ಮೈಸೂರು: ‘ಸಾಮಾಜಿಕ ಜಾಲತಾಣಗಳು ಆವರಿಸಿಕೊಂಡಿರುವ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಅದಕ್ಕೆ ಹೆಚ್ಚು ಅಂಟಿಕೊಳ್ಳದೆ ಸೃಜಶೀಲತೆ ಬೆಳೆಸಿಕೊಳ್ಳಬೇಕು. ಕಲಾತ್ಮಕ ಮತ್ತು ಶೖಕ್ಷಣಿಕ ಜೀವನವನ್ನು ವೃದ್ಧಿಸಿಕೊಳ್ಳಬೇಕು’ ಎಂದು ಮುಖಂಡ ಅಹಿಂದ ಜವರಪ್ಪ ಸಲಹೆ ನೀಡಿದರು.

ಪರಸ್ಪರ ಸಂಸ್ಥೆಯು ಶಾಶ್ವತ ಸೇವಾ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 3ನೇ ವರ್ಷದ ‘ಚಿಣ್ಣರ ಚೈತ್ರ’ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂತಹ ಶಿಬಿರಗಳು ಮಕ್ಕಳಲ್ಲಿ ಅಡಗಿರುವ ಸುಪ್ತಪ್ರತಿಭೆ ಹೊರಹಾಕಲು ವೇದಿಕೆಯಾಗಲಿವೆ’ ಎಂದರು.

ಕಲಾವಿದ ಅಂಕಿತ್ ರಾಜ್, ‘ಮಕ್ಕಳು ಉತ್ತಮ ಆಲೋಚನೆಗಳಿಂದ ಅತ್ಯುತ್ತಮ ಕಾರ್ಯಗಳಲ್ಲಿ ತೊಡಗಿ ಸನ್ಮಾರ್ಗದಲ್ಲಿ ಸಾಗಬೇಕು’ ಎಂದು ತಿಳಿಸಿದರು.

ನಿವೃತ್ತ ಪ್ರಾಂಶುಪಾಲ ಶಿ. ಕುಮಾರಸ್ವಾಮಿ, ಮುಖ್ಯಶಿಕ್ಷಕಿ ಪವಿತ್ರಾ ಎಚ್.ಪಿ., ತಾನ್ಯಾ ಚೌಧರಿ, ಪರಸ್ಪರ ಸಂಸ್ಥೆಯ ಸಂಸ್ಥಾಪಕ ಹಾಗೂ ಶಿಬಿರದ ನಿರ್ದೇಶಕ ರಮೇಶ್ ತಾಯೂರು, ಮದನ್ ತೊರೆಮಾವು ಪಾಲ್ಗೊಂಡಿದ್ದರು.

ಗಾಯಕ ವಿಶ್ವನಾಥ್ ಚಂಗಚಹಳ್ಳಿ ಮತ್ತು ಶಿವಕುಮಾರ್ ತಂಡದವರು ಗೀತಗಾಯನ ಪ್ರಸ್ತುತಪಡಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅಭಿಷೇಕ್ ಪಾಳ್ಯಾಗಾರ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-39-791437306

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.