ಮೈಸೂರು: ‘ಕನ್ನಡ ಭಾಷೆಯು ಸಾವಿನತ್ತ ಹೊರಳುತ್ತಿದೆ’ ಎಂದು ಸಾಹಿತಿ ಹಂಪ ನಾಗರಾಜಯ್ಯ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟವು ಇಲ್ಲಿನ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ನಿಚ್ಚಂ ಪೊಸತು’ ಹಾಗೂ ‘ಸರ್ವಕಾಲಕ್ಕೂ ಪಂಪ’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡಕ್ಕೆ ಹೊರಗಿನಿಂದ ಶತ್ರುಗಳಿಲ್ಲ, ನಮ್ಮೊಳಗೇ ಇದ್ದಾರೆ. ಪೋಷಕರು ಮಕ್ಕಳನ್ನು ಇತರ ಭಾಷೆಗಳ ಕಡೆಗೆ ಆಸಕ್ತಿ ತೋರುವಂತೆ ಮಾಡಿದರು. ನಮ್ಮ ಭಾಷೆಯ ಬಗ್ಗೆ ಅಭಿಮಾನ ಬೆಳೆಸದ್ದರಿಂದ ಕನ್ನಡವು ತುರ್ತುನಿಗಾ ಘಟಕದಲ್ಲಿದೆ’ ಎಂದು ವಿಶ್ಲೇಷಿಸಿದರು.

ಜನ ಬರುವ ಕಾಲವಿಲ್ಲ: ‘ಪ್ರಕಟಣೆ ನೋಡಿ ಕಾರ್ಯಕ್ರಮಕ್ಕೆ ಜನ ಸೇರುವ ಕಾಲ ಹೋಗಿದೆ. ರಾಜಕೀಯ ಪಕ್ಷಗಳಂತೆ ಲಾರಿಯಲ್ಲಿ ಜನ ಕರೆದುಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕನ್ನಡದ ಅಮೃತಕಲಶದ ಅಮೃತ ಕರಗುತ್ತಿದೆ’ ಎಂದರು.

‘ಆಡು ಭಾಷೆಯಾಗಿದ್ದ ಕನ್ನಡವನ್ನು ಕಾವ್ಯ ಹಾಗೂ ಅಸ್ಥಾನದ ಭಾಷೆಯಾಗಿಸಿದ್ದು ಪಂಪ. ಆತನ ಧಾರಣ ಶಕ್ತಿ, ಸೃಜನಶೀಲತೆ ಇತರರಿಗೆ ಮಾದರಿ. ಕನ್ನಡ ಕವಿಗಳ ಪ್ರಭಾವ ವಲಯ ವಿಸ್ತೃತವಾದುದು. ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸವಾಗಬೇಕು’ ಎಂದು ಅವರು ಸಲಹೆ ನೀಡಿದರು.

ನಿವೃತ್ತ ಕುಲಪತಿ ಪದ್ಮಾ ಶೇಖರ್ ಮಾತನಾಡಿ, ‘ಹಂಪನಾ ಸಾಂಸ್ಕೃತಿಕವಾಗಿ ಶ್ರೀಮಂತ ವ್ಯಕ್ತಿ. ಅವರ ಬದುಕೇ ಪಠ್ಯ. ಕುವೆಂಪು ಅವರಿಂದ ಕನ್ನಡದ ದೀಕ್ಷೆ ಪಡೆದು ಕನ್ನಡದ ತೇರು ಎಳೆದಿದ್ದಾರೆ. ಹೊಸತರ ಕಡೆ ದೃಷ್ಟಿ ಹರಿಸುವ ಗುಣ ಅವರನ್ನು ಸದಾ ಕ್ರೀಯಾಶೀಲರನ್ನಾಗಿಸಿದೆ. ಅವರ ಕೆಲಸ ಪರಿಗಣಿಸಿ ಜ್ಞಾನಪೀಠ ಪ್ರಶಸ್ತಿ ಬರಬೇಕಿದೆ’ ಎಂದರು.

ಸಾಹಿತಿ ಕೆ.ಸಿ. ಶಿವಪ್ಪ, ಮೈಸೂರು ಲೇಖಕಿಯರ ಸಂಘದ ಅಧ್ಯಕ್ಷೆ ಉಷಾ ನರಸಿಂಹನ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಉಪಾಧ್ಯಕ್ಷೆ ಹಾ.ವೀ.ಮಂಜುಳಾ ಶಿವಾನಂದ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-39-155845020

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.