ಮೈಸೂರು: ‘ನಶಿಸುತ್ತಿರುವ ಪ್ರಾಣಿ, ಪಕ್ಷಿಗಳ ಗುಂಪಿಗೆ ಕನ್ನಡ ಮಾಧ್ಯಮ ಶಾಲೆಗಳು ಸೇರುತ್ತಿವೆ. ಗ್ರಾಮೀಣ ಹಾಗೂ ಗಡಿಭಾಗಗಳಲ್ಲಿ ಇರುವ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಓದಿದವರಿಗೆ ಉದ್ಯೋಗ ನೇಮಕಾತಿಯಲ್ಲಿ ಶೇ 10ರಷ್ಟು ಗ್ರಾಮೀಣ ಕೃಪಾಂಕ ನೀಡಬೇಕು’ ಎಂದು ಲೇಖಕ ದೇವನೂರ ಮಹಾದೇವ ಕೋರಿದರು.

ಇಲ್ಲಿನ ತಮ್ಮ ಮನೆಗೆ ಶನಿವಾರ ಬಂದು ಭೇಟಿಯಾದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಮಾತನಾಡಿ, ‘ಇಂತಹ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿಕೊಳ್ಳಬೇಕೆಂದರೆ ಕೃಪಾಂಕ ಒಂದೇ ದಾರಿ. ಅದರೊಂದಿಗೆ ಈ ಶಾಲೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲಗಳನ್ನೂ ಕಲ್ಪಿಸಬೇಕು’ ಎಂದು ಅಭಿಪ್ರಾಯಪಟ್ಟರು.

‘ಕೆಪಿಎಸ್ಗಳಲ್ಲಿ ಪ್ರಾಥಮಿಕ ಹಂತದಲ್ಲೇ ವಿದ್ಯಾರ್ಥಿಗಳಿಗೆ ಸರಳ ವಿಧಾನದಲ್ಲಿ ಸ್ಪೋಕನ್ ಇಂಗ್ಲಿಷ್ ಹೇಳಿಕೊಟ್ಟು ಧೈರ್ಯ ತುಂಬಬೇಕು. ಅದಕ್ಕಾಗಿ ಪರಿಣತರನ್ನು ನೇಮಿಸಬೇಕು. ಇಂಗ್ಲಿಷ್ ಮಾತನಾಡಲು ಕಲಿತ ನಂತರವೇ ವ್ಯಾಕರಣ ಬೋಧಿಸಬೇಕು. ಕನ್ನಡ ಮಾತನಾಡಲು ಗೊತ್ತಿದ್ದರೂ ಅನೇಕರಲ್ಲಿ ವ್ಯಾಕರಣ ಸಮಸ್ಯೆ ಇದೆ. ಹೀಗಾಗಿ ವಿಶೇಷ ಪರಿಕರ ಬಳಸಿ ಕಲಿಸಿ’ ಎಂದು ಸಲಹೆ ನೀಡಿದರು.

ವೈಜ್ಞಾನಿಕ ಮನೋಭಾವ ಬೆಳೆಸಿ: ‘ಎಳವೆಯಲ್ಲೇ ವೈಜ್ಞಾನಿಕ ಮನೋಭಾವ ಬೆಳೆಸಲು ವಿಜ್ಞಾನದ ಸಂಶೋಧನೆಗಳನ್ನು, ಸಂವಿಧಾನದ ಪ್ರಸ್ತಾವನೆ, ಪರಿಕಲ್ಪನೆಯನ್ನು ಕಥೆ ರೂಪದಲ್ಲಿ ಹೇಳಬೇಕು. ಸ್ವಾತಂತ್ರ್ಯ ಹೋರಾಟದ ಸತ್ಯ ಕಥೆಯನ್ನು ತಿಳಿಸಬೇಕು. ನಾಟಕ, ಸಂಗೀತ- ಹಾಡುಗಾರಿಕೆ ಕಲಿಸಲು ಪರಿಣತ ಶಿಕ್ಷಕರನ್ನು ನೇಮಿಸಬೇಕು’ ಎಂದು ಸಲಹೆ ಮಾಡಿದರು.

‘ಎಲ್ಲಾ ಜಾತಿಗಳ ಮಕ್ಕಳೂ ಒಂದೇ ಕಡೆ ಓದುವುದೇ ನಿಜವಾದ ಶಿಕ್ಷಣ. ಪ್ರಾಥಮಿಕ ಹಂತದಲ್ಲಿ ಮಕ್ಕಳ ಕುತೂಹಲ ಪ್ರವೃತ್ತಿಗೆ ಪೂರಕವಾಗಿ ಪಠ್ಯ ರಚನೆ ಆಗಬೇಕು. ಶಾಲೆಗಳ ವಿಲೀನದಿಂದ ಖಾಲಿಯಾಗುವ ಕಟ್ಟಡಗಳನ್ನು ಖಾಸಗಿ ವ್ಯಕ್ತಿಗಳಿಗೆ, ತಕರಾರು ವ್ಯಾಜ್ಯ ಮಾಡುವವರಿಗೆ, ಧಾರ್ಮಿಕ ಸಂಘಟನೆಗಳಿಗೆ ನೀಡದೆ ಸಮಾಜಮುಖಿ ಕಾರ್ಯಗಳಿಗೆ ನೀಡಬೇಕು’ ಎಂದರು.

ಮೀಸಲಾತಿ ಪಾಲಿಸಿ: ‘ಅಲೆಮಾರಿ ಮಕ್ಕಳ, ಗುಳೆ ಹೋಗುವವರ ಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ವಸತಿ ಶಾಲೆ ನಿರ್ಮಿಸಬೇಕು. ಅವರು ಎಲ್ಲೇ ಹೋದರೂ ಯಾವುದೇ ಶಾಲೆಯಾದರೂ ಆ ಮಕ್ಕಳಿಗೆ ಆದ್ಯತೆ ನೀಡುವಂತೆ ಕ್ರಮ ವಹಿಸಬೇಕು. ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರನ್ನು ನೇಮಿಸಿ, ಅಲ್ಲೂ ಮೀಸಲಾತಿ ಅನ್ವಯಿಸಬೇಕು’ ಎಂದರು.

ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ‘ಗ್ರಾಮೀಣ ಕೃಪಾಂಕ ನೀಡುವುದು ಉತ್ತಮ ಯೋಚನೆ. ಈ ಕುರಿತು ಇಲಾಖೆ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ, ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸುವ ಬಗ್ಗೆ ತೀರ್ಮಾನಿಸುತ್ತೇನೆ. ನಿಮ್ಮ ಸಲಹೆಗಳನ್ನು ಕೆಪಿಎಸ್ ಶಿಕ್ಷಣ ಕ್ರಮದಲ್ಲಿ ಅಳವಡಿಸುತ್ತೇನೆ’ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-51-1670605786

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.