ಮೈಸೂರು: ‘ಯುವ ಪೀಳಿಗೆಯು ಹಿರಿಯ ಸಾಹಿತಿಗಳ ಜೀವನ ತಿಳಿಯಬೇಕು. ಅವರ ಬಗ್ಗೆ, ಕೃತಿಗಳನ್ನು ಓದುವ ಮೂಲಕ ಅರಿಯಬೇಕು’ ಎಂದು ವಿದ್ವಾಂಸ ಟಿ.ವಿ ವೆಂಕಟಾಚಲ ಶಾಸ್ತ್ರಿ ಹೇಳಿದರು.

ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಮುದ್ದುರಾಮ ಬಳಗದ ಸಹಯೋಗದಲ್ಲಿ ಬಿಎಂಶ್ರೀ ಸಭಾಂಣದಲ್ಲಿ ಬುಧವಾರ ನಡೆದ ‘ಕೆಸಿಎಸ್ ಕಾವ್ಯ ಕುತೂಹಲ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

‘ಸಾಹಿತ್ಯ ಕ್ಷೇತ್ರದಲ್ಲಿ ಕೊಡುಗೆ ನೀಡಲು, ಸಾಹಿತ್ಯಾಸಕ್ತಿ ಹೊಂದಲು ಇದು ಅಗತ್ಯ. ಕವಿಗಳೂ ಅಷ್ಟೇ ಯುವ ಬರಹಗಾರರನ್ನು ಪ್ರೋತ್ಸಾಹಿಸಲು ಮುಂದಾಗಬೇಕು. ಅವರ ಪ್ರಾಥಮಿಕ ಬರಹಗಳನ್ನು ಹೀಗಳಿಯದೆ ಮತ್ತಷ್ಟು ಬರೆಯುವಂತೆ ಉತ್ತೇಜಿಸಬೇಕು’ ಎಂದರು.

‘ಕೆ.ಸಿ.ಶಿವಪ್ಪ(ಕೆಸಿಎಸ್) ಅವರು ವಿನಯ, ವಿಶ್ವಾಸ, ವಿವೇಕಗಳ ಸಾರ್ಥಕ ಸಂವಹನದಲ್ಲಿ ಜೀವನ ರೂಪಿಸಿಕೊಂಡಿದ್ದಾರೆ. ಡಿವಿಜಿ, ಮಾಸ್ತಿ, ವಿ.ಸೀತಾರಾಮಯ್ಯ ಅವರಂಥ ಅನೇಕರಿಂದ ಉಪನ್ಯಾಸಗಳನ್ನು ಆಯೋಜಿಸಿ ಸಾಹಿತ್ಯ ಕ್ಷೇತ್ರದ ಪ್ರಗತಿಗೆ ಕೊಡುಗೆ ನೀಡಿದ್ದಾರೆ’ ಎಂದರು.

‘ಸ್ವತಃ ಸಾಹಿತ್ಯದ ಸಂಬಂಧದಲ್ಲಿ ಕವಿತೆಗಳು, ವಿಚಾರ ವಿಮರ್ಶೆಗಳು, ಮುಕ್ತಕಗಳ ಮಂಜರಿಗಳನ್ನು ರಚಿಸಿ ಸಾಕಷ್ಟು ಸಮೃದ್ಧಿಗೊಳಿಸಿದ್ದಾರೆ. ತಮ್ಮ 30 ಸಾವಿರ ಮುದ್ದುರಾಮ ಚೌಪದಿಗಳಲ್ಲಿ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಕೃತಿಗೆ ಸ್ಪರ್ಧಿಸುವಂತ ಮೌಲ್ಯ, ವಿಷಯ ವಿಸ್ತಾರವನ್ನು ತಲುಪಿದ್ದಾರೆ’ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಎಚ್ಟಿಎಂ ನಿವೃತ್ತ ಅಧ್ಯಕ್ಷ ಎನ್.ರಾಮಾನುಜ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ, ಮುದ್ದುರಾಮ ಪ್ರತಿಷ್ಠಾನ ಉಪಾಧ್ಯಕ್ಷ ನೀಲಗಿರಿ ತಳವಾರ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-51-430443034

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.