ಮೈಸೂರು: ‘ಬುದ್ಧ, ಬಸವ, ಅಂಬೇಡ್ಕರ್ ಅವರ ಕೊಡುಗೆಗಳನ್ನು ಪ್ರತ್ಯೇಕವಾಗಿ ಊಹಿಸಲಾಗದು. ಮೂರು ಸಾವಿರ ವರ್ಷದ ಶೋಷಣೆ ತೊಡೆದು, ಎಲ್ಲರನ್ನು ಒಳಗೊಳ್ಳುವ ಸಾಮಾಜಿಕ ವ್ಯವಸ್ಥೆ ನಿರ್ಮಾಣಕ್ಕೆ ಏಕ ಮಾರ್ಗದಲ್ಲಿ ಹೋರಾಡಿದರು’ ಎಂದು ಸಾಹಿತಿ ರಂಜಾನ್ ದರ್ಗಾ ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ಬಿ.ಎನ್.ಬಹದ್ದೂರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ (ಬಿಐಎಂಎಸ್), ರಾಣಿ ಬಹದ್ದೂರ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಸಮತಾ ಉತ್ಸವ– 2026’ ಉದ್ಘಾಟಿಸಿ ಮಾತನಾಡಿ, ‘ಬ್ರಾಹ್ಮಣರ ಯಜ್ಞ ಸಂಸ್ಕೃತಿಯಿಂದ ಸಮಾಜದ ಸಂಪತ್ತು ನಾಶವಾಗುತ್ತಿತ್ತು. ಅದನ್ನು ವಿರೋಧಿಸಿ ಬುದ್ಧ ಹಾಗೂ ಬಸವಣ್ಣನವರು ಶ್ರಮ, ಮಾನವೀಯತೆ ಮತ್ತು ಸಮಾನತೆ ಮೌಲ್ಯ ಪ್ರತಿಪಾದಿಸಿದರು’ ಎಂದರು.

‘ದೇಶದಲ್ಲಿ ಮನುವಾದ ಪ್ರತ್ಯೇಕವಾದದ ಸಂಸ್ಕೃತಿ ಬೆಳೆಸಿತ್ತು. ಚಾತುವರ್ಣದ ವ್ಯವಸ್ಥೆಯ ಸುಳ್ಳನ್ನು ಸಂವಿಧಾನವಾಗಿ ರೂಪಿಸಿತ್ತು. ಬುದ್ಧ ತಮ್ಮ ವಿಚಾರಗಳ ಮೂಲಕ ಸಮಾನತೆಯ ಬೀಜ ಬಿತ್ತಿದರು, ಬಸವಣ್ಣ ಅದಕ್ಕೆ ನೀರೆರೆದರು, ಅಂಬೇಡ್ಕರ್ ಫಲ ನೀಡಿದರು. ಅದರ ಫಲವನ್ನು ಪ್ರಸ್ತುತ ಅನುಭವಿಸುತ್ತಿದ್ದೇವೆ. ಆದರೆ ಮುಂದಿನ ಪೀಳಿಗೆಗೆ ಅದರ ಫಲ ನೀಡಲು ತಯಾರಾಗಿ ಇಲ್ಲದಿರುವುದು ಆತಂಕಕಾರಿ’ ಎಂದು ಬೇಸರ ವ್ಯಕ್ತಪಡಿಸಿದರು.

‘ದೇಶದ ಸಂವಿಧಾನದ ರಚನೆಯು ಯರೋಪ್ ಶೈಲಿಯಲ್ಲಿ ಇರಬಹುದು. ಆದರೆ ಆತ್ಮದಲ್ಲಿ ಮೂರು ಸಾವಿರ ವರ್ಷಗಳ ಇತಿಹಾಸ ಇದೆ. ನರಕಯಾತನೆ ಅನುಭವಿಸಿದ ಜನರ ಪ್ರಶ್ನೆಗಳಿಗೆ ಉತ್ತರವಿದೆ. ಅಲ್ಲಿ ಎಲ್ಲರನ್ನೂ ಒಳಗೊಳ್ಳವ ವ್ಯವಸ್ಥೆ ಇರುವುದರಿಂದ ಸಂವಿಧಾನ ವಿರೋಧಿಸುವ ಬಳಗ ಹುಟ್ಟಿಕೊಂಡಿದೆ. ದಾರ್ಶನಿಕರ ನಿಜ ಸತ್ಯವನ್ನು ತಿಳಿದು ಉತ್ತಮ ಸಮಾಜ ನಿರ್ಮಿಸುವ ನಾಯಕತ್ವ ದೇಶಕ್ಕೆ ಅವಶ್ಯ’ ಎಂದರು.

ನಿವೃತ್ತ ಉಪನ್ಯಾಸಕ ಪ್ರೊ.ಡಿ.ಆನಂದ್ ಮಾತನಾಡಿ, ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಯುದ್ಧ, ಬಂಡವಾಳಶಾಹಿತ್ವ, ಖಾಸಗಿಕರಣವಷ್ಟೆ ಪ್ರಪಂಚದಲ್ಲಿ ಕಾಣಿಸುತ್ತಿದೆ. ಪರಿಣಾಮಕಾರಿ ನಾಯಕತ್ವವು ಮುಂದುವರೆಯುತ್ತಿರುವ ದೇಶದಲ್ಲಿ ಬದಲಾವಣೆ ತರಲು ಸಾಧ್ಯ. ಪ್ರಪಂಚದಲ್ಲಿ ಸಮಾನತೆಯ ಕೊರತೆ ಕಾಡುತ್ತಿರುವುದರಿಂದ ಅದನ್ನು ಆಚರಿಸಿ, ಸಂಭ್ರಮಿಸುವ ಅಗತ್ಯವಿದೆ. ಅದನ್ನು ಪ್ರತಿಪಾದಿಸಿದ ಕಾರಣಕ್ಕಾಗಿ ಬುದ್ಧ, ಬಸವ, ಅಂಬೇಡ್ಕರ್ ಇಂದಿಗೂ ಪ್ರಸ್ತುತವಾಗಿದ್ದಾರೆ. ಯುವ ಸಮೂಹ ಭವಿಷ್ಯ ಭಾರತದ ವ್ಯವಸ್ಥಾಪಕರು. ಈ ಸಮಸ್ಯೆಗಳ ಬಗ್ಗೆ ಅರಿತು ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು’ ಎಂದು ತಿಳಿಸಿದರು.

ಮೈಸೂರು ವಿ.ವಿ ಹಣಕಾಸು ಅಧಿಕಾರಿ ಪ್ರೊ.ಎಸ್.ಜೆ.ಮಂಜುನಾಥ್, ಬಿಐಎಂಎಸ್ ಅಧ್ಯಕ್ಷ ಪ್ರೊ.ಮಹೇಶ್ ಆರ್., ಪ್ರೊ.ಎಂ.ಅಮೂಲ್ಯಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-39-1882332527

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.