ಮೈಸೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಸಮಿತಿಯ ಮಕ್ಕಳ ಪ್ರಕಾರದ ವತಿಯಿಂದ ಮಕ್ಕಳ ಸಮಾವೇಶವನ್ನು ಭಾನುವಾರ ಇಲ್ಲಿನ ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಲಾಗಿತ್ತು.

ಪರಿಷದ್ ವಲಯ ಪ್ರಮುಖ್ ವಿ. ರಂಗನಾಥ್ ಉದ್ಘಾಟಿಸಿ ಮಾತನಾಡಿ, ‘ಭಾರತೀಯ ಸಂಸ್ಕೃತಿ, ಆಚಾರ, ವಿಚಾರ, ಪರಂಪರೆಯ ಮೌಲ್ಯಗಳನ್ನು ಪರಿಚಯಿಸುವ ಪ್ರಯತ್ನವಾಗಿ ಮಕ್ಕಳ ಸಮಾವೇಶ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಸಮಿತಿಯ ಅಧ್ಯಕ್ಷ ಎಸ್. ಸುಬ್ರಮಣ್ಯ, ‘ಶಾಲೆಗಳ ಪರಿಸರದಲ್ಲೇ ಮಕ್ಕಳ ಪ್ರಕಾರದ ಕಾರ್ಯಕ್ರಮಗಳನ್ನು, ಈಗಾಗಲೇ ನಗರದ ವಿವಿಧ ಬಡಾವಣೆಯಲ್ಲಿ ಯಶಸ್ವಿಯಾಗಿ ಸಾಹಿತ್ಯಕ ಚಟುವಟಿಕೆಗಳನ್ನು ನಡೆಸುತ್ತಿರುವ ಸಾಹಿತ್ಯ ಕೂಟಗಳಲ್ಲಿ ಮಕ್ಕಳ ಪ್ರಕಾರದ ಕಾರ್ಯಕ್ರಮ ರೂಪಿಸುವ ಪ್ರಯತ್ನ ನಡೆದಿದೆ’ ಎಂದರು.

ಗೀತಾ ಪಠಣ, ದೇಸಿ ಆಟಗಳು, ಹಾಡು, ಕಲಿಕೆ, ಕತೆ ಹೇಳುವ, ಕೇಳಿಸುವ ಕಲೆ, ಯೋಗ ಪ್ರಕಾರಗಳು, ಪೇಪರ್ ಕಲಾಕೃತಿಗಳ ರಚನೆ, ಸುಲಭ ವಿಜ್ಞಾನ ಪ್ರಯೋಗ ಮೊದಲಾದ ಚಟುವಟಿಕೆಗಳು ನಡೆದವು. 5ರಿಂದ 12 ವರ್ಷ ವಯಸ್ಸಿನ 20 ಮಕ್ಕಳು ಭಾಗವಹಿಸಿದ್ದರು. ಮಕ್ಕಳ ಸಮಿತಿಯ ಅಧ್ಯಕ್ಷ ಕೆ.ಎಲ್. ನಾಗರಾಜ್ ಹಾಗೂ ಸಮಿತಿಯ ಎಚ್.ಜಿ. ಜಗದೀಶ್, ಎಚ್.ವೈ. ಕಾತ್ಯಾಯಿನಿ, ತೇಜಸ್ವಿನಿ, ಕಾರ್ಯದರ್ಶಿ ಎಸ್. ಸುಬ್ರಮಣ್ಯ, ಜಿ. ಲಕ್ಷ್ಮಣ, ರಾಜಾರಾಮ್ ಭಟ್ ವಿಠೋಬ, ಜಯಮಾಲ, ವಿವಿಧ ಸಾಹಿತ್ಯ ಕೂಟ ಸಂಚಾಲಕರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-39-711939702

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.