ಮೈಸೂರು: ‘ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುತ್ತಿರುವ ಅಪರೂಪದ ವ್ಯಕ್ತಿತ್ವ. ಅವರ ಸಮಾಜಮುಖಿ ಕಾರ್ಯಗಳು ಮತ್ತು ಸಾಹಿತ್ಯ ಯುವ ಪೀಳಿಗೆಗೆ ದಾರಿದೀಪ’ ಎಂದು ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ. ನೀಲಗಿರಿ ಎಂ. ತಳವಾರ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಎನ್. ವಾಸಯ್ಯ ಅವರ ಸಂಪಾದಕತ್ವದಲ್ಲಿ ಪ್ರಕಟವಾಗಿರುವ, ಸುಧಾ ಮೂರ್ತಿ ಅವರ ಕುರಿತಾದ ‘ವಿಶ್ವೇಶ್ವರಿ’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಸುಧಾ ಮೂರ್ತಿ ಅವರ ವ್ಯಕ್ತಿತ್ವ ಹಾಗೂ ಸಾಹಿತ್ಯ ಕುರಿತ 26 ಲೇಖನಗಳು ಈ ಕೃತಿಯಲ್ಲಿವೆ. ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ನಗುನಗುತ ಸಾಗುವ ಅವರ ಸ್ವಭಾವವು ಬೇಂದ್ರೆಯವರ ‘ಚಳಿ, ಮಳೆ, ಮಂಜು, ಕುದಿಸುವ ಬಿಸಿಲು ಇದ್ದರೂ ಸಹಾ ನಗು ನಗುತ ಇರುವೆನು’ ಎಂಬ ನುಡಿಯಂತಿದೆ. ಸಮಾಜದಲ್ಲಿ ಯಾವುದೇ ಸ್ತ್ರೀವಾದಿ ಹಣೆಪಟ್ಟಿ ಹಚ್ಚಿಕೊಳ್ಳದೆಯೇ ಮಹಿಳೆಯರ ಪರವಾಗಿ ಗಟ್ಟಿಯಾಗಿ ನಿಂತವರು ಅವರು’ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಮುಖಂಡ ಎಚ್.ವಿ. ರಾಜೀವ್ ‘ಸುಧಾ ಮೂರ್ತಿ ಕನ್ನಡಿಗರ ಹೆಮ್ಮೆ. ಕೇವಲ ಸರ್ಕಾರವನ್ನು ಟೀಕಿಸುವುದರಲ್ಲಿ ಕಾಲ ಕಳೆಯದೆ, ಸಮಾಜಕ್ಕೆ ನಾನೇನು ನೀಡಬಲ್ಲೆ ಎಂದು ಪ್ರಶ್ನಿಸಿಕೊಂಡು ಅಸಂಖ್ಯ ಜನರಿಗೆ ನೆರವಾದವರು. ಅವರ ಸರಳತೆ ಎಲ್ಲರಿಗೂ ಆಶಾವಾದ ನೀಡುತ್ತದೆ’ ಎಂದರು.

ಕೃತಿ ಕುರಿತು ಮಾತನಾಡಿದ ಭಾರತೀಯ ಭಾಷಾ ಸಂಸ್ಥಾನದ ಹಿರಿಯ ಫೆಲೋ ಮಾಲಿನಿ ಅಭ್ಯಂಕರ್, ‘ಶ್ರೀಮಂತಿಕೆಯ ಲವಲೇಶವೂ ಸುಳಿಯದಂತೆ ಬದುಕುತ್ತಿರುವ ಅವರು ವಿಶ್ವಕ್ಕೇ ಆದರ್ಶ ಮಹಿಳೆ. ಹಾಗಾಗಿಯೇ ಈ ಕೃತಿಗೆ ‘ವಿಶ್ವೇಶ್ವರಿ’ ಎಂಬ ಶೀರ್ಷಿಕೆ ಅತ್ಯಂತ ಸಮಂಜಸವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಕೃತಿಯ ಸಂಪಾದಕ ಎನ್. ವಾಸಯ್ಯ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಲೇಖಕರಾದ ಬಿ. ಬಸವರಾಜು, ಎಸ್. ಶಿವರಾಜು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-39-811965505

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.