ಮೈಸೂರು: ‘ವಿದ್ಯಾರ್ಥಿಗಳು ನಿತ್ಯವೂ ಏನಾದರೊಂದು ಕೌಶಲ ಕಲಿಯಬೇಕು. ಅದು ಜೀವನಕ್ಕೆ ಉಪಯೋಗ ಆಗುವಂತಿರಬೇಕು. ಉದಾತ್ತ ಗುರಿ ಇಟ್ಟುಕೊಂಡು ಅದನ್ನು ತಲುಪಲು ಶ್ರಮಿಸಬೇಕು’ ಎಂದು ಚಲನಚಿತ್ರ ನಟಿ ಯಮುನಾ ಶ್ರೀನಿಧಿ ಸಲಹೆ ನೀಡಿದರು.

ಹೊರವಲಯದ ಹೆಬ್ಬಾಳ ವರ್ತುಲ ರಸ್ತೆಯಲ್ಲಿರುವ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಸಾಂಸ್ಕೃತಿಕ ಸಮಿತಿಯಿಂದ ಈಚೆಗೆ ಆಯೋಜಿಸಿದ್ದ ‘ಕಲಾವೈಭವ’ ಕಾಲೇಜಿನ 11ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿ ಜೀವನ ಭವಿಷ್ಯ ರೂಪಿಸಿಕೊಳ್ಳುವ ಅವಧಿಯಾಗಿದೆ. ಆಸಕ್ತಿಕರ ಕ್ಷೇತ್ರ ಮತ್ತು ವಿಷಯದಲ್ಲಿರುವ ಜ್ಞಾನ ಆಧರಿಸಿ ಗುರಿ ಇಟ್ಟುಕೊಳ್ಳಬೇಕು. ಅದನ್ನು ತಲುಪುವುದಷ್ಟೆ ಮುಖ್ಯವಾಗಬೇಕು. ಸಾಧನೆಗೆ ಸಮಯ ಮೀಸಲಿಡಬೇಕು’ ಎಂದು ಹೇಳಿದರು.

ಬಳಸಿಕೊಳ್ಳಿ: ‘ಮೊಬೈಲ್ ಫೋನ್ ಬಳಕೆಯನ್ನು ಗುರಿಯತ್ತ ಕರೆದೊಯ್ಯುವ ಮಾರ್ಗವನ್ನಾಗಿ ಮಾಡಿಕೊಳ್ಳಬೇಕು. ಅವಕಾಶ ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಮುಂದೆ ಬರಬೇಕು. ಕಾಲೇಜುಗಳಲ್ಲಿನ ಪಠ್ಯೇತರ ಚಟುವಟಿಕೆಗಳ ವೇದಿಕೆಗಳನ್ನು ಬಳಸಿಕೊಳ್ಳಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ವೂಡೇ ಪಿ. ಕೃಷ್ಣ ಮಾತನಾಡಿ, ‘ನಾವು ವಿದ್ಯಾರ್ಥಿಗಳಾಗಿದ್ದಾಗ ಪುಸ್ತಕಗಳನ್ನು ಓದುತ್ತಿದ್ದೆವು. ಈಗಿನದು ರೀಲ್ಸ್ ಯುಗವಾಗಿದೆ. ಸದಾ ಮೊಬೈಲ್ ಫೋನ್ನಲ್ಲಿ ಮುಳುಗುವುದು ಸರಿಯಲ್ಲ. ಜ್ಞಾನಾರ್ಜನೆಗೆ ಒತ್ತು ಕೊಡಬೇಕು’ ಎಂದು ಸಲಹೆ ನೀಡಿದರು.

ಸಾಧನೆ ಮಾಡಿದರೆ ಗುರುತಿಸ್ತಾರೆ: ‘ನಾವು ನಾವಾಗಿರಬೇಕು. ಹೊರಗಿನ ಅಲಂಕಾರದಿಂದ ಯಾರೂ ನಮ್ಮನ್ನು ಗುರುತಿಸುವುದಿಲ್ಲ, ಸಾಧನೆಯಿಂದ ಗುರುತಿಸುತ್ತಾರೆ. ಯಾವುದೇ ಗುರಿ ಇಲ್ಲದಿರುವುದೇ ಅಪರಾಧ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಆದ್ದರಿಂದ ನಮ್ಮ ಆಲೋಚನೆಗಳು, ಆಕಾಂಕ್ಷೆಗಳು ದೊಡ್ಡದಾಗಿರಬೇಕು. ಉದಾತ್ತ ಚಿಂತನೆ ಇಟ್ಟುಕೊಂಡಾಗ ಮಾತ್ರ ಜೀವನದಲ್ಲಿ ಸಾಧನೆ ಸಾಧ್ಯ’ ಎಂದರು.

ಕಲೆ ಮತ್ತು ಕ್ರೀಡೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಾದ ರುಚಿತಾ ರಾಜೇಶ್, ರಕ್ಷಿತಾ ಮತ್ತು ಸಚಿನ್ ಗೌಡ ಅವರನ್ನು ಅಭಿನಂದಿಸಲಾಯಿತು.

ಪ್ರಾಂಶುಪಾಲರಾದ ಸೌಮ್ಯಾ ಈರಪ್ಪ ಕೆ. ವಾರ್ಷಿಕ ವರದಿ ಮಂಡಿಸಿದರು. ರುಚಿತಾ ರಾಜೇಶ್ ಪ್ರಾರ್ಥಿಸಿದರು. ಯಶಸ್ವಿನಿ ಸ್ವಾಗತಿಸಿದರು. ಬಾಂಧವ್ಯ ವಂದಿಸಿದರು.

ಬಳಿಕ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ‘ಸಂಧ್ಯಾರಾಗ’ ಮತ್ತು ‘ಮದುವೆ ರಗಳೆ’ ನಾಟಕಗಳು ಗಮನಸೆಳೆದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-39-1982027675

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.