ಮೈಸೂರು: ‘ಕೆಲ ಪ್ರಾಧ್ಯಾಪಕರು ಬರವಣಿಗೆ, ಚಳವಳಿಯಲ್ಲಿ ಭಾಗಿಯಾಗದಿರಲು ಕುಂಟು ನೆಪ ಹೇಳುತ್ತಾರೆ. ಆದರೆ, ಸಮಾನತೆ, ಸಮಾಜದ ಬಗ್ಗೆ ಒಲವಿದ್ದವರಿಗೆ ಭಾಗವಹಿಸಲು ಯಾವಾಗಲೂ ಅವಕಾಶ ಇರುತ್ತದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ನಗರದ ಮಾನಸಗಂಗೋತ್ರಿಯ ಇಎಂಆರ್ಸಿ ಸಭಾಂಗಣದಲ್ಲಿ ಭಾನುವಾರ ನಡೆದ ‘ಚಳವಳಿಗಳ ಸಂಗಾತಿ ಮಂಜುಳಾ ಮೇಡಂ ನೆನಪಿನ ಕಾರ್ಯಕ್ರಮ– 2’ರಲ್ಲಿ ‘ಕದಿರು’ (ಬಿ.ಸಿ.ಮಂಜುಳಾ ಅವರ ಲೇಖನಗಳು, ಭಾಷಣ) ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಕಷ್ಟದ ನಡುವೆಯೇ ಚಳವಳಿಯಲ್ಲಿ ಭಾಗಿಯಾಗುವುದು ಅಗತ್ಯ. ಚಳವಳಿ ಹಾಗೂ ಕಷ್ಟಗಳಿಗೆ ಪ್ರಬಲ ನಂಟಿರುತ್ತದೆ. ಸಂಕಲ್ಪ, ಬದ್ಧತೆ ಇರುವವರು ಸಮಾಜದಲ್ಲಿ ಬದಲಾವಣೆ ತರಲು ಮುಂದಾಗುತ್ತಾರೆ’ ಎಂದು ವಿವರಿಸಿದರು.

‘ಮಂಜುಳಾ ಅವರು ಜ್ಞಾನದಾಹಿಯಾಗಿದ್ದರು. ಬರಹ ಮತ್ತು ಬದುಕಿನ ನಡುವೆ ಕಂದಕ ಇಲ್ಲದೇ ಬದುಕಿದ್ದರು. ಅವರ ಕೃತಿಯಲ್ಲಿ ಕನ್ನಡ ಸಾಹಿತ್ಯ ವಿಕಾಸಗೊಂಡ ಬಗೆಯನ್ನು ನೋಡಬಹುದು. ಕನ್ನಡ ಜನಪದ ಸಾಹಿತ್ಯಕ್ಕೂ ಹೊಸ ವಿಶ್ಲೇಷಣೆ ನೀಡುವ ಲೇಖನಗಳಿವೆ. ಬರಹದಲ್ಲೂ ಗೊಂದಲ, ಆರೋಪಿತ ಸಂಕೀರ್ಣತೆಯಿಲ್ಲ. ಅಂತರ್ವಾಹಿನಿಯಾಗಿ ಸಾಮಾಜಿಕ ವಿಮರ್ಶೆಯ ಸೂಕ್ಷ್ಮವಿದೆ’ ಎಂದು ಹೇಳಿದರು.

ಅವನತಿಯಲ್ಲಿ ನುಡಿ ನೈತಿಕತೆ: ‘ಕಾವ್ಯಕ್ಕೆ ದ್ವೇಷ ಇರಬಾರದು, ಪ್ರತಿರೋಧ ಇರಬೇಕು. ಸೇಡಿಗೂ ಪ್ರತಿಭಟನೆಗೂ ವ್ಯತ್ಯಾಸವಿದೆ. ಇಂದಿನ ರಾಜಕಾರಣಿಗಳ ಭಾಷಣ, ಮಾತುಗಳಲ್ಲಿ ವ್ಯತ್ಯಾಸ ನೋಡಬಹುದು. ಸಮಾಜದಲ್ಲಿ ನುಡಿ ನೈತಿಕತೆ ಕಳೆದು ಹೋಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕವಿ ಸಿದ್ದಲಿಂಗಯ್ಯ ಕಾವ್ಯವನ್ನು ವಿಮರ್ಶಿಸಿದ್ದ ಮಂಜುಳಾ ಅವರು, ಯಾವ ಮಾತುಗಳನ್ನು ಹೇಗೆ ನೋಡಬೇಕು ಎಂಬ ವಿವೇಕ, ಔಚಿತ್ಯವನ್ನು ತೋರಿದ್ದಾರೆ. ಹಿಂಸೆಯನ್ನು ಒಪ್ಪದೇ ಸಮಾಜ ಬದಲಾವಣೆಯ ನಿಜ ಕಾಳಜಿಯ ರೂಪಕಗಳನ್ನು ಮೆಚ್ಚುತ್ತಾರೆ. ಕೇಡಿನ ಕಿಡಿ ನಂದಿಹೋಗಿ, ಲೇಸಿನ ಜ್ಯೋತಿ ಬೆಳಗಿದಾಗ ನಿಜವಾದ ಕಾವ್ಯ ಮೂಡುತ್ತದೆ ಎಂದು ತಿಳಿಸಿದ್ದಾರೆ’ ಎಂದು ವಿಶ್ಲೇಷಿಸಿದರು.

‘ಮಹಿಳೆ ಕುರಿತು ಬಿ.ಆರ್.ಅಂಬೇಡ್ಕರ್ ಚಿಂತನೆಗಳು’ ಕುರಿತು ಉಪನ್ಯಾಸ ನೀಡಿದ ಮೈಸೂರು ವಿಶ್ವವಿದ್ಯಾಲಯ ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಪ್ರೊ. ಸೋಮಶೇಖರ್, ‘ಹಿಂದೂ ಕೋಡ್ ಬಿಲ್ ಮೂಲಕ ಮಹಿಳೆಯರಿಗೆ ಸಮಾನತೆ ನೀಡಲು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಂಬೇಡ್ಕರ್ ಅವರನ್ನು ಮಹಿಳಾವಾದಿ ಎಂದು ಗುರುತಿಸಲು ಸಮಾಜ ಸಿದ್ಧವಿಲ್ಲ. ಈ ಧೋರಣೆ ಬದಲಾಗಬೇಕು. ಮುಖ್ಯವಾಗಿ ಮಹಿಳೆಯರೇ ಬಾಬಾಸಾಹೇಬರ ಆಶಯ ಈಡೇರಿಸಬೇಕು’ ಎಂದು ಹೇಳಿದರು.

ಕವಯಿತ್ರಿ ಪ್ರೊ.ಸುಕನ್ಯಾ ಮಾರುತಿ ಅವರಿಗೆ ‘ಮಂಜುಳಾ ಮೇಡಂ ಪ್ರಶಸ್ತಿ–2026’ ಪ್ರದಾನ ಮಾಡಲಾಯಿತು. ಸ್ಮರಣಿಕೆ, ₹25,000 ನಗದು, ಇಳಕಲ್ ಸೀರೆ ನೀಡಿ ಗೌರವಿಸಲಾಯಿತು.

ಮಂಜುಳಾ ಮೇಡಂ ನೆನಪು ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು.

ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ ಅಧ್ಯಕ್ಷತೆ ವಹಿಸಿದ್ದರು. ಮಂಜುಳಾ ಅವರ ಪತಿ ಪ್ರೊ.ರಾಜಪ್ಪ ದಳವಾಯಿ, ಪುತ್ರ ಮೇಜರ್ ಭಾರತೀನಂದ ಆರ್.ಎಂ. ಇದ್ದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-39-1064731439

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.