ನಂಜನಗೂಡು: ‘ಮಾನವೀಯತೆ ಮತ್ತು ಮೌಲ್ಯಗಳು ಜೀವನದ ಭಾಗವಾಗಬೇಕು. ಸಮಯದ ಸದ್ಬಳಕೆಯಿಂದ ಯಶಸ್ಸನ್ನು ಪಡೆಯಬಹುದು’ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಎಸ್.ರಾಘವೇಂದ್ರ ಹೇಳಿದರು.

ಸುತ್ತೂರು ಕ್ಷೇತ್ರದಲ್ಲಿ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠದಿಂದ ನಡೆದ ಆಯುರ್ವೇದ, ವಾಕ್–ಶ್ರವಣ, ನರ್ಸಿಂಗ್ ವಿದ್ಯಾರ್ಥಿಗಳ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.

‘ಜೀವನದ ಪ್ರತಿಯೊಂದು ಕ್ಷಣವೂ ಅಮೂಲ್ಯ. ಅರ್ಥಪೂರ್ಣವಾಗಿ ಬದುಕಬೇಕು’ ಎಂದರು.

ಜೆಎಸ್ಎಸ್ ಆಯುರ್ವೇದ ವೈದ್ಯಕೀಯ ವಿದ್ಯಾಲಯದ ಪಂಚಕರ್ಮ ವಿಭಾಗದ ಮುಖ್ಯಸ್ಥೆ ಡಾ.ವೀಣಾ ಜಿ.ರಾವ್ ಮಾತನಾಡಿ, ‘ವಿದ್ಯಾರ್ಥಿಗಳು ಸರಳ ಜೀವನ, ಮಿತ ಆಹಾರ ಮತ್ತು ಸಮಯಪ್ರಜ್ಞೆಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ವೈದ್ಯರು ನಿರ್ವಹಿಸುವ ಅನೇಕ ಕಾರ್ಯಗಳನ್ನು ಕೃತಕ ಬುದ್ಧಿಮತ್ತೆಯು ನಿರ್ವಹಿಸುತ್ತದೆ. ಆದರೆ, ಪ್ರೀತಿ, ದಯೆ ಕರುಣೆ ಮತ್ತು ಭಾವನೆಗಳನ್ನು ಅದು ನೀಡಲು ಸಾಧ್ಯವಿಲ್ಲ’ ಎಂದು ಹೇಳಿದರು.

ದಿಶಾಭಾರತಿ ಸಂಸ್ಥೆಯ ನಿರ್ದೇಶಕಿ ಲಾವಣ್ಯ ರಾಧಾಕೃಷ್ಣ, ‘ಪ್ರತಿಯೊಬ್ಬರಲ್ಲಿಯೂ ಭಿನ್ನ ಭಿನ್ನ ಪ್ರತಿಭೆಗಳಿರುತ್ತವೆ. ಕ್ರೀಡೆ, ಕಲೆ, ವಿಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದರು.

ಯೋಗ ಮತ್ತು ಧ್ಯಾನ ತರಬೇತುದಾರರಾದ ರಾಧಿಕ ಪಾರ್ಥಸಾರಥಿ ಮಾತನಾಡಿದರು.

ಪವಿತ್ರ ಬಸವರಾಜ್ ತೋಟದ್, ವಿಘ್ನೇಶ್ವರ್ ಜಿ. ಹೆಗ್ಗಡೆ, ಬಿ.ಎಸ್.ಸಾನಿಕ, ಆರ್.ಕೆ.ಸೋಮನಾಥ್, ಎನ್.ಎಲ್.ಕುಸುಮಶ್ರೀ, ಎಂ.ಪ್ರಿಶಾ ತಿಮ್ಮಯ್ಯ ಮತ್ತು ಆರ್.ರೋಷಿಣಿ ಸಂತೋಷ್ ಬಾಬು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಎಂ.ಎಲ್.ರಾಜೇಂದ್ರ ಪ್ರಸಾದ್ ಶಿಬಿರದ ವರದಿ ಮಂಡಿಸಿದರು. ಬಿ.ಕೆ.ವಿನಯ್ ಕುಮಾರ್, ಆರ್. ಕಾವ್ಯಶ್ರೀ, ಎಸ್.ಅನುಷಾ, ಎಂ.ಎನ್. ರಾಜೇಶ್ವರಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-38-183979936

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.