ಮೈಸೂರು: ‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದರೂ, ಅಸಮಾನತೆ ಮತ್ತು ಸಾಮಾಜಿಕ ಅನ್ಯಾಯ ತೊರೆದಿಲ್ಲ’ ಎಂದು ಪ್ರಗತಿಪರ ಚಿಂತಕ ಪ್ರೊ.ಎಚ್.ಗೋವಿಂದಯ್ಯ ಹೇಳಿದರು.

ಜ್ಞಾನದೀಪ ಎಜುಕೇಶನ್ ಟ್ರಸ್ಟ್, ಕರ್ನಾಟಕ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ಆದಿದ್ರಾವಿಡ (ಪೌರಕಾರ್ಮಿಕರ), ಯುವಕರ ಅಭಿವೃದ್ಧಿ ಮಹಾ ಸಂಘ, ದೇವಿಪಟ್ಟಲದಮ್ಮ ಹಾಗೂ ಕತ್ತಿಮುನೇಶ್ವರ ದೇವಸ್ಥಾನ, ಕುಲ ಪಂಚಾಯಿತಿ ಸಮಿತಿ, ಭೀಮ ಜ್ಯೋತಿ ಸೌಹಾರ್ದ ಸಹಕಾರ ಸಂಘದ ನಿಯಮಿತದ ಸಂಯುಕ್ತಾಶ್ರದಲ್ಲಿ ಅಶೋಕಪುರಂನ ಡಾ.ಬಿ.ಆರ್.ಅಂಬೇಡ್ಕರ್ ಕಾಲೊನಿಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಚಿಣ್ಣರ ಚಿಲಿಪಿಲಿ-2026 ಒಂದು ದಿನದ ಮಕ್ಕಳ ಬೇಸಿಗೆ ಸಾಂಸ್ಕೃತಿಕ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಪ್ರಸ್ತುತ ಶಿಕ್ಷಣ ಸಮಾನತೆ ಮತ್ತು ಸಾಮಾಜಿಕ ನ್ಯಾಯ ದೊರಕಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಒಳ ಮೀಸಲಾತಿ ಜಾರಿಯಾಗಿರುವ ಹಿನ್ನೆಲೆಯಲ್ಲಿ ಹೊಸದಾರಿ, ಹೊಸ ಬೆಳಕು ಕಾಣಬೇಕಾಗಿದೆ. ಸಾಮಾಜಿಕ ನ್ಯಾಯದ ಹೊಸಪರ್ವ ಆರಂಭವಾಗಬೇಕಾಗಿದೆ’ ಎಂದು ಆಶಯ ವ್ಯಕ್ತಪಡಿಸಿದರು.

‘ನಗರದಲ್ಲಿ 37 ಕೊಳಚೆ ಪ್ರದೇಶಗಳಲ್ಲೂ ಈ ರೀತಿಯ ಶಿಬಿರ ಏರ್ಪಡಿಸುವ ಮೂಲಕ ಕೀಳರಿಮೆ ಹೋಗಲಾಡಿಸಿ, ಸ್ವಾಭಿಮಾನ ಮೂಡಿಸುವ ಕೆಲಸ ಮಾಡಲಾಗುವುದು. ಕಲೆ, ಸಾಹಿತ್ಯ, ಸಂಗೀತದ ಮೂಲಕ ಕಲಿತಾಗ ಶಿಕ್ಷಣಕ್ಕೊಂದು ಅರ್ಥಬರುತ್ತದೆ’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ದಂತವೈದ್ಯೆ ಡಾ.ಮಮತಾ ಕಿರಣ್ ಮಾತನಾಡಿದರು.

ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಹ ಸಂಶೋಧಕಿ ರಾಧಾಮಣಿ. ಆರ್ಮುಗಂ, ಆನಂದ್ ಮೌರ್ಯ, ಜ್ಞಾನದೀಪ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷ ವೈದ್ಯ ಡಾ.ರಮೇಶ್ ಜೇವೂರ್, ಆನಂದ್ ಮೌರ್ಯ, ವೆಂಕಟೇಶ್, ನಾರಾಯಣ್, ರವಿಶಂಕರ್, ಆಕಾಶ್, ಎಸ್.ರಘು, ಎಂ.ಸುಬ್ರಮಣಿ, ಆರ್.ನಾಗರಾಜ್, ಎಂ.ಗಣೇಶ, ಭೀಮಜ್ಯೋತಿ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಆರ್.ಲಕ್ಷ್ಮಣ್ ಇದ್ದರು.

ಮ್ಯಾಜಿಕ್ ಬಸ್ನ ರವಿ, ರಂಗಕರ್ಮಿಗಳಾದ ಜೀವನ್ ಹೆಗ್ಗೋಡು, ಶಕುಂತಲಾ ಹೆಗ್ಗಡೆ ಅವರನ್ನು ಸನ್ಮಾನಿಸಲಾಯಿತು. ನಂತರ ಮಕ್ಕಳು ‘ಹಕ್ಕಿ ಮತ್ತು ಬೇಟೆಗಾರ’ ನಾಟಕ ಪ್ರದರ್ಶಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-39-13685645

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.