ನಾಲತವಾಡ: ‘ಜ್ಞಾನಕ್ಕೆ ಬಡತನ ಅಡ್ಡಿಯಾಗದು. ವಿದ್ಯಾರ್ಥಿಗಳು ಕೀಳರಿಮೆ ಬೆಳೆಸಿಕೊಳ್ಳದೆ ಪರಿಸ್ಥಿತಿ ಎದುರಿಸುವ ಶಕ್ತಿ, ಸಾಮರ್ಥ್ಯ, ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ) ಶಂಕರಗೌಡ ಸೋಮನಾಳ ಹೇಳಿದರು.

ನಾಗರಬೆಟ್ಟದ ಆಕ್ಸ್ಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ₹3 ಕೋಟಿ ಜಿನಿಯನ್ ಶಿಷ್ಯವೇತನ, ಎಂಬಿಬಿಎಸ್ ಶಿಕ್ಷಣಕ್ಕೆ ಆಯ್ಕೆಯಾದ 187 ಸಾಧಕ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕನಸು ಹೊತ್ತ ಮಕ್ಕಳ ಜ್ಞಾನ ಪೋಷಣೆ ಅಸಾಧಾರಣವಾದದ್ದು, ಮೊಬೈಲ್ ಸದ್ಬಳಕೆ ಆಗಬೇಕು. ಒಂದು ಕ್ಷೇತ್ರದಲ್ಲಿ ಸೋತರೂ ಇನ್ನೊಂದು ಕ್ಷೇತ್ರದಲ್ಲಿ ಯಶಸ್ಸಿಗೆ ಪ್ರಯತ್ನಿಸಬೇಕು. ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕದೇ ಸಾಧಿಸುವ ವಾತಾವರಣ ನಿರ್ಮಿಸಬೇಕು’ ಎಂದರು.

ಬೆಂಗಳೂರಿನ ಎಂವಿಜೆ ಮೆಡಿಕಲ್ ಕಾಲೇಜಿನ ಹಿರಿಯ ಪ್ರಾಧ್ಯಾಪಕ, ಪ್ರೀ ಕ್ಲಿನಿಕಲ್ ವಿಭಾಗದ ಮುಖ್ಯಸ್ಥ ಡಾ.ಬಸವರಾಜ ಅಸ್ಕಿ (ಕೊಣ್ಣೂರ) ಮಾತನಾಡಿ, ‘ಎಂ.ಎಸ್.ಪಾಟೀಲರ ಸಾಧನೆ, ಪರಿಶ್ರಮದ ಹಿಂದೆ ದೃಢ ನಿರ್ಧಾರ ಇದೆ. ರೈತ ದೇಶಕ್ಕೆ ಅನ್ನ ನೀಡುವಂತೆ, ಸೈನಿಕ ರಕ್ಷಣೆ ನೀಡುವಂತೆ, ರೈತನ ಮಗ ಶಿಕ್ಷಣ ನೀಡುತ್ತಿರುವುದು ಸಮಾಜಕ್ಕೆ ಅತಿ ದೊಡ್ಡ ಕೊಡುಗೆಯಾಗಿದೆ’ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ ಮಾತನಾಡಿ, ‘₹3 ಕೋಟಿ ಶಿಷ್ಯವೇತನ ಕೊಡುವ ಉದ್ದೇಶ ಬಡ ಪ್ರತಿಭಾವಂತರಿಗೆ ಅನುಕೂಲ ಆಗಲಿ ಎಂದು, ಬಡವರು ಎಂಬಿಬಿಎಸ್ ಶಿಕ್ಷಣಕ್ಕೆ ಆಯ್ಕೆಯಾದರೆ ಅವರ ಕುಟುಂಬದ ಪರಿಸ್ಥಿತಿ ಬದಲಾಗುತ್ತದೆ. ನಮ್ಮ ಸಂಸ್ಥೆಯಲ್ಲಿ ಓದಿದವರಾರೂ ಮನೆಯಲ್ಲಿ ಕೂಡದೆ ಒಂದಿಲ್ಲೊಂದು ಕೆಲಸದಲ್ಲಿದ್ದಾರೆ. ಇದು ಹೆಮ್ಮೆ ಹಾಗೂ ಸಂಸ್ಥೆಯ ಸಾಧನೆ’ ಎಂದರು.

ಇಳಕಲ್ಲನ ವಿಜಯಮಹಾಂತೇಶ ಪದವಿ ಕಾಲೇಜಿನ ಪ್ರಾಂಶುಪಾಲ ಎಸ್.ಬಿ. ಬಿರಾದಾರ, ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ದೇವಿಕಾಸುಬ್ಬಾರಾವ್ ಫೌಂಡೇಷನ್ ಅಧ್ಯಕ್ಷೆಪಲ್ಲವಿ ನಾಡಗೌಡ ಮಾತನಾಡಿದರು. ಹೈದರಾಬಾದ್, ಕೋಲ್ಕತ್ತಾದ ಐಎಎಸ್, ಕೆಎಎಸ್ ತರಬೇತುದಾರ ಗಿರಿಧರ ಪೂಜಾರ ಉಪನ್ಯಾಸ ನೀಡಿದರು. ಮುದ್ದೂರು ಕಂಠಿಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಇಳಕಲ್ಲನ ದೇವಿ ಆರಾಧಕ ಮಹಾಂತೇಶಸ್ವಾಮಿ, ಮಹಿಳಾ ವಿ.ವಿಯ ಶ್ರೀಶೈಲ ಅವಜಿ, ಮುಖಂಡ ಶಿವಾಜಿ ಮೆಟಗಾರ, ಶಿಕ್ಷಕ ಸಂಗಮೇಶ ಹೂಗಾರ ಕೆಂಭಾವಿಯ ಡಿ.ಸಿ. ಪಾಟೀಲ ಇದ್ದರು.

ಮೆಡಿಕಲ್ ಶಿಕ್ಷಣಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅವರ ಪಾಲಕರನ್ನು ಸನ್ಮಾನಿಸಲಾಯಿತು. ಆಕ್ಸ್ಫರ್ಡ್ ಜೀನಿಯಸ್ ಶಿಷ್ಯವೇತನಕ್ಕೆ ಆಯ್ಕೆಯಾದ 80 ವಿದ್ಯಾರ್ಥಿಗಳ ಪೈಕಿ ಮೊದಲ 20 ರ್ಯಾಂಕ್ ಗಳಿಸಿದವರಿಗೆ ಉಚಿತ ಶಿಕ್ಷಣ ಘೋಷಿಸಿ, ಇನ್ನುಳಿದವರಿಗೆ ಶುಲ್ಕದಲ್ಲಿ ರಿಯಾಯಿತಿ ಕೊಡುವುದಾಗಿ ತಿಳಿಸಿ, ವಿಜೇತರಿಗೆ ಸತ್ಕರಿಸಲಾಯಿತು.

ಅಶೋಕ ತಂಡದವರು ಪ್ರಾರ್ಥಿಸಿದರು. ಆನಂದ ನಾವಿ ಸ್ವಾಗತಿಸಿದರು. ವಿಶ್ರಾಂತ ಪ್ರಾಂಶುಪಾಲ ಎನ್.ಎ.ಜಿರಾಜದಾರ ಪ್ರಸ್ತಾವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕ ಇಸ್ಮಾಯಿಲ್ ಮನಿಯಾರ್ ನಿರೂಪಿಸಿದರು. ಪ್ರಾಂಶುಪಾಲ ರೇವಣಸಿದ್ದ ಚಲವಾದಿ (ಮುರಾಳ) ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-26-750623260

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.