ನಾಲತವಾಡ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮುದ್ದೇಬಿಹಾಳ ತಾಲ್ಲೂಕು ಘಟಕಕ್ಕೆ ಚುನಾವಣೆ ಮೂಲಕ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ಸಮೀಪದ ರಕ್ಕಸಗಿ ಕೆಪಿಎಸ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಬಸನಗೌಡ ಮುದ್ನೂರ, ‘ಕಳೆದ ಅವಧಿಯಲ್ಲಿ ಭ್ರಷ್ಟಾಚಾರ ರಹಿತವಾಗಿ ಹಾಗೂ ಪಾರದರ್ಶಕವಾಗಿ ಐದು ವರ್ಷಗಳಿಂದ ಶಿಕ್ಷಕರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತ ಬಂದಿದ್ದೇವೆ. ಅದಕ್ಕಾಗಿ ಶಿಕ್ಷಕರು ಪುನಃ ಜವಾಬ್ದಾರಿಯುತ ಅಧಿಕಾರ ನೀಡಿದ್ದು, ಮುಂಬರುವ ದಿನಗಳಲ್ಲಿ ಶಿಕ್ಷಕರ ಸಮಸ್ಯೆಗಳಿಗೆ ಹೆಚ್ಚಿನ ರೀತಿಯಲ್ಲಿ ಸ್ಪಂದಿಸಿ ಕಾರ್ಯ ನಿರ್ವಹಿಸುತ್ತೇವೆ’ ಎಂದು ತಿಳಿಸಿದರು.

ಮುದ್ದೇಬಿಹಾಳ ತಾಲ್ಲೂಕು ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಸ್. ತುರುಡಗಿ ಮಾತನಾಡಿ, ‘ಪಾರದರ್ಶಕವಾಗಿ ಚುನಾವಣೆ ಎದುರಿಸಿ ಆಯ್ಕೆಯಾಗಿದ್ದೇವೆ. ಆಯ್ಕೆಯಾದ ಪದಾಧಿಕಾರಿಗಳೆಲ್ಲರೂ ಕ್ರೀಯಾಶೀಲರಾಗಿದ್ದು, ಉತ್ತಮ ಕಾರ್ಯ ನಿರ್ವಹಣೆ ಮಾಡುವ ಭರವಸೆ ಇದೆ’ ಎಂದರು.

ಐ.ಎ.ಹಿರೇಮಠ, ರೇಣುಕಾ ಹಿರೇಮಠ,ವಿ.ಎಸ್.ಮಳಗಿ ಮಾತನಾಡಿದರು. ಬಿ.ಎಚ್.ಮುದನೂರ, ಎ.ಎಚ್.ಖಾಜಿ, ಬಿ.ಎಚ್. ಭಗವತಿ, ಭರತೇಶ ಹೊಳಿ, ನಾಗಪ್ಪ ತುರುಡಗಿ, ಶಾಂತೂ ಬಿರಾದಾರ, ಶೈಲಾ ಗೊಂಗಡಿ, ಎಸ್.ಎಸ್.ಚೀರಲದಿನ್ನಿ, ಎ.ಸಿ.ಕಸಬೇಗೌಡರ, ಆರ್.ಎಸ್.ಹಿರೇಮಠ, ಎನ್.ಎಸ್ ಅಥಣಿ ಇವರನ್ನು ಮುಖ್ಯಶಿಕ್ಷಕ ಎಸ್.ಎಸ್.ರಾಮಥಾಳ ಸನ್ಮಾನಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಶರಣಪ್ಪ ನಾಡಗೌಡ, ಶಿಕ್ಷಕರಾದ ಜಲಜಾಕ್ಷಿ ಗದಗೀನ, ವಿರುಪಾಕ್ಷಪ್ಪ ಮಳಗಿ, ಗೀತಾಂಜಲಿ ದೇಶಮುಖ, ಪ್ರಕಾಶ ಮಂಕಣಿ, ಬಸಮ್ಮ ಟಕ್ಕಳಕಿ ಸೇರಿದಂತೆ ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-26-205245943

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.