ಹುಣಸೂರು: ಆದಿವಾಸಿ ಗಿರಿಜನ ಸಮುದಾಯದ ಸ್ಥಿತಿಗತಿ,ಧಾರ್ಮಿಕ ಸಂಪ್ರದಾಯ, ಅಂತರ್ಜಾತಿ ವೈವಾಹಿಕ ಜೀವನ ಕುರಿತಂತೆ ಕ್ರೈಸ್ಟ್ ವಿವಿಯ ಬಿಸಿನೆಸ್ ಮತ್ತು ಮ್ಯಾನೇಜ್ಮೆಂಟ್ ವಿಭಾಗದ ಸಂಶೋಧನಾ ತಂಡದ ಸದಸ್ಯರು ತಾಲ್ಲೂಕಿನ ನೇರಳಕುಪ್ಪೆ, ಹೆಬ್ಬಳ್ಳ ಮತ್ತು ಶೆಟ್ಟಹಳ್ಳಿ ಹಾಡಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

ದಕ್ಷಿಣ ಭಾರತದ ಗಿರಿಜನ ಸಮುದಾಯದ ಸ್ಥಿತಿಗತಿ ಮತ್ತು ಈಶಾನ್ಯ ಭಾರತದ ಗಿರಿಜನರ ಜೀವನ ಶೈಲಿ ಕುರಿತಂತೆ ಈ ಅಧ್ಯಯನವನ್ನು ಸಂಶೋಧಕ ಪ್ರಾಧ್ಯಾಪಕರಾದ ಉಷಾ ನಡೆಸಿದ್ದು, ಅಧ್ಯಾಯನಕ್ಕೆ ಈ ಹಾಡಿಗಳ ಮಹಿಳೆಯರೊಂದಿಗೆ ಜೀವನದ ಆಗು ಹೋಗುಗಳು, ಕೌಟುಂಬಿಕ, ಆರೋಗ್ಯ ನಿರ್ವಹಣೆ ಒಳಗೊಂಡಂತೆ ಹಲವು ವಿಷಯಗಳಿಗೆ ಸಂಬಂಧಿಸಿ ಸಂವಾದ ನಡೆಸಿದ್ದಾರೆ ಎಂದು ಡೀಡ್ ಸಂಸ್ಥೆಯ ನಿರ್ದೇಶಕ ಶ್ರೀಕಾಂತ್ ತಿಳಿಸಿದ್ದಾರೆ.

ಗಿಡ ಮೂಲಿಕೆ ತಜ್ಞೆ ಮಾಸ್ತಮ್ಮ ಅವರೊಂದಿಗೆ ಅಧ್ಯಯನ ತಂಡ ಮಾತನಾಡಿ, ಗಿಡಮೂಲಿಕೆ ಔಷಧೋಪಚಾರ ಕುರಿತು ಚರ್ಚಿಸಿ, ಗಿರಿಜನರು ಸರ್ಕಾರಿ ಆರೋಗ್ಯ ವ್ಯವಸ್ಥೆಗೆ ಸಂಬಂಧಿಸಿ ಯಾವ ರೀತಿ ಹೊಂದಿಕೊಂಡಿದ್ದಾರೆ ಎಂದು ಮಾಹಿತಿ ಸಂಗ್ರಹಿಸಿದರು. ಆದಿವಾಸಿ ಗಿರಿಜನರು ಹಾಡಿಗಳಲ್ಲಿ ಸಣ್ಣ ಪ್ರಮಾಣದ ಚಿಲ್ಲರೆ ಅಂಗಡಿ ವ್ಯಾಪಾರ ನಡೆಸಿದ್ದು ಅವರ ಪರವಾಗಿ ಆದಿವಾಸಿ ಗಿರಿಜನ ಮಾಸ್ತಯ್ಯ ಮಾಹಿತಿ ನೀಡಿದರು.

ಈಶಾನ್ಯ ಭಾರತದದಲ್ಲಿನ ಗಿರಿಜನರು ಸಾಮಾಜಿಕ,ಸಾಂಸ್ಕೃತಿಕವಾಗಿ ಅಭಿವೃದ್ಧಿ ಹೊಂದಿದ್ದು, ದಕ್ಷಿಣ ಭಾರತದಲ್ಲಿ ಅತಿ ಹಿಂದುಳಿದ ಗಿರಿಜನರಿದ್ದಾರೆ. ಈಶಾನ್ಯ ಭಾಗದ ಗಿರಿಜನರ ಅಭಿವೃದ್ಧಿಗೆ ಮೂಲಕಾರಣ ಅವರ ಸಂಸ್ಕೃತಿ, ಭಾಷೆ, ಆಚಾರ, ವಿಚಾರಗಳು ಅವರ ನಿಯಂತ್ರಣದಲ್ಲಿ ಉಳಿದಿದ್ದು ಸ್ವಾಭಿಮಾನ ಬದುಕಿಗೆ ಸಹಕಾರಿ ಆಗಿದೆ ಎಂದು ತಿಳಿಸಿದರು. ಅಧ್ಯಯನ ತಂಡಕ್ಕೆ ಆದಿವಾಸಿ ಗಿರಿಜನ ಬೋಜಮ್ಮ,ರಾಮು ಸಹಕರಿಸಿ ಸಮಗ್ರ ಮಾಹಿತಿ ನೀಡಿದರು ಎಂದು ಶ್ರೀಕಾಂತ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-37-752561686

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.