ಮೈಸೂರು: ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ 22ನೇ ನಿರ್ದೇಶಕರಾಗಿ ಪ್ರೊ.ನಂಜಯ್ಯ ಹೊಂಗನೂರು ಮಂಗಳವಾರ ಅಧಿಕಾರ ಸ್ವೀಕರಿಸಿದರು.

ಪ್ರಸಾರಾಂಗದ ನಿರ್ದೇಶಕರಾಗಿದ್ದಅವರು, ಪ್ರೊ.ಎನ್.ಕೆ.ಲೋಲಾಕ್ಷಿ ಅವರ ಅವಧಿ ಪೂರ್ಣಗೊಂಡ ಕಾರಣ ಮಾತೃಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡರು.

‘ಕುವೆಂಪು, ದೇಜಗೌ, ಹಾಮಾನಾ, ಜೀಶಂಪ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇಂಥ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಭಯ ಮತ್ತು ಜವಾಬ್ದಾರಿ ಇರುತ್ತದೆ. ಪ್ರಸಾರಾಂಗ ನಿರ್ದೇಶಕರಾಗಿ ನಂಜಯ್ಯ ಅನೇಕ ಕೆಲಸ ಮಾಡಿದ್ದಾರೆ. ಶಕ್ತವಾದ ನಿರ್ದೇಶಕರು ಸಂಸ್ಥೆಗೆ ಸಿಕ್ಕಿದ್ದಾರೆ’ ಎಂದು ಪ್ರೊ.ಎನ್.ಕೆ.ಲೋಲಾಕ್ಷಿ ಹೇಳಿದರು.

ಜಾಲತಾಣ ರಚನೆ: ‘ಸಂಸ್ಥೆಯ ಜಾಲತಾಣ ಮತ್ತು ಲೋಗೊವನ್ನು ಶೀಘ್ರ ರಚಿಸಿಲಾಗುವುದು’ ಎಂದು ಪ್ರೊ.ನಂಜಯ್ಯ ಹೊಂಗನೂರು ಹೇಳಿದರು.

‘ಜಾಗತಿಕ ಮಟ್ಟದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಶ್ರೇಷ್ಠವಾದ ಕೆಲಸಗಳು ತಿಳಿಸಲು ವೆಬ್ಸೈಟ್ ಅಗತ್ಯವಾಗಿ ರೂಪಿಸಬೇಕಾಗಿದೆ. ಇದೇ ಡಿಸೆಂಬರ್ಗೆ 60ನೇ ವರ್ಷದ ಆಚರಣೆಯಿದ್ದು, ಪುಸ್ತಕ ಹೊರತರಲಾಗುವುದು’ ಎಂದರು.

ಸಂಸ್ಥೆ ಅಧೀಕ್ಷಕಿ ಹೇಮಲತಾ, ಪ್ರೊ.ಶಶಿಕಲಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-39-1563627690

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.