ನರಸಿಂಹರಾಜಪುರ: 20 ವರ್ಷದ ಹಿಂದೆ ದೀಪ್ತಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದವರು ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಹಳೆಯ ನೆನಪುಗಳು ಮತ್ತೆ ಮರುಕಳಿಸಿವೆ ಎಂದು ನಿವೃತ್ತ ಕನ್ನಡ ಶಿಕ್ಷಕ ಕೆ.ಎಸ್. ಮನೋಹರ್ ನೆನಪಿಸಿಕೊಂಡರು.

ಪಟ್ಟಣದ ದೀಪ್ತಿ ಪ್ರೌಢಶಾಲೆಯಲ್ಲಿ ಭಾನುವಾರ 2006ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ವ್ಯಾಸಂಗ ಮಾಡಿದ್ದ ಹಿರಿಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿರಿಯ ವಿದ್ಯಾರ್ಥಿ ಬಿ.ಎನ್. ಹರ್ಷ ಮಾತನಾಡಿ, ‘ಸ್ನೇಹ ಸಮ್ಮಿಲನ ಕಾರ್ಯಕ್ರಮದ ಮೂಲಕ ಮತ್ತೆ ಎಲ್ಲರನ್ನು ನೋಡುವ ಅವಕಾಶ ಸಿಕ್ಕಿದೆ’ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ಶಿಕ್ಷಕಿಯಾಗಿದ್ದ ಲೀಲಾ ಜೋನ್, ಗಣಿತ ಶಿಕ್ಷಕರಾಗಿದ್ದ ದೇವರಾಜ್, ಡ್ರಾಯಿಂಗ್ ಶಿಕ್ಷಕಿಯಾಗಿದ್ದ ಜೆಸ್ಸಿ ನೆನಪುಗಳನ್ನು ಹಂಚಿಕೊಂಡರು.

ಹಿರಿಯ ವಿದ್ಯಾರ್ಥಿಗಳಾದ ಬಿಜೇಶ್, ಅರ್ಜುನ್, ಬಿನು, ಶಶಿಕುಮಾರ್, ಮಂಜುನಾಥ್, ಸಾದತ್, ಇರ್ಪಾನ್, ವರ್ಗೀಸ್, ಕಿರಣ್, ಪ್ರದೀಪ್, ಮನು, ಶರತ್, ರಿತೀಶ್, ಪ್ರಸನ್ನ, ಅಭಿಲಾಸ್, ನಿತಿನ್, ಜ್ಞಾನೇಶ್, ಧನ್ಯ, ಸೋನಿಯಾ, ಶ್ರೀಕಾಂತ್, ರೋಯಿ, ಅರವಿಂದ, ಶಬೀನಾ, ಲಿಜಿ, ಸಿಂದು, ಮುಕಂದ, ಮಿಥುನ್, ವಿವೇಕ್, ಶೆರಿನ್ ಪಲ್ಲವಿ, ರಜನಿ, ಶಾಲಾ ಸಿಬ್ಬಂದಿಗಳಾದ ಅವರಚ್ಚನ್, ಸೇವಿಯಾರ್, ರಮೇಶ್ ಇದ್ದರು. ಗುರುಗಳನ್ನು ಗೌರವಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಜ್ಞಾನೇಶ್, ಶಬೀನ ನಿರೂಪಿಸಿದರು.

ಅಂದಿನ ಸಾಲಿನಲ್ಲಿ ಮುಖ್ಯ ಶಿಕ್ಷಕರಾಗಿದ್ದ ದಿ. ಜೇಮ್ಸ್ ಜಾರ್ಜ್ ಕಲ್ಲರಕ್ಕಲ್ ಹಾಗೂ ಅಕಾಲಿಕವಾಗಿ ನಿಧನ ಹೊಂದಿದ 4 ಜನರನ್ನು ನೆನಪಿಸಿಕೊಂಡು ಸಂತಾಪ ಸೂಚಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-126-975530766

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.