ಮೈಸೂರು: ‘ಸಂಸ್ಕೃತ ಪೂರ್ವಜರ ಆಸ್ತಿ. ಅದನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ನೀಡಿದಾಗ ಅದು ಸಾಧ್ಯ’ ಎಂದು ವೇದ ವಿದ್ವಾಂಸ ಎಚ್.ಎಲ್. ಚಿದಂಬರ ಭಟ್ ಹೇಳಿದರು.

ನಗರದ ಸದ್ವಿದ್ಯಾ ವಿದ್ಯಾಸಂಸ್ಥೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸೋಮವಾರ ಆಯೋಜಿಸಿದ್ದ ‘ಸಂಸ್ಕೃತ ಪ್ರಕಾರ’ ಉದ್ಘಾಟಿಸಿ ಮಾತನಾಡಿದರು.

‘ಸಂಸ್ಕೃತಕ್ಕೆ ಎಲ್ಲಾ ಪ್ರಾಂತ್ಯವನ್ನು ಜೋಡಿಸುವ ಶಕ್ತಿ ಇದೆ. ಈ ಭಾಷೆ ಉಳಿಯಬೇಕು ಎಂಬ ಆಶಯವನ್ನು ಹಲವರು ವ್ಯಕ್ತಪಡಿಸುತ್ತಾರೆ. ಆದರೆ ಸಂಸ್ಕೃತದಿಂದ ಪ್ರಯೋಜನ ಪಡೆದ ಅನೇಕರು, ಅದನ್ನು ಬೆಳೆಸುವ ಕೆಲಸ ಮಾಡದಿರುವುದು ವಿಷಾದನೀಯ’ ಎಂದು ಬೇಸರಿಸಿದರು.

‘ಸಂಸ್ಕೃತಕ್ಕೆ ಸಾವಿಲ್ಲ. ಅದು ಫಿನಿಕ್ಸ್ನಂತೆ ಎದ್ದು ಬರುತ್ತದೆ. ಈಗ ಪುನರುತ್ಥಾನ ಕಾಲದಲ್ಲಿದೆ. ಸಂಸ್ಕೃತ ಹಾಗೂ ಸಂಸ್ಕೃತಿಯನ್ನು ಕಲಿಸಿ ಮಕ್ಕನ್ನು ಸರಿದಾರಿಗೆ ತರದಿದ್ದರೆ, ಸಮಾಜದಲ್ಲಿ ನಡೆಯುವ ದುರಾಚಾರಕ್ಕೆ ನಾವೂ ಜವಾಬ್ದಾರರಾಗುತ್ತೇವೆ’ ಎಂದರು.

ಶ್ರೀಗಂಧ ವಲಯ ಪ್ರಮುಖ್ ಡಾ.ವಿ.ರಂಗನಾಥ್ ಮಾತನಾಡಿ, ‘ಭಾಷಾವಾರು ಪ್ರಾಂತ್ಯಗಳಾದ ನಂತರ ದೇಶಾಭಿಮಾನ ಕಡಿಮೆ ಆಯಿತು. ಪಕ್ಕದ ರಾಜ್ಯದವರನ್ನೂ ಸಹಿಸದಂತಾಯಿತು. ಕೆಲವು ರಾಜಕೀಯದವರು ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆ ಇಡುವಷ್ಟು ಸಂಕುಚಿತ ಭಾವನೆ ಬೆಳೆಯಿತು. ಅದನ್ನು ಹೋಗಲಾಡಿಸುವುದು ನಮ್ಮ ಉದ್ದೇಶ. ಸಂಸ್ಕೃತಕ್ಕೆ ಹಿಂದಿನಿಂದಲೂ ಅನ್ಯಾಯ ಆಗುತ್ತಿದೆ. ನಳಂದಾದಲ್ಲಿನ ಗ್ರಂಥಗಳನ್ನು ನಾಶ ಮಾಡಲಾಯಿತು. ಸರ್ಕಾರಗಳು ಸಂಸ್ಕೃತವನ್ನು ಮೂಲೆ ಗುಂಪು ಮಾಡಿವೆ. ಅದನ್ನು ತಪ್ಪಿಸಿ ಸಂಸ್ಕೃತಕ್ಕೆ ಪ್ರಚಾರ ನೀಡುವುದಕ್ಕಾಗಿ ಕಾರ್ಯಕ್ರಮ ರೂಪಿಸಿದ್ದೇವೆ’ ಎಂದರು.

ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಹೆಚ್ಚುವರಿ ಜಂಟಿ ನಿರ್ದೇಶಕ ವಿದ್ವಾನ್ ಟಿ.ಎನ್.ಪ್ರಭಾಕರ್, ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಗೋಪಿನಾಥ್, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾಧ್ಯಕ್ಷ ಎಸ್.ಸುಬ್ರಹ್ಮಣ್ಯ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-39-87186636

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.