ಮೈಸೂರು: ‘ಸಂಸ್ಕೃತಿ ಮತ್ತು ಆಲೋಚನೆಗಳನ್ನು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಯಥಾವತ್ತಾಗಿ ದಾಟಿಸುವ ಅನುವಾದ ಪ್ರಕ್ರಿಯೆಯು ಅತ್ಯಂತ ಸೃಜನಶೀಲ ಕೆಲಸ’ ಎಂದು ಲೇಖಕ ಪ್ರಸನ್ನಕುಮಾರ್ ಕೆರಗೋಡು ಅಭಿಪ್ರಾಯಪಟ್ಟರು.

ನಗರದ ಸರಸ್ವತಿಪುರಂನ ರೋಟರಿ ಕ್ಲಬ್ ಪಶ್ಚಿಮ ಶಾಲೆ ಸಭಾಂಗಣದಲ್ಲಿ ಪ್ರೊ.ಕೆ.ವೆಂಕಟಗಿರಿಗೌಡ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಿಷತ್ ಹಾಗೂ ಹನ್ಯಾಳು ಪ್ರಕಾಶನದ ವತಿಯಿಂದ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತ ಆಲಕೆರೆ ಜೆ.ರಾಮಲಿಂಗೇಗೌಡ ಅವರು ಅನುವಾದಿಸಿದ 4 ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಅನುವಾದ ಕೇವಲ ಪದಗಳ ಭಾಷಾಂತರವಲ್ಲ. ಅದು ಒಂದು ದೇಶ ಅಥವಾ ಪ್ರಾಂತ್ಯದ ಸಂಸ್ಕೃತಿಯನ್ನು ವರ್ಗಾಯಿಸುವ ಸೂಕ್ಷ್ಮ ಪ್ರಕ್ರಿಯೆ. ಮೂಲ ಲೇಖಕರ ಆಶಯಕ್ಕೆ ಧಕ್ಕೆಯಾಗದಂತೆ ಮತ್ತೊಂದು ಭಾಷೆಗೆ ತರುವುದು ಸವಾಲಿನ ಕೆಲಸ. ಸಾಹಿತ್ಯ ಲೋಕದಲ್ಲಿ ಅನುವಾದವನ್ನು ಎರಡನೇ ದರ್ಜೆಯ ಕೆಲಸ ಎಂದು ಪರಿಗಣಿಸಬಾರದು; ಅದು ಮೂಲ ಕೃತಿ ರಚನೆಯಷ್ಟೇ ಶ್ರಮದಾಯಕ ಮತ್ತು ಕ್ರಿಯಾತ್ಮಕವಾದುದು’ ಎಂದರು.

ಬಿಡುಗಡೆಯಾದ ಕೃತಿಗಳು: ಆಲಕೆರೆ ಜೆ.ರಾಮಲಿಂಗೇಗೌಡರು ಅನುವಾದಿಸಿದ ‘ನಂಬಲಸಾಧ್ಯವಾದ ಸಾಯಿಬಾಬಾ’, ‘ಡೀಪ್ ವರ್ಕ್’, ‘ನೇತಾಜಿ’ ಹಾಗೂ ‘ಸಮುದ್ರದತ್ತ ಸವಾರರು’ ಕೃತಿಗಳನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.

ಮಹಾರಾಣಿ ಮಹಿಳಾ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಸಹ ಪ್ರಾಧ್ಯಾಪಕಿ ಬಿ.ಎಸ್.ದಿವ್ಯಾ, ನಿವೃತ್ತ ಹಿಂದಿ ಪ್ರಾಧ್ಯಾಪಕ ಪ್ರೊ.ಜಿ.ಚಂದ್ರಶೇಖರ್, ಮಹಾರಾಣಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕಿ ರೇಖಾ ಮ್ಯಾಥ್ಯೂ ಕೃತಿಗಳನ್ನು ಪರಿಚಯಿಸಿದರು.

ಪರಿಷತ್ ಕಾರ್ಯದರ್ಶಿ ಎನ್.ಸಿ.ತಮ್ಮಣ್ಣಗೌಡ, ಪ್ರಕಾಶಕ ಎಚ್.ಎಸ್.ಗೋವಿಂದಗೌಡ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-39-1204261686

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.