ನಾಗಮಂಗಲ: ‘ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿತ್ವದ ವೈರುಧ್ಯಗಳಿಗೆ ಸಾಮಾಜಿಕ ಬದ್ಧತೆಯ ಕೊರತೆ ಕಾರಣ. ಎನ್ಎಸ್ಎಸ್ ಶಿಬಿರಗಳು ಸಾಮಾಜಿಕ ಬದ್ಧತೆಯೊಂದಿಗೆ ಸೇವಾಮನೋಭಾವ ಬೆಳೆಸುವಲ್ಲಿ ಸಹಕಾರಿ’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಿಜಿ ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯ ಆವರಣದಲ್ಲಿ ಇತ್ತೀಚೆಗೆ ಎನ್ಎಸ್ಎಸ್ ಘಟಕ, ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್ಎಸ್ಎಸ್ ಪ್ರಾದೇಶಿಕ ನಿರ್ದೇಶನಾಲಯ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯಗಳ ಸಹಯೋಗದಲ್ಲಿ ಆಯೋಜಿಸಿದ್ದ ಏಳು ದಿನಗಳ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಮನುಷ್ಯನ ದೈಹಿಕ ಅಂಗಾಂಗಗಳು, ಮನಸ್ಸು ಮತ್ತು ಆತ್ಮದ ನಡುವೆ ಸಾಮರಸ್ಯ ಇರಬೇಕು. ಪಂಚಕೋಶಗಳ ಏಕೀಕರಣವೇ ನಿಜವಾದ ಯೋಗ. ಮಹಾತ್ಮ ಗಾಂಧಿ ಅನುಸರಿಸಿದ ಹಾಗೂ ಬೋಧಿಸಿದ ಸೇವಾ ತತ್ವಗಳು ಎನ್ ಎಸ್ ಎಸ್ ನ ಜೀವಾಳವಾಗಿವೆ. ನೀವು ಏನನ್ನಾದರೂ ಸಾಧಿಸಬೇಕೆಂದರೆ ಮೊದಲು ನಿಮ್ಮನ್ನು ನೀವು ಮರೆತು ಸೇವೆ ಮಾಡಬೇಕು’ ಎಂದರು. ಕರ್ನಾಟಕ ಎನ್ ಎಸ್ ಎಸ್ ರಾಜ್ಯಾಧಿಕಾರಿ ಪ್ರತಾಪ್ ಲಿಂಗಯ್ಯ ಮಾತನಾಡಿ, ‘ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು 40,000 ಸ್ವಯಂಸೇವಕರನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ’ ಎಂದರು.

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಎನ್ ಎಸ್ ಎಸ್ ಘಟಕದ ಸಂಯೋಜನಾಧಿಕಾರಿ ಪ್ರೊ.ಎ.ಟಿ. ಶಿವರಾಮು ಮಾತನಾಡಿ, ‘ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಸಂಸ್ಕೃತಿ ಸಂಸ್ಕಾರ ಆಧ್ಯಾತ್ಮವನ್ನು ಬೋಧಿಸುವ ಮೇರು ಪೀಠ. ಎನ್ ಎಸ್ ಎಸ್ ರಾಷ್ಟ್ರೀಯ ಭಾವೈಕ್ಯತಾ ಶಿಬಿರವು ಪಂಜಾಬ್, ಹರಿಯಾಣ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ 150ಕ್ಕೂ ಹೆಚ್ಚು ಮಂದಿ ಸ್ವಯಂಸೇವಕರಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ’ ಎಂದರು.

ಆದಿಚುಂಚನಗಿರಿ ವಿಶ್ವವಿದ್ಯಾಲಯ ಕುಲಪತಿ ಎಸ್.ಎನ್. ಶ್ರೀಧರ ಮಾತನಾಡಿದರು. ಬೆಂಗಳೂರು ಗಾಂಧೀ ಭವನದ ನಿರ್ದೇಶಕ ಪ್ರೊ. ಜಿ ಬಿ ಶಿವರಾಜು ಎನ್ಎಸ್ಎಸ್ ಬೆಳೆದು ಬಂದ ದಾರಿ ಕುರಿತು ಮಾತನಾಡಿದರು.

ಶೈಕ್ಷಣಿಕ ಮತ್ತು ಮಾನ್ಯತಾ ವಿಭಾಗದ ಡೀನ್ ಪ್ರೊ.ಬಿ ರಮೇಶ್, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ಸಿಎಲ್ ಶಿವಣ್ಣ, ಪ್ರೊ.ಎಸ್.ಆರ್ ಶಂಕರ್, ಎಸ್ ಕಾಂತರಾಜು, ಸಿ.ಆರ್ ಹೇಮರಾಜ್, ಪ್ರೊ.ಬಿ.ಎನ್ ರವೀಂದ್ರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-40-648478538

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.