ನಾಲತವಾಡ: ಸ್ಥಳೀಯ ವೀರೇಶ್ವರ ಪ್ರೌಢಶಾಲೆಯಲ್ಲಿ ರಕ್ಕಸಗಿ ಕ್ಲಸ್ಟರ್, ಆಲೂರು, ಮುರಾಳ, ಅಡವಿಸೋಮನಾಳ, ನಾಲತವಾಡ ಕ್ಲಸ್ಟರ್ ನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಎಸ್ಡಿಎಂಸಿ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.

‘ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009 ಜಾರಿಯಾದ ನಂತರ ಸಮುದಾಯ ಭಾಗವಹಿಸುವಿಕೆಗೆ ಮತ್ತಷ್ಟು ಕಾನೂನಾತ್ಮಕ ಒತ್ತಾಸೆ ಬಂದಿದ್ದು, ಹೆಚ್ಚಿನ ಕಾನೂನಿನ ಬೆಂಬಲ ಸಿಕ್ಕಿದೆ. ಪಿ.ಎಂ ಶ್ರೀ ಯೋಜನೆಯಲ್ಲಿ ಕೋಟಿಗಟ್ಟಲೆ ಹಣ ಶಾಲೆಯ ಅಭಿವೃದ್ಧಿಗೆ ಬರುತ್ತದೆ. ಸರ್ಕಾರ ಶಾಲೆಗಳಿಗೆ ಅನುದಾನ ಕೊಡಲು ತುದಿಗಾಲಲ್ಲಿ ನಿಂತಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು. 15 ನೇ ಹಣಕಾಸು ಆಯೋಗದ ಪ್ರಕಾರ ಗ್ರಾಮೀಣ ಪ್ರದೇಶದ ಶಾಲೆಯ ಅಭಿವೃದ್ಧಿಯು ಗ್ರಾಮ ಪಂಚಾಯಿತಿಯ ಸುಪರ್ದಿಗೆ ಬಂದಿದೆ’ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ. ದಮ್ಮೂರಮಠ ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿರುವ ಏಕೈಕ ಸರ್ಕಾರಿ ಸಂಸ್ಥೆ ಶಾಲೆ, ಸರ್ಕಾರಿ ಶಾಲೆಗಳು ಮುಚ್ಚಿದರೆ ಧ್ವಜಾರೋಹಣ ಮಾಡುವವರು ಯಾರು? ಪಟ್ಟಣ ವ್ಯಾಪ್ತಿಯ ಸರ್ಕಾರಿ ಶಾಲೆಗೆ ಶೌಚಾಲಯ, ಕಾಂಪೌಂಡ್ ನಿರ್ಮಾಣ ಮಾಡುವವರು ಯಾರು? ರಾಷ್ಟ್ರೀಯ ಹಬ್ಬಗಳ ಮಹತ್ವ ತಿಳಿಸುವ ಶಾಲೆ ಮುಚ್ಚಿದರೆ ಗತಿ ಏನು? ಎಂಬ ಎಸ್ಡಿಎಂಸಿ ಪದಾಧಿಕಾರಿಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು

ಬಿಇಒ ಬಸಪ್ಪ ಸಾವಳಗಿ ಶಾಲಾಭಿವೃದ್ಧಿ ಸಮಿತಿಯ ಕರ್ತವ್ಯಗಳನ್ನು ಹೇಳಿದರು. ಬಿಆರ್ ಪಿ ಕಾಶಿನಾಥ ಸಜ್ಜನ, ಶಿಕ್ಷಕರ ಸಂಘದ ಅಧ್ಯಕ್ಷ ಬಸನಗೌಡ ಮುದ್ನೂರ, ಪ್ರಧಾನ ಕಾರ್ಯದರ್ಶಿ ಎನ್.ಎಸ್. ತುರುಡಗಿ,ಇಸಿಒ ಅಮೋಘಸಿದ್ಧ ಬಗಲಿ ಮಾತನಾಡಿದರು. ಮುಖ್ಯಶಿಕ್ಷಕ ಜಗದೀಶ ಸಜ್ಜನ, ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಆಲಕೊಪ್ಪರ, ಸಿಆರ್ ಪಿಗಳಾದ ಗಣೇಶ ಬಶೆಟ್ಟಿ, ಎಸ್.ಎಸ್ ಭಾವಿಕಟ್ಟಿ, ಸರಸ್ವತಿ, ಅಧ್ಯಕ್ಷ ಲಕ್ಕಪ್ಪ ನಾಗರಬೆಟ್ಟ, ಗುರು ತಂಗಡಗಿ, ಎ.ಎಚ್.ಖಾಜಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-26-1410160657

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.