗಕರ್ಮಿ ಇಂದಿರಾ ನಾಯರ್ ಹೇಳಿದರು.

ನಗರದ ಹೊರವಲಯದ ಎಸ್ಬಿಎಂ ಬಡಾವಣೆಯ ‘ಚಾರು ಸಾಂಸ್ಕೃತಿಕ ಪ್ರತಿಷ್ಠಾನ’ದಲ್ಲಿ ಆಯೋಜಿಸಿದ್ದ ‘ಆಡೋಣ ಬಾ’ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ‘ಪ್ರತಿ ಮಗುವಿನ ಆಸಕ್ತಿಯನ್ನು ತಿಳಿಯಬೇಕು. ಕಲೆಯಲ್ಲಿ ತೊಡಗಿಸಿಕೊಂಡಿದ್ದರೆ ಅದರಲ್ಲಿ ಕೌಶಲ ಸಾಧಿಸಲು ನೆರವಾಗಬೇಕು. ಮಕ್ಕಳಿಗಾಗಿ ಸಮಯವನ್ನು ಕೊಡಬೇಕು’ ಎಂದರು.

ಶಿಬಿರದ ಸಂಚಾಲಕಿಯೂ ಆದ ರಂಗ ನಟಿ ರಾಜಲಕ್ಷ್ಮಿ ಕೆ. ಮೂರ್ತಿ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷೆ ಡಿ.ಶೀಲಾ ಕುಮಾರಿ, ಭೂಪತಿ, ಗಿರೀಶ್, ಭವ್ಯಾ, ವಿನುತಾ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-39-2069225973

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.