ನಂಜನಗೂಡು: ‘ಶಿಕ್ಷಕರೂ ನಿತ್ಯ ವಿದ್ಯಾರ್ಥಿಗಳೇ. ಅವರೂ ಹೊಸ ವಿಷಯಗಳನ್ನು ತಿಳಿಯಲು ಪ್ರಯತ್ನಿಸಬೇಕು ಹಾಗೂ ಬದಲಾವಣೆಗಳಿಗೆ ಹೊಂದಿಕೊಂಡು ಬದುಕುವ ಕೌಶಲ ರೂಢಿಸಿಕೊಳ್ಳಬೇಕು’ ಎಂದು ಕಂದಾಯ ಸಚಿವರ ಆಪ್ತಕಾರ್ಯದರ್ಶಿ ರವಿ ಎಂ. ತಿರ್ಲಾಪುರ ಸಲಹೆ ನೀಡಿದರು.

ತಾಲ್ಲೂಕಿನ ಸುತ್ತೂರಿನ ವೀರಸಿಂಹಾಸನ ಮಹಾಸಂಸ್ಥಾನದ ಮಠದಿಂದ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ತರಬೇತಿಯು ನಿತ್ಯ ಹಾಗೂ ನಿರಂತರವಾಗಿರಬೇಕು. ಎಷ್ಟೇ ಅನುಭವ ಇದ್ದರೂ ತರಗತಿಗಳಿಗೆ ಸೂಕ್ತ ತಯಾರಿಯೊಂದಿಗೆ ಹೋಗಬೇಕು. ಉತ್ತಮ ಸಂವಹನ ಕೌಶಲಗಳೊಂದಿಗೆ ಸ್ಪಷ್ಟವಾಗಿ ಬೋಧಿಸಬೇಕು. ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಬೇಕು. ಶಿಬಿರಗಳಿಂದ ಶಿಸ್ತು, ಸಮಯಪ್ರಜ್ಞೆ, ನವೀನ ಕೌಶಲಗಳು ಹಾಗೂ ಸಹಕಾರ ಕಲಿಕೆ ಮೊದಲಾದವು ಶಿಕ್ಷಕರ ಬೆಳವಣಿಗೆಗೆ ಸಹಕಾರಿ ಆಗುತ್ತವೆ’ ಎಂದರು.

ಜೆಎಸ್ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಶಿಕ್ಷಣ ವಿಭಾಗದ ಸಹ ನಿರ್ದೇಶಕ ಎಂ.ಶಿವಮಾದಪ್ಪ, ‘ಪ್ರತಿ ವಿದ್ಯಾರ್ಥಿಯ ಕಲಿಕಾ ಮಟ್ಟದ ಬಗ್ಗೆಯೂ ಶಿಕ್ಷಕರಿಗೆ ಅರಿವಿರಬೇಕು. ಬದಲಾಗುತ್ತಿರುವ ಸನ್ನಿವೇಶಗಳಿಗೆ ಅನುಗುಣವಾಗಿ ಬೋಧನಾ ಕೌಶಲಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು. ವಿಷಯದ ಪರಿಕಲ್ಪನೆಗಳನ್ನು ಮನಮುಟ್ಟುವಂತೆ ತಿಳಿಸಬೇಕು. ವಿದ್ಯಾರ್ಥಿಗಳಿಗೆ ಸದಾ ಆದರ್ಶಪ್ರಾಯರಾಗಬೇಕು’ ಎಂದು ಸಲಹೆ ನೀಡಿದರು.

ಸುತ್ತೂರು ಜೆಎಸ್ಎಸ್ ಸಂಸ್ಥೆಗಳ ಆಡಳಿತಾಧಿಕಾರಿ ಎಸ್.ಪಿ.ಉದಯಶಂಕರ್, ‘ಶಿಬಿರದಲ್ಲಿ ಕಲಿತ ವಿಷಯಗಳನ್ನು ಕೆಲವು ದಿನಗಳಿಗೆ ಸೀಮಿತಗೊಳಿಸಿಕೊಳ್ಳದೆ ಜೀವನ ಪರ್ಯಂತ ಅಳವಡಿಸಿಕೊಳ್ಳುವುದು ಸೂಕ್ತ’ ಎಂದರು.

ಬೆಂಗಳೂರು ದಕ್ಷಿಣ ಜಿಲ್ಲೆಯ ಶಾಲಾ ಶಿಕ್ಷಣ ಉಪ ಯೋಜನಾ ಸಮನ್ವಯಾಧಿಕಾರಿ ಎಸ್.ವಿಶ್ವನಾಥ್, ‘ವಿದ್ಯಾರ್ಥಿಗಳಲ್ಲಿ ಸಮಾಜ ಒಪ್ಪುವಂತಹ ನೈತಿಕ ನಿಲುವುಗಳನ್ನು ಬೆಳೆಸುವುದು ಶಿಕ್ಷಕರ ಕರ್ತವ್ಯ. ಪ್ರಾಮಾಣಿಕತೆ, ಸಹಾನುಭೂತಿ, ಕರುಣೆ, ಸಹನಶೀಲತೆ, ಭಾವನಾತ್ಮಕತೆ ಮೊದಲಾದ ನೈತಿಕ ಅಂಶಗಳನ್ನು ಬೆಳಸಬೇಕು’ ಎಂದು ತಿಳಿಸಿದರು.

ಜೆಎಸ್ಎಸ್ –ಎಸ್ಟಿಯು ಡೆಪ್ಯುಟಿ ರಿಜಿಸ್ಟ್ರಾರ್ ಬಿ.ಎಸ್.ಹರೀಶ್ ಮಾತನಾಡಿ, ‘ಕೃತಕ ಬುದ್ಧಿಮತ್ತೆಯು (ಎಐ) ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹೊಸತನವನ್ನು ನೀಡುತ್ತದೆ. ಈ ತಂತ್ರಜ್ಞಾನವು ಮಾನವನ ಎಲ್ಲಾ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತಿದೆ. ಇದರ ಧನಾತ್ಮಕ ಉಪಯೋಗಗಳನ್ನು ಪಡೆದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಸಿ.ಎಸ್ ನಾಗೇಶ್, ಎಂ.ಮಂಜುನಾಥ್, ಎಂ.ಮಾದಲಾಂಬಿಕ, ಕೆ.ಎಂ.ದಿವ್ಯಾ, ಎಂ.ಸೌಜನ್ಯ ಅನಿಸಿಕೆ ಹಂಚಿಕೊಂಡರು. ಎಸ್. ಸೌಮ್ಯಾ ಶಿಬಿರದ ವರದಿ ಮಂಡಿಸಿದರು. ಎಂ.ಸುರೇಶ್ ಪ್ರಾರ್ಥಿಸಿದರು. ಟಿ.ಎಸ್.ಗಿರೀಶ್ ಸ್ವಾಗತಿಸಿದರು. ಎನ್.ಪಿ.ಸತೀಶ್ ವಂದಿಸಿದರು. ಪುಟ್ಟಮಾದಪ್ಪ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-38-2088531982

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.