ಮೈಸೂರು: ಇಲ್ಲಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು (ವಿವಿಸಿಇ)ಯಲ್ಲಿ ಶನಿವಾರ 2023–25ನೇ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ (ಭಾಗ–2) ಸಂಭ್ರಮದಿಂದ ನಡೆಯಿತು.

126 ಅಭ್ಯರ್ಥಿಗಳು ಸ್ನಾತಕೋತ್ತರ ಕೋರ್ಸ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಪದವಿಗಳನ್ನು ಸ್ವೀಕರಿಸಿದರು. ಇವರಲ್ಲಿ 115 ವಿದ್ಯಾರ್ಥಿಗಳು ಎಂಬಿಎ ಹಾಗೂ 11 ಮಂದಿ ಎಂ.ಟೆಕ್ ಪದವಿಗಳನ್ನು ಪಡೆದರು.

ಆಂಧ್ರಪ್ರದೇಶದ ಕಾಕಿನಾಡದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್ನ ಕ್ಯಾಂಪಸ್ ಮುಖ್ಯಸ್ಥ ಪ್ರೊ.ರವೀಂದ್ರ ಸಾರದಿ ವಡ್ಲಾಮುಡಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

‘ಪದವಿ ಪ್ರದಾನ ಸಮಾರಂಭವು ಕೇವಲ ಶೈಕ್ಷಣಿಕ ಸಾಧನೆಯ ಸಂಭ್ರಮವಲ್ಲ. ಅದು ವಿದ್ಯಾರ್ಥಿಗಳು ಕಲಿಕಾ ವಾತಾವರಣದಿಂದ ಸವಾಲುಗಳಿರುವ ನೈಜಜಗತ್ತಿಗೆ ಕಾಲಿಡುವ ಮಹತ್ವದ ಘಟ್ಟವಾಗಿದೆ’ ಎಂದರು.

ವಿವೇಕ ಬೆಳೆಸಿಕೊಳ್ಳಬೇಕು: ‘ದೇಶವುತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಪ್ರಬಲ ಸಂಗಮವನ್ನು ಅನುಭವಿಸುತ್ತಿದೆ. ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್ ಮತ್ತು ಡಿಜಿಟಲ್ ರೂಪಾಂತರದಂತಹ ಕ್ಷೇತ್ರಗಳು ಉದ್ಯಮಗಳನ್ನು ಮರುರೂಪಿಸುತ್ತಿವೆ. ವ್ಯವಸ್ಥಾಪನಾ ಹಾಗೂ ತಾಂತ್ರಿಕ ಪದವೀಧರರಿಗೆ ಹೊಸಅವಕಾಶಗಳನ್ನು ತೆರೆದಿಡುತ್ತಿವೆ. ಈತಾಂತ್ರಿಕ ಪ್ರಗತಿಗಳೊಂದಿಗೆ ಸವಾಲುಗಳೂ ಬರುತ್ತವೆ. ಪದವೀಧರರು ಅವಕಾಶಗಳನ್ನು ಸಮತೋಲನದಿಂದ ಬಳಸುವ ವಿವೇಕ ಬೆಳೆಸಿಕೊಳ್ಳಬೇಕು’ ಎಂದರು.

ಎಂಬಿಎ ವಿಭಾಗದಲ್ಲಿ ಕಾವ್ಯಾ ಎನ್. ಪ್ರಥಮ ರ್ಯಾಂಕ್ ಗಳಿಸಿದರೆ, ಅನನ್ಯಾ ಕೆ.ಎಂ., ನಿಶ್ಮಿತಾ ಡಿ., ಹೇಮಾದ್ರಿ ಜೆ., ಹಂಸಾ ಜಿ.ಎನ್., ಪ್ರಿಯದರ್ಶಿನಿ ಎಂ.ಎಸ್., ಸ್ಮಿತಾ ಎಂ.ಆರ್., ಸ್ತವ್ಯಶ್ರೀ ವಿ., ಪ್ರತಿಭಾ ಆರ್. ಹಾಗೂ ವಂದಿತಾ ಸಿ.ಜೆ. ನಂತರದ ರ್ಯಾಂಕ್ ಪಡೆದರು. ಎಂ.ಟೆಕ್. ವಿಭಾಗದಲ್ಲಿ ಶ್ವೇತಾ ಎಂ.ಎಸ್. ಮೊದಲ ರ್ಯಾಂಕ್ ಗಳಿಸಿದರು.

ಪ್ರಾಂಶುಪಾಲ ಬಿ. ಸದಾಶಿವಗೌಡ ವರದಿ ಮಂಡಿಸಿದರು. ಉಪ ಪ್ರಾಂಶುಪಾಲೆ ಹಾಗೂ ಶೈಕ್ಷಣಿಕ ವಿಭಾಗದ ಡೀನ್ ಶೋಭಾ ಶಂಕರ್, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಉಪಾಧ್ಯಕ್ಷ ಬಿ. ಶಿವಲಿಂಗಪ್ಪ, ಕಾರ್ಯದರ್ಶಿ ಪಿ. ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣವರ ಮತ್ತು ಪರೀಕ್ಷಾ ನಿಯಂತ್ರಕ ಸುದೇವ್ ಎಲ್.ಜೆ. ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-39-247474069

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.