ಮೈಸೂರು: ‘ಶಿಕ್ಷಕರು ಮಕ್ಕಳಿಗೆ ನೈಜ ಗುಣಮಟ್ಟದ ಶಿಕ್ಷಣ ನೀಡುವುದನ್ನು ಗುರಿಯಾಗಿಟ್ಟುಕೊಂಡು, ನಿರಂತರ ಕಲಿಕೆಯ ಮೂಲಕ ಉನ್ನತೀಕರಿಸಿಕೊಳ್ಳಬೇಕು. ಆ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಬೇಕು’ ಎಂದು ಅನ್ವಯಿಕ ಗಣಿತಜ್ಞ ಗುರುರಾಜ ಶ್ರೀಧರ ಸಲಹೆ ನೀಡಿದರು.

2026-27ರ ಶೈಕ್ಷಣಿಕ ವರ್ಷಾರಂಭದ ನಿಟ್ಟಿನಲ್ಲಿ ನೈಪುಣ್ಯ ಶಿಕ್ಷಣ ಸಂಸ್ಥೆಯ ದಟ್ಟಗಳ್ಳಿ ಸಿಬಿಎಸ್ಇ ಕ್ಯಾಂಪಸ್ ಹಾಗೂ ಆರ್.ಟಿ. ನಗರದ ಐಸಿಎಸ್ಇ ಕ್ಯಾಂಪಸ್ನ ಶಿಕ್ಷಕರಿಗೆ ಹಮ್ಮಿಕೊಂಡಿರುವ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ತಂತ್ರಜ್ಞಾನದ ಈ ಕಾಲಘಟ್ಟದಲ್ಲಿ ಪ್ರಾಥಮಿಕ ಶಿಕ್ಷಣ ಹಲವು ಸವಾಲುಗಳನ್ನು ಎದುರಿಸಬೇಕಾಗಿದೆ. ಎಷ್ಟೇ ತಂತ್ರಜ್ಞಾನಗಳು ಬಂದರೂ ಸಾಂಪ್ರದಾಯಿಕ ಶಿಕ್ಷಣವನ್ನು ಹೊರತುಪಡಿಸಿ ಪ್ರಾಥಮಿಕ ಶಿಕ್ಷಣವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.

‘ಅವಶ್ಯವಿರುವಷ್ಟೇ ತಂತ್ರಜ್ಞಾನ ಬಳಸಿಕೊಂಡು, ಸಾಂಪ್ರದಾಯಿಕ ಶಿಕ್ಷಣ ಮುಂದಿಟ್ಟುಕೊಂಡು, ಭವಿಷ್ಯತ್ತಿನಲ್ಲಿ ಮಕ್ಕಳು ಎದುರಿಸಬೇಕಾದ ಸವಾಲುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಶಿಕ್ಷಣವನ್ನು ರೂಪಿಸಬೇಕಿದೆ’ ಎಂದು ಹೇಳಿದರು.

ನೈಪುಣ್ಯ ಸಂಸ್ಥೆಯ ಅಧ್ಯಕ್ಷ ಆರ್. ರಘು, ಪ್ರಾಂಶುಪಾಲ ಗುರುಪ್ರಸಾದ್, ಶಿಕ್ಷಣ ಸಂಯೋಜಕಿ ಶ್ವೇತಾ ಕೆ.ಎಸ್. ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-39-1381450859

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.