ಮೈಸೂರು: ‘ಕರ್ನಾಟಕವು ದೇಶದಲ್ಲೇ ಹೆಲ್ತ್ ಹಬ್ ಆಗಿ ಹೊರಹೊಮ್ಮಿದ್ದು, ಇದರಲ್ಲಿ ಸರ್ಕಾರದ ಜೊತೆಗೆ ಖಾಸಗಿ ಸಂಸ್ಥೆಗಳ ಪಾಲು ದೊಡ್ಡದಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ನಗರದ ಜೆಎಸ್ಎಸ್ ಆಸ್ಪತ್ರೆಯಲ್ಲಿ ಭಾನುವಾರ ವಿವಿಧ ಯಂತ್ರೋಪಕರಣಗಳ ಉದ್ಘಾಟನೆ, ತಾಯಿ ಎದೆ ಹಾಲಿನ ಬ್ಯಾಂಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ವರ್ಷಕ್ಕೆ 1.15 ಲಕ್ಷ ಮೆಡಿಕಲ್ ಸೀಟುಗಳು ಲಭ್ಯವಿದ್ದು, ಇದರಲ್ಲಿ ಕರ್ನಾಟಕ ಒಂದರಲ್ಲಿಯೇ 14ಸಾವಿರದಷ್ಟು ಸೀಟುಗಳಿವೆ. 71 ಮೆಡಿಕಲ್ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ದೇಶ ಹಾಗೂ ಪ್ರಪಂಚಕ್ಕೆ ಗುಣಮಟ್ಟದ ವೈದ್ಯರು ಹಾಗೂ ಸಿಬ್ಬಂದಿಯನ್ನು ನೀಡುತ್ತಿವೆ’ ಎಂದು ವಿವರಿಸಿದರು.

ಅವಕಾಶ: ‘1960ರ ದಶಕದಲ್ಲಿ ಸರ್ಕಾರ ಮೆಡಿಕಲ್, ಎಂಜಿನಿಯರಿಂಗ್ನಂತಹ ವೃತ್ತಿಪರ ಕೋರ್ಸ್ಗಳ ಆರಂಭಕ್ಕೆ ಖಾಸಗಿ ಸಂಸ್ಥೆಗಳಿಗೂ ಅವಕಾಶ ನೀಡಿದ್ದು, ಇದರಿಂದ ರಾಜ್ಯದಲ್ಲಿ ವೈದ್ಯಕೀಯ ಕ್ರಾಂತಿ ಸಾಧ್ಯವಾಗಿದೆ. ಜೆಎಸ್ಎಸ್, ಕೆಎಲ್ಇ ಅಂತಹ ಸಂಸ್ಥೆಗಳು ಉತ್ತಮ ಸೇವೆ ನೀಡುತ್ತ ಬಂದಿವೆ’ ಎಂದು ಶ್ಲಾಘಿಸಿದರು.

‘ಮುಂದಿನ 5–10 ವರ್ಷದಲ್ಲಿ ರಾಜ್ಯದ ಜನರಿಗೆ ಸಾರ್ವತ್ರಿಕ ಆರೋಗ್ಯ ಸೇವೆ ಒದಗಿಸುವ ಆಶಯದೊಂದಿಗೆ ಸರ್ಕಾರ ಪ್ರತಿ ಜಿಲ್ಲೆಯಲ್ಲೂ ಮೆಡಿಕಲ್ ಕಾಲೇಜುಗಳನ್ನು ತೆರೆಯುತ್ತಿದೆ. ಈವರೆಗೆ ಇಂತಹ 22 ಕಾಲೇಜುಗಳು ಆರಂಭಗೊಂಡಿವೆ. ಇದರಿಂದ ಬಡ ಕುಟುಂಬಗಳ ಪ್ರತಿಭಾನ್ವಿತರಿಗೆ ಅವಕಾಶದ ಜೊತೆಗೆ ಪ್ರತಿ ಜಿಲ್ಲೆಯಲ್ಲಿ ಉಚಿತವಾದ ಗುಣಮಟ್ಟದ ಆರೋಗ್ಯ ಸೇವೆ ಸಿಗಲಿದೆ. ಜೊತೆಗೆ ಸೂಪರ್ ಸ್ಪೆಷಾಲಿಟಿ, ಕ್ಯಾನ್ಸರ್ ಹಾಗೂ ಟ್ರಾಮಾ ಕೇಂದ್ರಗಳನ್ನೂ ತೆರೆಯಲಾಗುತ್ತಿದೆ’ ಎಂದರು.

ಸುತ್ತೂರು ಮಠದಿಂದ: ಶಾಸಕ ಟಿ.ಎಸ್. ಶ್ರೀವತ್ಸ, ‘ಸರ್ಕಾರ ಮಾಡಲಾಗದ ಕೆಲಸವನ್ನು ಸುತ್ತೂರು ಮಠ ಹಾಗೂ ಜೆಎಸ್ಎಸ್ ಆಸ್ಪತ್ರೆ ಮಾಡುತ್ತಿದೆ’ ಎಂದು ಶ್ಲಾಘಿಸಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿಗಳ ದೇಹ ಸಂಸ್ಕಾರಕ್ಕೆ ಅವಶ್ಯವಾದ ಒಂದು ಯಂತ್ರಕ್ಕೆ ಸರ್ಕಾರವನ್ನು ಕೋರಿರುವೆ’ ಎಂದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ, ‘ಸುತ್ತೂರು ಮಠ ಶಿಕ್ಷಣ, ದಾಸೋಹದ ಜೊತೆಗೆ ಆರೋಗ್ಯ ಸೇವೆಯನ್ನೂ ನೀಡುತ್ತಾ ಬಂದಿದೆ. ಜನಸಾಮಾನ್ಯರಿಗೆ ನಿಲುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುತ್ತಿದೆ’ ಎಂದು ಶ್ಲಾಘಿಸಿದರು.

ಆಸ್ಪತ್ರೆ ಆವರಣದಲ್ಲಿ ನೂತನ ಕ್ಯಾತ್ ಲ್ಯಾಬ್, ಎಐ ಆಧಾರಿತ ಸಿಟಿ ಸ್ಕ್ಯಾನರ್, ₹9 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಿದ ಎಂಆರ್ಐ, ನರಶಸ್ತ್ರಚಿಕಿತ್ಸಾ ಯಂತ್ರಗಳ ಸೇವೆಗೂ ಈ ವೇಳೆ ಚಾಲನೆ ನೀಡಲಾಯಿತು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್ಎಸ್ ಮಹಾವಿದ್ಯಾಪೀಠ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್, ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಮ ಕುಲಾಧಿಪತಿ ಬಿ. ಸುರೇಶ, ಕುಲಪತಿ ಡಾ.ಬಸವನಗೌಡಪ್ಪ, ಜೆಎಸ್ಎಸ್ ಆಸ್ಪತ್ರೆ ನಿರ್ದೇಶಕ ಸಿ.ಪಿ. ಮಧು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-38-737565904

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.