ಮೈಸೂರು: ‘ಸಂಸ್ಕೃತಿಯನ್ನು ಸಂಭ್ರಮಕ್ಕೆ ಮಿತಿಗೊಳಿಸದೇ, ಅಧ್ಯಯನ ಜೊತೆಗೆ ದಾಖಲೀಕರಣ ಮಾಡಿ, ಮುಂದಿನ ಪೀಳಿಗೆಗೆ ದಾಟಿಸುವುದು ಹಾಗೂ ಜ್ಞಾನ ಪರಂಪರೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ’ ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಗಂಗಾಧರ್ ಪ್ರತಿಪಾದಿಸಿದರು.

ನಗರದ ಭಾರತೀಯ ಭಾಷಾ ಸಂಸ್ಥಾನದಲ್ಲಿ ‘ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ’, ‘ಆಂತ್ರೊಪೊಸ್ ಇಂಡಿಯಾ ಫೌಂಡೇಷನ್’ ಸಹಯೋಗದೊಂದಿಗೆ ಭಾನುವಾರ ಆರಂಭವಾದ ‘ಎಥ್ನೋಗ್ರಫಿ (ಕುಲಶಾಸ್ತ್ರೀಯ ಅಧ್ಯಯನ) ಮತ್ತು ಸಂಸ್ಕೃತಿ ದಾಖಲಾತಿ’ ಕುರಿತ ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಜಾಗತೀಕರಣ ಮತ್ತು ಆಧುನೀಕರಣವು ಜನರ ಜೀವನದ ಪ್ರತಿ ನಡೆಯನ್ನೂ ಪ್ರಭಾವಿಸುತ್ತಿದೆ. ಸಂಸ್ಕೃತಿ ಅಧ್ಯಯನ ಮತ್ತು ದಾಖಲೀಕರಣಕ್ಕೆ ಹಿಂದಿಗಿಂತಲೂ ಈಗ ಹೆಚ್ಚು ಪ್ರಾಮುಖ್ಯತೆ ಬಂದಿದೆ. ಸಂಸ್ಕೃತಿ ಕೇವಲ ಧಾರ್ಮಿಕತೆ, ಸಂಪ್ರದಾಯಗಳ ಪಾಲನೆ ಮಾತ್ರವಲ್ಲ. ಅದು ಮಾನವ ಅಸ್ತಿತ್ವದ ಕುರುಹು. ಮಾನವ ನಾಗರಿಕತೆಯನ್ನು ರೂಪಿಸುವಲ್ಲಿ ಸಂಸ್ಕೃತಿಯ ಪಾತ್ರ ಹಿರಿದಾಗಿದೆ. ಮೂಲ ಬೇರುಗಳನ್ನು ಕಡಿದುಕೊಳ್ಳದಂತೆ ಉಳಿಸುವ ಕಾರ್ಯ ಮಾಡಬೇಕಿದೆ’ ಎಂದರು.

ಪ್ರಭಾವ: ‘ವಿಶ್ವದ ಅನೇಕ ಸಂಸ್ಕೃತಿಗಳನ್ನು ಕಳೆದುಕೊಂಡಿದ್ದೇವೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವವು ನೆಲಮೂಲದ ಸ್ಥಳೀಯ ಸಂಸ್ಕೃತಿ ಹಾಗೂ ಭಾಷೆಯನ್ನು ಅಳಿಸುತ್ತಿದೆ. ನಾವು ನಮ್ಮ ನೆಲದ ದನಿಯನ್ನು ಕೇಳಿಸಿಕೊಳ್ಳಬೇಕು. ನಮ್ಮ ವೈವಿಧ್ಯ ಜ್ಞಾನ ಸಂಸ್ಕೃತಿಗಳನ್ನು ಅಧ್ಯಯನ ಮಾಡುವುದರಿಂದ ಒಳನೋಟಗಳು ಸಿಗಲಿವೆ. ಈ ನಿಟ್ಟಿನಲ್ಲಿ ದೇಸಿ ಭಾಷೆ, ಸಂಸ್ಕೃತಿಯನ್ನು ಉಳಿಸುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ, ಮುಂದಿನ ನೂರು ವರ್ಷಗಳಲ್ಲಿ ಬಹುಭಾಷಾ ಪರಂಪರೆ ಅಳಿದಿರುತ್ತದೆ’ ಎಂದು ಎಚ್ಚರಿಸಿದರು.

‘ಬೌದ್ಧಿಕ ವಲಯದ ಅಭ್ಯಾಸವಾಗಿ ಸಂಶೋಧನೆಗಳು ಉಳಿಯಬಾರದು. ನಮ್ಮ ನೆಲದ ಕಥೆಗಳನ್ನು ಕೇಳಿಸಿಕೊಳ್ಳುವ, ಉಳಿಸಿ ಮುಂದಿನ ಪೀಳಿಗೆಗೆ ಹೇಳುವ ಕಾರ್ಯವನ್ನು ಜನಾಂಗೀಯ ಅಧ್ಯಯನ ನಡೆಸುವ ಸಂಶೋಧಕರು ಮಾಡಬೇಕು’ ಎಂದು ಸಲಹೆ ನೀಡಿದರು.

ನಮ್ಮ ಆಸ್ತಿ: ‘ಭಾಷೆ, ಸಾಹಿತ್ಯ ಸೇರಿದಂತೆ ಮಾನವಿಕ ವಿಷಯಗಳಲ್ಲಿ ಅಧ್ಯಯನ ನಡೆಸುತ್ತಿರುವವರು ದೇಶದ ಅಸ್ಮಿತೆಯ ಆಸ್ತಿಗಳಾಗಿದ್ದಾರೆ. ಗುರಿಯೊಂದಿಗೆ ಕೆಲಸ ಮಾಡಬೇಕಿದೆ. ಜನ ಸಂಸ್ಕೃತಿಯಲ್ಲಿ ಅಡಕವಾಗಿರುವ ಜ್ಞಾನ, ಕಥನ, ಕಾವ್ಯ, ವಿಜ್ಞಾನ ಎಲ್ಲವನ್ನೂ ಹೆಕ್ಕಿ ಸಮಾಜಕ್ಕೆ ಆಸ್ತಿಯನ್ನು ಕೊಡುವ ಜವಾಬ್ದಾರಿ ಎಲ್ಲರದ್ದಾಗಿದೆ’ ಎಂದು ಗಂಗಾಧರ ಹೇಳಿದರು.

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರೊ.ಸುನಿತಾ ರೆಡ್ಡಿ, ಭೋಪಾಲದ ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದ ಪ್ರೊ.ಅಮಿತಾಬ್ ಪಾಂಡೆ, ಸುಕನ್ಯಾ ಗುಹಾ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-38-492980964

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.