ಮೈಸೂರು: ‘ರಾಷ್ಟ್ರ ನಿರ್ಮಾಣದಲ್ಲಿ ಸಮಾಜದ ಸಂಸ್ಥೆಗಳು, ಉದ್ಯಮ ವಲಯ, ಸರ್ಕಾರ ಹಾಗೂ ಸಮುದಾಯಗಳ ಸಹಭಾಗಿತ್ವ ಅತ್ಯಗತ್ಯ’ ಎಂದು ನೀತಿ ಆಯೋಗದ ಸದಸ್ಯ ಆರ್.ಬಾಲಸುಬ್ರಹ್ಮಣ್ಯಂ ಹೇಳಿದರು.

ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ (ಎಸ್ವಿವೈಎಂ) ಹಾಗೂ ಗ್ರಾಸ್ರೂಟ್ಸ್ ರಿಸರ್ಚ್ ಅಂಡ್ ಅಡ್ವೊಕೆಸಿ ಮೂವ್ಮೆಂಟ್ (ಗ್ರಾಮ್) ಸಂಸ್ಥೆಯಿಂದ ಇಲ್ಲಿನ ವಿವೇಕ ಸ್ಮಾರಕ ಭವನದಲ್ಲಿ ಶನಿವಾರ ನಡೆದ ‘ರಾಷ್ಟ್ರ ನಿರ್ಮಾಣದಲ್ಲಿ ತಳಮಟ್ಟದ ನಾಯಕತ್ವದ ಸಂಭ್ರಮ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳೊಂದಿಗೆ ನಾಲ್ಕು ದಶಕಗಳ ಸೇವಾ ಅನುಭವವಿದೆ. ಇಲ್ಲಿನ ಜ್ಞಾನವನ್ನು ರಾಷ್ಟ್ರೀಯ ನೀತಿ ರೂಪಿಸುವಲ್ಲಿ ಬಳಸುವ ಮೂಲಕ ಸಮಗ್ರ ಅಭಿವೃದ್ಧಿ ಸಾಧಿಸಬಹುದು’ ಎಂದರು.

ರಂಗರಾವ್ ಅಂಡ್ ಸನ್ಸ್ ಸಂಸ್ಥೆಯ ಆರ್. ಗುರು, ಕಾಡುಕುರುಬ ಬುಡಕಟ್ಟು ಜನಾಂಗದ ಮುಖ್ಯಸ್ಥ ಮುದಲಿ ಮಾದಯ್ಯ, ಎಸ್ವಿವೈಎಂ ಅಧ್ಯಕ್ಷ ಸುಧೀರ್ ಬಿ. ಬೆಂಗಳೂರು ಹಾಗೂ ಗ್ರಾಮ್ ಸಂಸ್ಥೆ ಟ್ರಸ್ಟಿ ಜೆ.ಪುರುಷೋತ್ತಮ್ ಅನಿಸಿಕೆ ಹಂಚಿಕೊಂಡರು. ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಅಧ್ಯಕ್ಷತೆ ವಹಿಸಿದ್ದರು.

‘ಮೈಸೂರು 2050’ ಬಗ್ಗೆ ಸಂವಾದ ಏರ್ಪಡಿಸಲಾಗಿತ್ತು. ‘ಗ್ರಾಮ್’ ಸಂಸ್ಥೆಯ ಕಾರ್ಯನಿರ್ವಹಣಾ ನಿರ್ದೇಶಕಬಸವರಾಜು ಆರ್. ಶ್ರೇಷ್ಠ ನಡೆಸಿಕೊಟ್ಟರು. ವಿಶ್ರಾಂತ ಕುಲಪತಿ ಪ್ರೊ.ನಿರಂಜನ ವಾನಳ್ಳಿ, ಎಸ್ವಿವೈಎಂ ಸಿಇಒ ಸವಿತಾ ಸುಳುಗೋಡು, ಎಂ.ಆರ್. ಸೀತಾರಾಂ, ಎಂ.ಎ. ಬಾಲಸುಬ್ರಹ್ಮಣ್ಯ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-39-450332429

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.