ಮೈಸೂರು: ‘ನಾನು ವಿ.ವಿ.ಯ ಸಾರ್ವಜನಿಕ ಆಸ್ತಿ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಿಸುವ ಶಾಸನಬದ್ಧ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ದಾಖಲೆ ಸಹಿತ ಬಹಿರಂಗಪಡಿಸಿದ ಅಕ್ರಮಗಳ ಬಗ್ಗೆ ತನಿಖೆ ನಡೆಸುವ ಬದಲಿಗೆ, ಧ್ವನಿ ಅಡಗಿಸಲು ಮತ್ತು ನನ್ನ ವಿರುದ್ಧ ಕ್ರಮ ಕೈಗೊಳ್ಳುವ ಕಾನೂನು ಬಾಹಿರವಾದ ಖಂಡನಾ ನಿರ್ಣಯವನ್ನು ಸಿಂಡಿಕೇಟ್ ಸಭೆಯಲ್ಲಿ ಕೈಗೊಳ್ಳಲಾಗಿದೆ. ಇದರ ಹಿಂದೆ ಷಡ್ಯಂತ್ರ ನಡೆದಿದೆ’ ಎಂದು ಮೈಸೂರು ವಿ.ವಿ. ಸಿಂಡಿಕೇಟ್ ಸದಸ್ಯ ಟಿ.ಆರ್. ಚಂದ್ರಶೇಖರ್ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಕುಲಪತಿ ಪ್ರೊ. ಲೋಕನಾಥ್ ನಿರ್ದೇಶನದಂತೆ, ಪ್ರಭಾರ ಕುಲಸಚಿವರ ಹೆಸರಿನಲ್ಲಿ ನನ್ನ ವಿರುದ್ಧ ಪತ್ರಿಕಾ ಪ್ರಕಟಣೆ ನೀಡಲಾಗಿದೆ’ ಎಂದು ದೂರಿದ್ದಾರೆ.

‘ಮೇ 6ರ ಸಿಂಡಿಕೇಟ್ ಸಭೆಯಲ್ಲಿ ಅಧಿಕೃತ ಕಾರ್ಯಸೂಚಿ ಮುಗಿಯುವ ಮುನ್ನವೇ, ಕುಲಪತಿ ಸೂಚನೆಯಂತೆ ಇತರ ಸದಸ್ಯರಿಗೆ ನನ್ನ ವಿರುದ್ಧ ಮಾತನಾಡಲು ಅವಕಾಶ ನೀಡಲಾಯಿತು. ಮೂರು ಗಂಟೆ ನನ್ನ ವಿರುದ್ಧ ಎಲ್ಲರೂ ಮಾತನಾಡಿದರು. ನಾನು ಉತ್ತರಿಸಲು ಪ್ರಯತ್ನಿಸಿದಾಗ, ಕುಲಪತಿ ಅವಕಾಶ ಕೊಡಲಿಲ್ಲ. ಇದು ನೈಸರ್ಗಿಕ ನ್ಯಾಯ ತತ್ವದ ಸ್ಪಷ್ಟ ಉಲ್ಲಂಘನೆ’ ಎಂದು ತಿಳಿಸಿದ್ದಾರೆ.

‘ಮಾಧ್ಯಮಕ್ಕೆ ನೀಡಿರುವ ಅನಧಿಕೃತ ಪ್ರಕಟಣೆ, ಕಾನೂನುಬಾಹಿರ ಸಿಂಡಿಕೇಟ್ ನಿರ್ಣಯ ಹಾಗೂ ಕೋಟ್ಯಂತರ ರೂಪಾಯಿ ಟೆಂಡರ್ ಅಕ್ರಮಗಳ ವಿರುದ್ಧ ರಾಜ್ಯಪಾಲರು, ಹೈಕೋರ್ಟ್, ಲೋಕಾಯುಕ್ತ, ಇಡಿ ಹಾಗೂ ಸಿಬಿಐಗೆ ದಾಖಲೆ ಸಹಿತ ದೂರು ಸಲ್ಲಿಸಲು ಸಿದ್ಧನಿದ್ದೇನೆ. ಸತ್ಯದ ಪರವಾದ ನನ್ನ ಹೋರಾಟ ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-39-963049323

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.