ಮೈಸೂರು: ‘ಶಿಕ್ಷಣದಿಂದ ಸ್ವಾರ್ಥ ಮನೋಭಾವ ದೂರಾಗಿ ನಾವು, ನಮ್ಮದು, ನಮ್ಮ ಸಮಾಜ ಎಂಬ ಭಾವನಾತ್ಮಕ ಬದುಕು ನೆಲೆಯೂರಬೇಕು’ ಎಂದು ಆದಿಚುಂಚನಗಿರಿ ಪೀಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಮಾನಂದವಾಡಿ ರಸ್ತೆಯಲ್ಲಿರುವ ದಿ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ (ಎನ್ಐಇ) ಕಾಲೇಜಿನ ಸಭಾಂಗಣದಲ್ಲಿ ಗುರುವಾರ ‘ಟೆಕ್ನಿಕ್ಸ್-2026’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ ಇಂದಿನ ಮೊಬೈಲ್ ಯುಗದಲ್ಲಿ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದುವುದೇ ಸವಾಲು. ದೈಹಿಕ ಆರೋಗ್ಯಕ್ಕೆ ಸಾಂಸ್ಕೃತಿಕ ಚಟುವಟಿಕೆಗಳು ಪೂರಕ’ ಎಂದರು.

ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ‘ ವಿದ್ಯಾರ್ಥಿಗಳು ವಿನಯದಿಂದ ಬದುಕಿದರೆ ವಿದ್ಯೆ ನಮ್ಮನ್ನು ಎತ್ತರಕ್ಕೆ ಕರೆದೊಯ್ಯುತ್ತದೆ. ವಿದ್ಯೆ ನಮ್ಮ ಸಂಗಾತಿ ಇದ್ದಂತೆ’ ಎಂದರು.

ಶಾಸಕ ಜಿ.ಡಿ. ಹರೀಶ್ ಗೌಡ, ಇಸ್ಕಾನ್ ಕಾರ್ಯಕಾರಿ ಸಮಿತಿ ಸದಸ್ಯ ಸೌಮ್ಯರೂಪ ಕೃಷ್ಣ ದಾಸ್ ವಾತನಾಡಿದರು. ಸಿಐಎಸ್ಸಿಒನ ಸ್ವಪ್ನಾ ಜಾಧವ್, ಅನ್ನೊವ ಸಲ್ಯೂಷನ್ ಇಂಡಿಯಾದ ಉಪಾಧ್ಯಕ್ಷ ಎಂ.ಕಿರಣ್, ಎನ್ಐಇ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಎಂ.ಎಸ್.ರಂಗನಾಥ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-39-1557701302

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.