ಮೈಸೂರು: ‘ಶೈಕ್ಷಣಿಕ ಅವಧಿಯು ಜ್ಞಾನಕ್ಕಷ್ಟೇ ಸೀಮಿತ ಆಗಬಾರದು. ಅದು ಪರಿಣಾಮಕಾರಿ ಯೋಚನೆ, ನಾಯಕತ್ವ, ಹೊಸತನ ಹುಡುಕುವ ಸಮಯವಾಗಿ ಬಳಕೆಯಾಗಬೇಕು’ ಎಂದು ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ವ್ಯವಹಾರ ಆಡಳಿತ ವಿಭಾಗವು ಶನಿವಾರ ಆಯೋಜಿಸಿದ್ದ ಬಿ.ಎನ್.ಬಹದ್ದೂರ್ ನಿರ್ವಹಣಾ ವಿಜ್ಞಾನ ಸಂಸ್ಥೆಯ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ತಂತ್ರಜ್ಞಾನದ ಕ್ಷಿಪ್ರಗತಿಯ ಬದಲಾವಣೆಗೆ ಶಿಕ್ಷಣ ವಿಧಾನವು ರೂಪಾಂತರಗೊಳ್ಳಬೇಕಾದ ಕಾಲದಲ್ಲಿ ನಾವು ಇದ್ದೇವೆ. ಹಿರಿಯ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಅನುಭವ ಒಂದುಗೂಡಿದಾಗ ಈ ಸವಾಲು ಮೀರಿ ನಿಲ್ಲಲು ಸಾಧ್ಯ. ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಲ್ಲಿ ಕೌಶಲ ಹೆಚ್ಚಿಸಲು ಆದ್ಯತೆ ನೀಡುತ್ತಿದೆ’ ಎಂದರು.

‘ಬಲವಾದ ಹಿರಿಯ ವಿದ್ಯಾರ್ಥಿಗಳ ಒಕ್ಕೂಟವು ಸಂಸ್ಥೆಯ ಬೆನ್ನೆಲುಬು ಇದ್ದಂತೆ. ಬೆಳ್ಳಿ ಹಬ್ಬದ ನೆಪದಲ್ಲಿ ಬಿ.ಎನ್. ಬಹದ್ದೂರ್ ನಿರ್ವಹಣಾ ವಿಜ್ಞಾನ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಒಂದುಗೂಡಿರುವುದು ಹೆಮ್ಮೆಯ ವಿಚಾರ. ಸಂಸ್ಥೆಯ ಅಭಿವೃದ್ಧಿಗಾಗಿ ಎಲ್ಲರೂ ಜೊತೆಯಾಗಿ ಸಾಗೋಣ’ ಎಂದು ಸಲಹೆ ನೀಡಿದರು.

ಬ್ರಿಗೇಡ್ ಗ್ರೂಪ್ನ ಅಧ್ಯಕ್ಷ ಎಂ.ಆರ್.ಜೈಶಂಕರ್ ಮಾತನಾಡಿ, ‘ಮಾನಸ ಗಂಗೋತ್ರಿ ಆವರಣದ ವಾತಾವರಣವು ಕಲಿಕೆಗೆ ಪೂರಕವಾಗಿ ಇತ್ತು. ಈ ಸಂಸ್ಥೆ ಅನೇಕ ಅವಕಾಶ ನೀಡಿದೆ. ಉದ್ಯಮ ವಲಯದ ಯಶಸ್ಸಿಗೆ ಇಲ್ಲಿನ ಶಿಕ್ಷಕರ ಮಾರ್ಗದರ್ಶನವೂ ಇದೆ’ ಎಂದರು.

ನಿವೃತ್ತಿ ಹೊಂದುತ್ತಿರುವ ಬಿ.ಎನ್.ಬಹದ್ದೂರ್ ನಿರ್ವಹಣಾ ವಿಜ್ಞಾನ ಸಂಸ್ಥೆಯ ಪ್ರೊ.ಡಿ.ಆನಂದ್ ಅವರನ್ನು ಸನ್ಮಾನಿಸಲಾಯಿತು.

ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರೊ.ಎಸ್.ಜೆ.ಮಂಜುನಾಥ್, ಪ್ರೊ.ಬಿ.ಶಿವರಾಜ್, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ, ಸಂಸ್ಥೆಯ ಅಧ್ಯಕ್ಷ ಪ್ರೊ.ಆರ್.ಮಹೇಶ್, ಸುಭಾಷ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-39-574068367

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.