ಮಡಿಕೇರಿ: ಮೈಸೂರಿನ ಕಿವುಡ ಮಕ್ಕಳ ಸರ್ಕಾರಿ ಪಾಠಶಾಲೆಯಲ್ಲಿ ಕಿವಿ ಕೇಳಿಸದ ಬಾಲಕರಿಗೆ ಉಚಿತ ವಸತಿಯುತ ಹಾಗೂ ಬಾಲಕಿಯರಿಗೆ ಬಾಹ್ಯ ವಿದ್ಯಾರ್ಥಿನಿಯಾಗಿ ಉಚಿತವಾಗಿ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಭೋಧನಾ ವ್ಯವಸ್ಥೆ ಕಲ್ಪಿಸಲಾಗಿದೆ.

2026-27ನೇ ಶೈಕ್ಷಣಿಕ ಸಾಲಿಗೆ ಒಂದನೇ ತರಗತಿಗೆ 5 ವರ್ಷ 10 ತಿಂಗಳಿಂದ 9 ವರ್ಷದೊಳಗಿನ ಕಿವಿ ಕೇಳಿಸದ ಬಾಲಕ, ಬಾಲಕಿಯರು, ವಿಕಲಚೇತನ ಕಾರಣದಿಂದ ಇದುವರೆಗೆ ಶಾಲೆಗೆ ದಾಖಲಾಗದವರನ್ನು ಹಾಗೂ ಈಗಾಗಲೇ ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಕಿವುಡ ಗಂಡು ಮಕ್ಕಳು ಬಯಸಿದ್ದಲ್ಲಿ ಅವರನ್ನು ಸಹ ದಾಖಲು ಮಾಡಿಕೊಳ್ಳಲಾಗುತ್ತದೆ. ಶೈಕ್ಷಣಿಕ ಅವಧಿಯಲ್ಲಿ ಸರ್ಕಾರದ ವತಿಯಿಂದ ಉಚಿತ ಊಟ, ವಸತಿ, ಹಾಸಿಗೆ, ಹೊದಿಕೆ, ಪಠ್ಯ ಪುಸ್ತಕಗಳು ಹಾಗೂ ವೈದ್ಯಕೀಯ ಮತ್ತಿತರ ಸೌಲಭ್ಯವನ್ನು ನೀಡಲಾಗುವುದು. ಈಗಾಗಲೇ ತರಗತಿಗಳು ಪ್ರಾರಂಭವಾಗಿದ್ದು, ಶಾಲೆಗೆ ದಾಖಲಾತಿ ಬಯಸುವ ವಿಶೇಷಚೇತನರು ನೇರವಾಗಿ ಶಾಲೆಗೆ ದಾಖಲಾಗಬಹುದು.

ಮಾಹಿತಿಗೆ ಅಧೀಕ್ಷಕರು, ಕಿವುಡ ಮಕ್ಕಳ ಸರ್ಕಾರಿ ಪಾಠಶಾಲೆ, ತಿಲಕ್ನಗರ, ಮೈಸೂರು, ದೂ: 0821-2494104, ಮೊ: 9886353368 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-51-2032425874

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.