ಮೈಸೂರು: ಎಲ್ಅಂಡ್ಟಿ ಟೆಕ್ನಾಲಜಿ ಸರ್ವೀಸಸ್ ಸಂಸ್ಥೆಯು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಎಂಜಿನಿಯರಿಂಗ್ ಸ್ಪರ್ಧಾ ವೇದಿಕೆಯಾದ ‘ಟೆಕ್ಜಿಯಂ’ 9ನೇ ಆವೃತ್ತಿಯು ಇಲ್ಲಿನ ಎಲ್ಟಿಟಿಎಸ್ ಮೈಸೂರು ಕ್ಯಾಂಪಸ್ನಲ್ಲಿ ಈಚೆಗೆ ಯಶಸ್ವಿಯಾಗಿ ನಡೆಯಿತು.

ದೇಶದ ವಿವಿಧೆಡೆಯ 540ಕ್ಕೂ ಹೆಚ್ಚು ಎಂಜಿನಿಯರಿಂಗ್ ಸಂಸ್ಥೆಗಳಿಂದ ಸ್ಪರ್ಧಿಗಳು ಹೆಸರು ನೋಂದಾಯಿಸಿದ್ದರು. ದಾಖಲೆಯ 62ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಸಿದ್ದರು. ಈ ಹಿಂದಿನ ಆವೃತ್ತಿಗೆ ಹೋಲಿಸಿದರೆ ಈ ಸಂಖ್ಯೆ ಶೇ. 60ರಷ್ಟು ಹೆಚ್ಚಳವಾಗಿದ್ದು, 2016ರಲ್ಲಿ ಈ ವೇದಿಕೆ ಆರಂಭವಾದಾಗಿನಿಂದ ಶೇ. 800ರಷ್ಟು ಬೆಳವಣಿಗೆ ಕಂಡಿದೆ. ಸ್ಪರ್ಧಿಗಳು ವಿವಿಧ ತಂತ್ರಜ್ಞಾನಗಳಲ್ಲಿ ನವೀನ ಪರಿಕಲ್ಪನೆಗಳನ್ನು ಪ್ರದರ್ಶಿಸಿದರು.

ಮುಖ್ಯ ಅತಿಥಿಯಾಗಿದ್ದ ಸಿಎಸ್ಐಆರ್–ಎನ್ಎಎಲ್ನ ಹಿರಿಯ ವಿಜ್ಞಾನಿ ಶುಭಾ ವಿ. ಅಯ್ಯಂಗಾರ್ ಮಾತನಾಡಿ, ‘ವಿದ್ಯಾರ್ಥಿಗಳ ಪರಿಕಲ್ಪನೆಗಳನ್ನು ನೈಜ ಜಗತ್ತಿನ ಪರಿಣಾಮಕಾರಿ ಮತ್ತು ಕೈಗಾರಿಕೆಗೆ ಪೂರಕವಾದ ಪರಿಹಾರಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಈ ವೇದಿಕೆ ಸಹಕಾರಿಯಾಗಿದೆ. ಮುಂದಿನ ತಲೆಮಾರಿನ ಎಂಜಿನಿಯರಿಂಗ್ ಆವಿಷ್ಕಾರಗಳನ್ನು ಪೋಷಿಸಲು ಇಂತಹ ಯೋಜನೆಗಳು ಅತ್ಯಗತ್ಯ’ ಎಂದರು.

ಅಂತಿಮ ಹಂತಕ್ಕೆ ಆಯ್ಕೆಯಾದ 34 ತಂಡಗಳು ಮಾದರಿಗಳನ್ನು ಪ್ರದರ್ಶಿಸಿದವು. ವಿಜೇತರಿಗೆ ಒಟ್ಟು ₹ 18 ಲಕ್ಷ ಮೊತ್ತದ ಬಹುಮಾನ ವಿತರಿಸಲಾಯಿತು.

ಫಲಿತಾಂಶ: ಪ್ರಥಮ ಬಹುಮಾನ: ಎಂ.ಎಸ್. ರಾಮಯ್ಯ ಎಂಜಿನಿಯರಿಂಗ್ ಕಾಲೇಜು (ಬೆಂಗಳೂರು) ತಂಡ ಅಭಿವೃದ್ಧಿಪಡಿಸಿದ ‘ನೆಕ್ಸ್ಟ್ ಜೆನ್ ಸೆಲ್ಫ್- ಚಾರ್ಜಿಂಗ್ ಹೈಬ್ರಿಡ್ ಸ್ಕೂಟರ್’ ಯೋಜನೆ.

ದ್ವಿತೀಯ: ಆರ್ಎನ್ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬೆಂಗಳೂರು) ವಿದ್ಯಾರ್ಥಿಗಳು ಸಿದ್ಧಪಡಿಸಿದ ‘ಟೆಟ್ರೋಬೋಟ್ - ಮಾಡ್ಯುಲರ್ ರೋಬೊಟಿಕ್ ಆರ್ಮ್ ಯೋಜನೆ’.

ತೃತೀಯ: ಪಿಎಸ್ಎನ್ಎ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (ದಿಂಡಿಗಲ್, ತಮಿಳುನಾಡು) ವಿದ್ಯಾರ್ಥಿಗಳು ತಯಾರಿಸಿದ ‘ಏರಿಸ್ - ಸ್ಟೆಬಿಲಿಟಿ ಸ್ಟಾರ್ಟ್ಸ್ ವಿತ್ ಕಂಫರ್ಟ್ ಯೋಜನೆ’ ಬಹುಮಾನ ಗಳಿಸಿತು.

ಪೀಪಲ್ಸ್ ಚಾಯ್ಸ್ ಅವಾರ್ಡ್: ಇನ್ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಎಜುಕೇಷನ್ ಆಂಡ್ ರಿಸರ್ಚ್ - ಐಟಿಇಆರ್ (ಭುವನೇಶ್ವರ, ಒಡಿಶಾ) ತಂಡ ರೂಪಿಸಿರುವ ‘ಚಿರಂಜೀವಿ ಯೋಜನೆ’.

ಎಲ್ಅಂಡ್ಟಿ ಟೆಕ್ನಾಲಜಿ ಸರ್ವೀಸಸ್ನ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್ ಗುಪ್ತ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-39-1965393386

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.