ಮೈಸೂರು: ಜಿಲ್ಲೆಯ ಸರಗೂರು ತಾಲ್ಲೂಕಿನ ಬಿ.ಮಟಕೆರೆ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ವಿದ್ಯಾರ್ಥಿಗಳಿಗೆ ಸೂಕ್ತ ಸಾರಿಗೆ ಸೌಲಭ್ಯವಿಲ್ಲದೇ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದ್ದು, ಶಾಲಾ ಸಮಯಕ್ಕೆ ಸರಿಹೊಂದುವಂತೆ ಕೆಎಸ್ಆರ್ಟಿಸಿ ಬಸ್ಗಳ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಶಾಲೆಯ ಎಸ್ಡಿಎಂಸಿ ಸದಸ್ಯರು, ಸಿಬ್ಬಂದಿ, ಪೋಷಕರು ಒತ್ತಾಯಿಸಿದ್ದಾರೆ.

ಶಾಸಕ ಅನಿಲ್ ಚಿಕ್ಕಮಾದು, ಕೆಎಸ್ಆರ್ಟಿಸಿ ಎಚ್.ಡಿ.ಕೋಟೆ ಘಟಕ ವ್ಯವಸ್ಥಾಪಕರಿಗೆ ಶನಿವಾರ ಮನವಿ ಸಲ್ಲಿಸಿರುವ ಪ್ರಾಂಶುಪಾಲ ಸಂತೋಷ್ ಚೊಕ್ಕಾಡಿ, ‘2017–18ರಲ್ಲಿ ಕೆ.ಪಿ.ಎಸ್ ಶಾಲೆಯಾಗಿ ಮೇಲ್ದರ್ಜೆಗೊಂಡು ಪ್ರಸ್ತುತ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯು ವಿಭಾಗಗಳಲ್ಲಿ ಸುಮಾರು 600ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅರಣ್ಯ ಪ್ರದೇಶವಾಗಿದ್ದು, ವನ್ಯಪ್ರಾಣಿಗಳ ಉಪಟಳವಿದೆ. ಸುಮಾರು 30 ಹಳ್ಳಿಗಳು, ಗಿರಿಜನ ಹಾಡಿಗಳಿಂದ ಶಾಲೆಗೆ ಬರುವ ವಿದ್ಯಾರ್ಥಿಗಳು ಆತಂಕದಿಂದ ಬರುವಂತಾಗಿದೆ’ ಎಂದು ವಿವರಿಸಿದ್ದಾರೆ.

ಕಾಟವಾಳು, ನೆಮ್ಮನಹಳ್ಳಿ, ನಡಾಡಿ ಮಾರ್ಗದಲ್ಲಿ ಬಸ್ಗಳೇ ಇಲ್ಲ. ಉಳಿದ ಮಾರ್ಗಗಳಲ್ಲಿ ಬಸ್ಗಳ ಸೌಲಭ್ಯವಿದ್ದರೂ ಶಾಲಾ ಸಮಯಕ್ಕೆ ಸರಿಯಾಗಿ ಇಲ್ಲದ್ದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ದಾಖಲಾತಿ ಕುಂಠಿತ, ಗೈರುಹಾಜರು ಹೆಚ್ಚಾಗಿ ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಶಾಲೆಯ ಸಮೀಪದ ಗ್ರಾಮಗಳ ವಿದ್ಯಾರ್ಥಿಗಳು ಬಸ್ ಸಮಸ್ಯೆಯಿಂದ ದೂರದ ಸರಗೂರು, ಎಚ್.ಡಿ.ಕೋಟೆಯ ಶಾಲಾ ಕಾಲೇಜುಗಳಿಗೆ ತೆರಳುವಂತಾಗಿದೆ.

‘ಸರಗೂರಿನಿಂದ ಮೊಳೆಯೂರು ಮಾರ್ಗವಾಗಿ ಹಂಚೀಪುರ, ದೇವಲಾಪುರ, ಬಿ.ಮಟಕೆರೆ ಮಾರ್ಗವಾಗಿ ಕಾಟವಾಳು, ನೆಮ್ಮನಹಳ್ಳಿ, ನಡಾಡಿ, ಚಿಕ್ಕಬರಗಿ ಮಾರ್ಗವಾಗಿ ಬಿ.ಮಟಕೆರೆ, ಕುರ್ಣೇಗಾಲ ಮಾರ್ಗವಾಗಿ ಬಿ.ಮಟಕೆರೆಯನ್ನು ಶಾಲಾ ಸಮಯದಲ್ಲಿ ಬಸ್ಗಳು ಸಂಪರ್ಕಿಸುವಂತೆ ಕ್ರಮವಹಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಮನವಿ ವೇಳೆ ಉಪ ಪ್ರಾಂಶುಪಾಲ ಮಾರುತಿ ಗೌಡ, ಅತಿಥಿ ಉಪನ್ಯಾಸಕ ಶಾಂತಯ್ಯ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-38-1488343287

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.