ನಾಗಮಂಗಲ: ಪದವಿ ನಂತರದ ಜೀವನ ಅತ್ಯಂತ ದೊಡ್ಡ ಪರೀಕ್ಷೆ. ಈ ದೊಡ್ಡ ಪರೀಕ್ಷೆಯಲ್ಲಿ ನಿಮ್ಮ ಬದುಕು ಹಸನಾಗಬೇಕಾದರೆ ಇಂಗ್ಲಿಷ್ ಕಲಿಯಬೇಕು. ಏಕೆಂದರೆ ಇಂಗ್ಲಿಷ್ ಇಂದು ಅವಕಾಶಗಳ ಭಾಷೆಯಾಗಿ ಮಾರ್ಪಾಟಾಗಿದೆ ಎಂದು ಮೈಸೂರಿನ ಪರಿವರ್ತನಾ ಸಮೂಹ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಪ್ರೊ.ಎನ್.ರಾಮು ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಅಂತಿಮ ವರ್ಷದ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಗುರುವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾ ರಂಭದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಉತ್ತಮ ಅಭಿವ್ಯಕ್ತಿ, ಅಧ್ಯಯನ ಹಾಗೂ ನಡವಳಿಕೆ ಎಂಬ ಆಭರಣಗಳನ್ನು ಸದಾ ಅಲಂಕರಿಸಿ. ಪ್ರೀತಿ ಮಾನವತೆ ಭಾವನೆಗಳನ್ನು ಅಳೆಯಲು ಸಾಧ್ಯವಿಲ್ಲ. ಬದುಕಿನಲ್ಲಿ ಅನೇಕ, ಸಮಸ್ಯೆ, ಸವಾಲುಗಳು ಇದ್ದು, ನಮ್ಮ ಅನುಭವ ಮತ್ತು ಸಾಮಾನ್ಯ ಜ್ಞಾನದ ಬಳಕೆಯಿಂದ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ’ ಎಂದು ಹೇಳಿದರು.

‘ಇಂದು ನಾವು ಅವಕಾಶಗಳ ಜೊತೆಗೆ ಸ್ಪರ್ಧಾ ಪ್ರಪಂಚದಲ್ಲಿದ್ದು, ಪ್ರತಿಯೊಬ್ಬರೂ ಸಮಯ, ಹಣ, ಜೀವನದ ಬೆಲೆ ಅರಿತುಕೊಳ್ಳಬೇಕಿದೆ. ಪ್ರತಿಯೊಬ್ಬರಿಗೂ ಒಂದೊಂದು ಬದುಕಿದೆ. ನಾವು ಬಯಸಿದ ಬದುಕು ಸಿಗಿವುದು ಕೇವಲ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಆದುದರಿಂದ ಬರುವ ಬಂದಿರುವ ಬದುಕನ್ನು ಖುಷಿಯಿಂದ ಬದುಕ ಬೇಕಿದೆ’ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೇಯಸ್ ಕೃಷ್ಣನ್ ಮಾತನಾಡಿ, ‘ವಿದ್ಯಾರ್ಥಿಗಳು ಕೆಟ್ಟದನ್ನು ಪಾಠವಾಗಿ ಒಳ್ಳೆಯದನ್ನು ನೆನಪುಗಳಾಗಿ ಕೂಡಿಟ್ಟುಕೊಂಡು ಜೀವನ ಸಾಗಿಸಬೇಕು’ ಎಂದು ಸಲಹೆ ನೀಡಿದರು.

ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಬಿ.ಎಚ್.ಕಾವ್ಯ ಪಿಎಚ್.ಡಿ ಹಾಗೂ ಉನ್ನತ ವ್ಯಾಸಂಗ ಕುರಿತು ಮಾರ್ಗದರ್ಶನ ನೀಡಿದರು. ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಅಂತಿಮ ಪದವಿ ವಿದ್ಯಾರ್ಥಿಗಳಾದ ಮಾನ್ಯ, ಕೀರ್ತನಾ, ಯಶಸ್, ಹಿತೇಶ್, ಶ್ರೀನಿವಾಸ್ ಮಾತನಾಡಿ ಕಾಲೇಜು ಹಾಗೂ ಉಪನ್ಯಾಸಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೊ.ರವಿಕುಮಾರ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಕೆ.ಗಾಯತ್ರಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಮೋಹನ್ ಕುಮಾರ್ ನಾಯಕ್, ಇತಿಹಾಸ ವಿಭಾಗದ ಮುಖ್ಯಸ್ಥೆ ಪ್ರೊ.ಎ.ಬಿ.ಪವಿತ್ರ, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಕನ್ನಿಕಾ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-40-359264742

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.