ಮೈಸೂರು: ‘ಬದಲಾದ ಜೀವನ ಶೈಲಿಯು ಸಂಬಂಧಗಳಲ್ಲಿ ಬಿರುಕು ಮೂಡಿಸಿದೆ’ ಎಂದು ಲೇಖಕ ಜಯಂತ ಕಾಯ್ಕಿಣಿ ಕಳವಳ ವ್ಯಕ್ತಪಡಿಸಿದರು.

ನಗರದ ವನರಂಗದಲ್ಲಿ ನಿರಂತರ ಫೌಂಡೇಷನ್ ಮತ್ತು ಅಭಿರುಚಿ ಪ್ರಕಾಶನದಿಂದ ಶನಿವಾರ ಆಯೋಜಿಸಿದ್ದ ರಂಗಕರ್ಮಿ ಪ್ರಸಾದ್ ಕುಂದೂರು ಅನುವಾದಿಸಿರುವ, ಮರಾಠಿ ನಾಟಕಕಾರ ಮಹೇಶ್ ಎಲಂಕುಂಚವಾರ್ ಅವರ ‘ಪಾರ್ಟಿ’ ನಾಟಕ ಬಿಡುಗಡೆ ಮಾತನಾಡಿದರು.

‘ಈಗಿನ ಯುವಕರು ಮನೆಯಲ್ಲೇ ಐರನ್ ಮಾಡಿದ ಬಟ್ಟೆ, ಚಪ್ಪಲಿ ಧರಿಸುತ್ತಾರೆ. ಹಳ್ಳಿಯಿಂದ ನಗರಕ್ಕೆ ಬರುವ ತಂದೆ– ತಾಯಿಯರು ಯುವಕರನ್ನು ನೋಡಿ ಹೆದರುವಂತಾಗಿದೆ. ಮಹೇಶ್ ಎಲಂಕುಂಚವಾರ್ ಅವರು 50 ವರ್ಷದ ಹಿಂದೆ ಬರೆದ ನಾಟಕ ಕೃತಿ ವರ್ತಮಾನದ ಪರಿಸ್ಥಿತಿಯನ್ನು ಹೇಳುತ್ತದೆ’ ಎಂದರು.

‘ಮನುಷ್ಯನ ನಿತ್ಯ ಜೀವನದಲ್ಲಿ ನಾಟಕವೂ ಒಂದು ಭಾಗ. ಇದೀಗ ಅಕ್ಷರ ರೂಪದಲ್ಲಿ ಬಂದಿರುವ ನಾಟಕ ಸಮಾಜದ ಪ್ರತಿಬಿಂಬ ಆಗಿದೆ. ಮಹೇಶ್ ಎಲಕುಂಚವಾರ್ ತಮ್ಮ ನಾಟಕಗಳಲ್ಲಿ ಅನಗತ್ಯ ಪದಗಳನ್ನು ಸೇರಿಸಲು ಇಷ್ಟಪಡುತ್ತಿರಲಿಲ್ಲ. ಆ ಸಂಭಾಷಣೆಗೆ ಎಷ್ಟು ಪದಗಳು ಅವಶ್ಯವೊ ಅಷ್ಟು ಮಾತ್ರ ಸೇರಿಸುತ್ತಿದ್ದರು’ ಎಂದರು.

ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಮಾತನಾಡಿ, ‘ನಗರ ಪ್ರದೇಶಗಳಲ್ಲಿ ಬದುಕುತ್ತಿರುವ ಸಭ್ಯ ಸಮಾಜ ಒಂಟಿತನದಿಂದ ಬಳಲುತ್ತಿದೆ. ಸಭ್ಯ ಸಮಾಜದ ಹಾವಭಾವಗಳನ್ನು ಗಮನಿಸುವ ತಳ ಸಮುದಾಯವು, ತಮ್ಮನ್ನು ಈ ವ್ಯವಸ್ಥೆಯಿಂದ ದೂರವಿಟ್ಟ ಸಮುದಾಯವನ್ನು ಸದಾ ಶಪಿಸುತ್ತದೆ’ ಎಂದು ಹೇಳಿದರು.

‘ಎಲಕುಂಚವಾರ್ ನಾಟಕವನ್ನು ಕನ್ನಡದ ನೆಲಕ್ಕೆ ಹೊಂದುವಂತೆ ಪ್ರಸಾದ್ ಕುಂದೂರು ಅನುವಾದಿಸಿರುವುದು ವಿಶೇಷ’ ಎಂದು ಶ್ಲಾಘಿಸಿದರು.

ರಂಗಕರ್ಮಿ ಚಿದಂಬರರಾವ್ ಜಂಬೆ, ಲೇಖಕ ಡಿ.ಎಸ್.ಚೌಗಲೆ, ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಪ್ರಕಾಶಕ ಅಭಿರುಚಿ ಗಣೇಶ್, ಅನುವಾದಕ ಪ್ರಸಾದ್ ಕುಂದೂರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-37-763761060

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.