ಮೈಸೂರು: ಸಂಶೋಧಕರಿಗೆ ಶಿಷ್ಯವೇತನ ನೀಡುವಂತೆ ಒತ್ತಾಯಿಸಿ ಶಿಷ್ಯವೇತನ ರಹಿತ ಸಂಶೋಧಕರ ಬಳಗದ ಸದಸ್ಯರು ನಗರದ ಕ್ರಾಫರ್ಡ್ ಭವನದ ಮುಂಭಾಗ ಪ್ರತಿಭಟಿಸಿದರು.

‘ವಿವಿ ವ್ಯಾಪ್ತಿಯ ಕಾಲೇಜು ಹಾಗೂ ಮಾನಸಗಂಗೋತ್ರಿಯಲ್ಲಿ ಪಿಎಚ್.ಡಿ ಪ್ರವೇಶಾತಿ ಪಡೆದು ಸಂಶೋಧನೆ ಕೈಗೊಂಡಿರುವ ಸಂಶೋಧಕರು 2026– 27ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿಶೇಷ ಘಟಕದಿಂದ ನೀಡಲಾಗುವ ಶಿಷ್ಯವೇತನಕ್ಕೆ 96 ಅರ್ಜಿ ಸಲ್ಲಿಸಿದ್ದಾರೆ. ಆದರೆ, ಮೈಸೂರು ವಿಶ್ವವಿದ್ಯಾಲಯ ಕೇವಲ 20 ಸಂಶೋಧಕರಿಗೆ ಶಿಷ್ಯವೇತನ ಮಂಜೂರು ಮಾಡಿ ವಿದ್ಯಾರ್ಥಿ ವಿರೋಧಿ ಮಾನದಂಡ ನಿಗದಿ ಮಾಡಿದೆ. ಇದರಿಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳು ಶಿಷ್ಯವೇತನ ರಹಿತವಾಗಿ ಪಿಎಚ್.ಡಿ ಪದವಿ ಪಡೆಯಲು ಹರಸಾಹಸ ಪಡುವಂತಾಗಿದೆ’ ಎಂದು ಸಂಘಟನೆ ಸಂಚಾಲಕ ರವಿಕುಮಾರ್ ಮುಡಿಗುಂಡ ದೂರಿದರು.

‘ಹೆಚ್ಚುವರಿ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗೆ ವರ್ಷಕ್ಕೆ ₹23 ಕೋಟಿ ಅನಾವಶ್ಯವಾಗಿ ನೀಡುತ್ತಿದ್ದು, ಇದು ವಿಶ್ವವಿದ್ಯಾಲಯದ ಹಣ ಪೋಲಾಗುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿ. ಅಲ್ಲದೆ, ಈ ವರ್ಷದ ವಿಶ್ವವಿದ್ಯಾಲಯದ ಬಜೆಟ್ನ ಒಟ್ಟು ₹400 ಕೋಟಿಗಳಲ್ಲಿ ನಿಯಮಾನುಸಾರ ಶೇ 24ಅನ್ನು ಎಸ್ಸಿ, ಎಸ್ಟಿ ಉಪಯೋಜನೆಗಳಿಗೆ ಮೀಸಲಿಟ್ಟರೆ ₹ 96 ಕೋಟಿ ನೀಡಬೇಕಾಗುತ್ತದೆ. ಆದರೆ, ವಿಶ್ವವಿದ್ಯಾಲಯ ಎಸ್ಸಿ, ಎಸ್ಟಿ ಸಂಶೋಧನೆಗೆ ಯಾವುದೇ ರೀತಿಯ ಮೊತ್ತವನ್ನು ಮೀಸಲಿಡದೆ ವಂಚಿಸುತ್ತಿದೆ. ಆನ್ಲೈನ್ ಪ್ರೋಗ್ರಾಮ್ನಲ್ಲಿ ₹138 ಕೋಟಿ ಲಾಭ ತೋರಿಸಿರುವ ವಿಶ್ವವಿದ್ಯಾಲಯ, ವಿದ್ಯಾರ್ಥಿಗಳಿಗೆ ಸಂಶೋಧನಾ ಶಿಷ್ಯವೇತನ ನೀಡಲು ತೀವ್ರ ಆರ್ಥಿಕ ಸಂಕಷ್ಟವಿರುವಂತೆ ನಟಿಸುತ್ತಿದೆ. ತಕ್ಷಣವೇ ತಾರತಮ್ಯ ಮಾಡದೆ ಶಿಷ್ಯವೇತನ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

ಸಂಘಟನೆ ಸಂಚಾಲಕರಾದ ರವಿಕುಮಾರ್ ಮುಡಿಗುಂಡ, ನವೀನ್ ಅಳಗಂಚಿ, ಮಾದೇಶ್, ದೀಪ, ಮೌನ ದೊರೆ, ಧೀರಜ್, ನವೀನ್, ವಿಶಾಖ್.ಬಿ.ಎನ್, ಸಣ್ಣಮಾದು, ದಲಿತ ಸಂಘರ್ಷ ಸಮಿತಿಯ ಚೋರನಹಳ್ಳಿ ಶಿವಣ್ಣ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-39-2030509149

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.