ಮೈಸೂರು: ನೀವು ಬಳಸಿದ ನಂತರವೂ ನೋಟ್ಪುಸ್ತಕಗಳಲ್ಲಿ ‘ಖಾಲಿ’ ಉಳಿಸಿದ ಪುಟಗಳನ್ನು ದೇಣಿಗೆ ನೀಡಿ, ಬಡ ಅಥವಾ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಭವಿಷ್ಯ ರೂಪಿಸುವುದಕ್ಕೆ ಸಹಕರಿಸಬಹುದಾದ ಅವಕಾಶವನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಕಲ್ಪಿಸಲಾಗಿದೆ.

ಇಲಾಖೆಯ ಮೈಸೂರು ಅಧಿಕಾರಿಗಳು, ಬಾಲ್ಯ ಫೌಂಡೇಷನ್ ಹಾಗೂ ಮೈಸೂರು ಅಥ್ಲೆಟಿಕ್ಸ್ ಕ್ಲಬ್ ಸಹಯೋಗದಲ್ಲಿ ‘ನೋಟ್ ಪುಸ್ತಕದಲ್ಲಿನ ಖಾಲಿ ಪುಟಗಳ ಸಂಗ್ರಹ’ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ಇದರಲ್ಲಿ, ಖಾಲಿ ಉಳಿದ ಪುಟಗಳನ್ನು ದೇಣಿಗೆ ಕೇಳಲಾಗುತ್ತಿದೆ. ಮರುಬಳಕೆಯ ಮೂಲಕ ಉಪಯೋಗಕ್ಕೆ ಬರುವಂತೆ ಮಾಡಲು ಉದ್ದೇಶಿಸಲಾಗಿದೆ. ಖಾಲಿ ಹಾಳೆಗಳ ಜೊತೆಗೆ ಇಡೀ ನೋಟ್ಪುಸ್ತಕಗಳನ್ನು ಮಾರದೇ ಅಥವಾ ಅನುಪಯುಕ್ತವಾಗಿಸದೇ ಬಳಕೆಗೆ ಕೊಡಬಹುದಾಗಿದೆ.

ಹಳೆಯ ನೋಟ್ ಪುಸ್ತಕಗಳಲ್ಲಿ ಬಳಕೆಯಾಗದೆ ಉಳಿದಿರುವ ಖಾಲಿ ಪುಟಗಳನ್ನು ಸಂಗ್ರಹಿಸಿ, ಅವುಗಳನ್ನು ರೀಬೈಂಡ್ ಮಾಡಿ, ಹೊಸ ಪುಸ್ತಕಗಳನ್ನಾಗಿ ಸಿದ್ಧಪಡಿಸಿ ಬಡ ವಿದ್ಯಾರ್ಥಿಗಳಿಗೆ ವಿತರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಅಭಿಯಾನದ ಹಾದಿಯನ್ನು ಇಲಾಖೆಯಿಂದ ತುಳಿಯಲಾಗಿದೆ.

ವಿದ್ಯಾಭ್ಯಾಸಕ್ಕೆ...: ನಗರವೂ ಸೇರಿದಂತೆ ಜಿಲ್ಲೆಯ ನಾಗರಿಕರು ತಮ್ಮ ಬಳಿಯಿರುವ ಇಂತಹ ಅನುಪಯುಕ್ತ ಪುಟಗಳ ಪುಸ್ತಕಗಳನ್ನು ಹತ್ತಿರದ ಗ್ರಂಥಾಲಯಗಳಲ್ಲಿರುವ ‘ಸಂಗ್ರಹ ಕೇಂದ್ರ’ಗಳಿಗೆ ತಲುಪಿಸುವ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬಹುದಾಗಿದೆ.

‘ಬಹಳಷ್ಟು ಮಕ್ಕಳು ಅವರ ಪೋಷಕರು ನೋಟ್ಪುಸ್ತಕಗಳಿಗೆ ಹಣ ಹೊಂದಿಸುವುದಕ್ಕೆ ಪರದಾಡುವುದನ್ನು ನೋಡಿದ್ದೇವೆ. ಇದೇ ವೇಳೆ, ಹಲವು ಮಕ್ಕಳು ಅಥವಾ ಶಾಲಾ–ಕಾಲೇಜು ವಿದ್ಯಾರ್ಥಿಗಳು ತೆಗೆದುಕೊಳ್ಳುವ ನೋಟ್ಪುಸ್ತಕಗಳಲ್ಲಿ ಎಲ್ಲ ಪುಟಗಳನ್ನೂ ಬರೆದು ಖಾಲಿ ಮಾಡಿರುವುದಿಲ್ಲ. ಒಂದಷ್ಟು ಪುಟಗಳನ್ನು ಉಳಿಸಿಯೇ ಉಳಿಸಿರುತ್ತಾರೆ. ಅಂತಹ ಪುಟಗಳನ್ನು ನಮಗೆ ನೀಡಿದರೆ, ನಾವು ಅವುಗಳನ್ನು ಸಂಗ್ರಹಿಸಿ ಇಂತಿಷ್ಟು ಪುಟಗಳ ನೋಟ್ಪುಸ್ತಕಗಳನ್ನಾಗಿ ಸಿದ್ಧಪಡಿಸಿ ಅಗತ್ಯವಿರುವ ಮಕ್ಕಳಿಗೆ ವಿತರಿಸಲಿದ್ದೇವೆ’ ಎಂದು ಸಾರ್ವಜನಿಕ ಗ್ರಂಥಾಲಯಗಳ ಇಲಾಖೆಯ ಉಪ ನಿರ್ದೇಶಕ ಬಿ. ಮಂಜುನಾಥ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಶಾಲೆಗಳಿಗೇ ಹೋಗಿ: ‘ಶಾಲೆ–ಕಾಲೇಜುಗಳು ಪುನರಾರಂಭಗೊಂಡ ನಂತರ ಗ್ರಂಥಾಲಯ ಇಲಾಖೆ, ಬಾಲ್ಯ ಫೌಂಡೇಷನ್ ಹಾಗೂ ಮೈಸೂರು ಅಥ್ಲೆಟಿಕ್ಸ್ ಕ್ಲಬ್ ತಂಡದಿಂದ ಅಭಿಯಾನ ತೀವ್ರಗೊಳಿಸಲಾಗುವುದು. ಶಾಲೆ–ಕಾಲೇಜುಗಳಿಗೆ ಹೋಗಿ ಜಾಗೃತಿ ಮೂಡಿಸಲಾಗುವುದು. ಮುಖ್ಯಶಿಕ್ಷಕರು, ಪ್ರಾಂಶುಪಾಲರು ಹಾಗೂ ಶಿಕ್ಷಕರಿಂದ ಹೇಳಿಸಲಾಗುವುದು. ಪ್ರಾರ್ಥನೆ ಸಂದರ್ಭದಲ್ಲಿ ತಿಳಿಸಲಾಗುವುದು. ಆಗ, ಹೆಚ್ಚಿನ ಖಾಲಿ ಹಾಳೆಗಳ ದೇಣಿಗೆಯನ್ನು ನಿರೀಕ್ಷಿಸಬಹುದಾಗಿದೆ’ ಎಂದು ಅವರು ಹೇಳಿದರು.

‘ನಗರದಲ್ಲಿ ಮಹಾನಗರಪಾಲಿಕೆಯ ಕಸ ಸಂಗ್ರಹಿಸುವ ವಾಹನಗಳಲ್ಲಿ ಆಡಿಯೊ ಹಾಕುವುದಕ್ಕೂ ಚಿಂತನೆ ನಡೆಸಲಾಗಿದೆ. ಹೆಚ್ಚಿನ ಮಕ್ಕಳನ್ನು ತಲುಪಿದರೆ, ಹೆಚ್ಚಿನ ಪುಟಗಳು ದೊರೆಯಲಿವೆ. ಆಗ ಹೆಚ್ಚಿನ ಪ್ರಮಾಣದಲ್ಲಿ ನೋಟ್ಪುಸ್ತಕಗಳನ್ನು ಸಿದ್ಧಪಡಿಸಿ, ಅಗತ್ಯವುಳ್ಳವರಿಗೆ ವಿತರಿಸಬಹುದಾಗಿದೆ. ಇದಕ್ಕಾಗಿ ಶಾಲೆಗಳ ಮೂಲಕವೇ ನೇರವಾಗಿ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಹಂತ ಹಂತವಾಗಿ ತೀರಾ ಅಗತ್ಯ ಇರುವವರಿಗೆ ಕೊಡಲಾಗುವುದು. ಜೂನ್ ಅಥವಾ ಜುಲೈನಲ್ಲಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜಿಸಲಾಗಿದೆ. ನಿರಂತರವಾಗಿ ಈ ಕಾರ್ಯಕ್ರಮ ಮಾಡುವುದಕ್ಕೆ ಯೋಜಿಸಲಾಗಿದೆ’ ಎನ್ನುತ್ತಾರೆ ಅವರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-39-2371922

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.