ನಾಲತವಾಡ: ಅಬ್ಬರದ ಆಚರಣೆಗಳಿಗೆ ಕಡಿವಾಣ ಹಾಕುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಲ್ಲಿ ನೊಂದವರ ಕಣ್ಣೀರು ಒರೆಸುವ ಪುಣ್ಯದ ಕೆಲಸಗಳನ್ನು ಮಾಡಬೇಕು. ಹೀಗಾದಲ್ಲಿ ಆಚರಣೆಗಳಿಗೆ ಮಹತ್ವ ಸಿಗುತ್ತದೆ ಎಂದು ಕುಂಟೋಜಿ ಸಂಸ್ಥಾನ ಮಠದ ಚನ್ನವೀರ ಶಿವಾಚಾರ್ಯರು ಹೇಳಿದರು.

ಇಲ್ಲಿಯ ಬಸವೇಶ್ವರ ವೃತ್ತದಲ್ಲಿ ಸ್ಥಳೀಯ ದಲಿತಪರ ಸಂಘಟಕರ ಸಹಯೋಗದಡಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಎಲ್ಲರೂ ನಮ್ಮವರೇ ಎನ್ನುತ್ತಲೇ ಪ್ರತ್ಯೇಕ ಜಯಂತಿಗಳನ್ನು ಮಾಡಲಾಗುತ್ತಿದೆ. ಜಾತಿಗೊಂದು ಜಯಂತಿಗಳನ್ನು ಆಚರಿಸುತ್ತಿರುವ ನಮ್ಮಲ್ಲಿ ಸಮಾನತೆ ಬರಲು ಸಾಧ್ಯವೇ? ಜಾತಿಗೊಬ್ಬ ಮಹಾನ್ ಪುರುಷರ ಜಯಂತಿಗಳನ್ನು ಆಚರಿಸಿದರೆ ಅವುಗಳಿಂದ ಮನರಂಜನೆ ಸಿಗುತ್ತದೆ ಹೊರತು, ಸಮಾನತೆ, ಮೊದಲು ನಾವೆಲ್ಲಾ ಒಂದೇ ಎನ್ನುವ ಭಾವನೆ ಬರಲ್ಲ. ಡಾ.ಅಂಬೇಡ್ಕರ್ ಅವರ ಕುರಿತು ಜಯಂತಿಗಳಿಗೆ ಒತ್ತು ಕೊಡದೇ ಅವರ ಜೀವನ, ಸಾಧನೆ ಆಚರಣಿಗೆ ಬರಬೇಕು ಎಂದರು.

ತಾ.ಪಂ ಮಾಜಿ ಉಪಾಧ್ಯಕ್ಷರಾದ ವೈ.ಎಚ್.ವಿಜಯಕರ್, ಸಿದ್ದಣ್ಣ ಕಟ್ಟಿಮನಿ, ಹರೀಶ ನಾಟಿಕರ್, ಸಿ.ಜಿ.ವಿಜಯಕರ್, ವಿದ್ಯಾರ್ಥಿನಿ ಶ್ರೇಯಾ ತಳವಾರ, ತಿಪ್ಪಣ್ಣ ದೊಡಮನಿ, ಕಂದಾಯ ಇಲಾಖೆಯ ಗಂಗಾಧರ ಜೂಲಗುಡ್ಡ, ಭೀಮಣ್ಣ ಗುರಿಕಾರ ಸಂವಿಧಾನ ಮತ್ತು ಸಮಾನತೆ ಕುರಿತು ಮಾತನಾಡಿ, ಅಂಬೇಡ್ಕರ್ ಅವರು ಕೇವಲ ಒಂದೇ ಜಾತಿಗೆ ಸೀಮಿತಗೊಳಿಸಿ ಸಂವಿಧಾನ ರಚಿಸಲಿಲ್ಲ. ಸುಮಾರು ವರ್ಷಗಳಿಂದಲೂ ದಲಿತರನ್ನು ಗುಲಾಮರಾಗಿ ಬಳಸಿಕೊಳ್ಳುವ ಕಾಲವೊಂದಿತ್ತು, ದೇವದಾಸಿ, ಮಲ ಹೊರುವ ಪದ್ಧತಿ, ಚಾಕ್ರೀ ಮಾಡುವ ಎಲ್ಲಾ ಕೆಲಸಗಳಿಗೆ ನಮ್ಮನ್ನು ಬಳಸಿಕೊಳ್ಳುವ ಆ ಸಂದರ್ಭದಲ್ಲಿ ದಲಿತರು ಪಟ್ಟ ಕಷ್ಟ ಅಷ್ಟಿಷ್ಟಲ್ಲ, ನಾವು ಬಲ ಹೀನರಾಗಿದ್ದೇವೆ. ನಿತ್ಯ ಸಂವಿಧಾನದ ಪೂರ್ವ ಪೀಠಿಕೆ ಓದಬೇಕು. ನಮ್ಮನ್ನು ಜೀತ ಪದ್ಧತಿಯಿಂದ ನಮ್ಮನ್ನು ನಾವು ಮುಕ್ತಗೊಳಿಸಿಕೊಳ್ಳಬೇಕು ಎಂದರು.

ಸನ್ಮಾನ: ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಶಂಕರರಾವ್ ದೇಶಮುಖ, ಮಹಾಂತೇಶ ಗಂಗನಗೌಡ್ರ, ಚಂದ್ರಶೇಖರ ಮೇಟಿ, ಅಂಜುಮನ್ ಸಮೀತಿಯ ಅಧ್ಯಕ್ಷರಾದ ಎಲ್.ಎಚ್.ಅವಟಿ, ಎಚ್.ಟಿ.ಕುರಿ, ಕಾಂತು ಹಿರೇಮಠ, ಬಾಲಚಂದ್ರ ಹುಲ್ಲೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-26-30474625

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.