ಮೈಸೂರು: ‘ಪುಸ್ತಕಗಳ ಓದಿನಿಂದ ಕಲ್ಪನಾ ಶಕ್ತಿ ಹೆಚ್ಚುತ್ತದೆ, ವಿಷಯ ವಿಶ್ಲೇಷಣಾ ಸಾಮರ್ಥ್ಯ ವೃದ್ಧಿಸುತ್ತದೆ’ ಎಂದು ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ಕುಮಾರ್ ಅಭಿಪ್ರಾಯಪಟ್ಟರು.

ಇಲ್ಲಿನ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠವು ಶನಿವಾರ ಆಯೋಜಿಸಿದ್ದ 5 ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪುಸ್ತಕ ಓದುವಾಗ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರಗಳನ್ನು ಬಳಸಿಕೊಂಡು ಅರ್ಥ ಮಾಡಿಕೊಳ್ಳುತ್ತೇವೆ. ಆದರೆ, ದೃಶ್ಯ ಮಾಧ್ಯಮಗಳಲ್ಲಿ ಬೇರೆಯವರು ಸೃಷ್ಟಿಸಿದ ಚಿತ್ರಗಳಿಂದ ವಿಷಯ ಅರ್ಥ ಮಾಡಿಕೊಳ್ಳುತ್ತೇವೆ. ಇದು ನಮ್ಮ ಸೃಜನಶೀಲ ಬೆಳವಣಿಗೆಗೆ ಸಹಾಯಕವಲ್ಲ’ ಎಂದರು.

‘ಅಸಲಿ ಬುದ್ಧಿಮತ್ತೆ ಹಾಗೂ ಕೃತಕ ಬುದ್ಧಿಮತ್ತೆ ನಡುವೆ ಯಾವಾಗಲೂ ನಿಜವಾದ (ಅಸಲಿ) ಜ್ಞಾನಕ್ಕೆ ಬೆಲೆ ಹೆಚ್ಚು. ನಮ್ಮಲ್ಲಿರುವ ಜ್ಞಾನವನ್ನು ಹೊರಗಿನ ಎಐ ಜ್ಞಾನಕ್ಕೆ ಅಡಿಯಾಳಾಗಿಸಬಾರದು’ ಎಂದು ಎಚ್ಚರಿಸಿದರು.

‘ತಂತ್ರಜ್ಞಾನ ನೀಡುವ ಮಾಹಿತಿಯನ್ನು ಸೂಕ್ತವಾಗಿ ಬಳಸಿಕೊಂಡರೆ ಸಮಾಜದ ಅಭಿವೃದ್ಧಿ ಸಾಧ್ಯ. ಉಪಗ್ರಹ ನೀಡಿದ ಸರ್ವೆ ಅಂಕಿಅಂಶಗಳನ್ನು ಆದರಿಸಿ ತೆಲಂಗಾಣ ಸರ್ಕಾರವು ಹೈದರಾಬಾದ್ನಲ್ಲಿ ಹೈಡ್ರಾ ರಕ್ಷಾ ಯೋಜನೆ ಜಾರಿಗೊಳಿಸಿ ಭೂಮಿ ಒತ್ತುವರಿಯನ್ನು ತಡೆಯುತ್ತಿದೆ. ಅಂಚೆ ಇಲಾಖೆಯಿಂದಲೂ ದೇಶದ ಪ್ರತಿ 4x4 ಮೀಟರ್ ಜಾಗಕ್ಕೂ ಪ್ರತ್ಯೇಕ ಸಂಖ್ಯೆಯ ಡಿಜಿಪಿನ್ ನೀಡಿ ಸಂಪರ್ಕ ಸುಲಭವಾಗಿಸಿದೆ’ ಎಂದು ವಿವರಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಮಾನಸ ಅವರು ‘ಮೈಸೂರು ಪ್ರಜಾಪ್ರತಿನಿಧಿ ಸಭೆ– ಚಾರಿತ್ರಿಕ ಅವಲೋಕನ’ ಹಾಗೂ ‘ಚನ್ನಬಸವಣ್ಣನವರ ವಚನ ವ್ಯಾಖ್ಯಾನ’ ಕೃತಿಗಳನ್ನು, ಫ್ರೆಂಚ್ ಭಾಷಾ ಉಪನ್ಯಾಸಕಿ ಸುಜಾತ ಸ್ವಾಮಿ ಅವರು, ‘ಸ್ಪೇಸ್ ಟೆಕ್ನಾಲಜಿ ಅಂಡ್ ಸೋಸೈಟಲ್ ಅಪ್ಲಿಕೇಷನ್ಸ್’ ಕೃತಿಯ ಫ್ರೆಂಚ್ ಅವತರಣಿಕೆ ಪರಿಚಯಿಸಿದರು.

ಪ್ರೊ.ಸಿ.ನಾಗಣ್ಣ ಅವರು, ‘ಗ್ಲಿಂಪ್ಸ್ ಆಫ್ ಸುತ್ತೂರು ಮಠ್’, ‘ವೀರಶೈವ–ಲಿಂಗಾಯತ ಪರಿಕಲ್ಪನೆಗಳು’ ಕೃತಿಗಳನ್ನು ಪರಿಚಯಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಂ.ಎನ್.ನಂದೀಶ್ ಹಂಚೆ, ನಗರ್ಲೆ ಶಿವಕುಮಾರ, ಕಟ್ನವಾಡಿ ಪ್ರಭುಸ್ವಾಮಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-39-1803279521

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.