ನರೇಗಲ್: ಮನೆ ಕಟ್ಟುವಾಗ ಜಗುಲಿಗೆ ಮಹತ್ವ ನೀಡುವಂತೆ ಜೀವನ ರೂಪಿಸುವ ಪುಸ್ತಕಗಳ ಕೊಠಡಿ ಗ್ರಂಥಾಲಯವೂ ಇರುವಂತೆ ನೋಡಿಕೊಳ್ಳಬೇಕು. ಆಗ ಮನೆಯಲ್ಲಿ ಜ್ಞಾನ ಪ್ರಜ್ವಲಿಸುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಪುಸ್ತಕ ಪ್ರಾಧಿಕಾರ ಗದಗ ಜಿಲ್ಲಾ ಜಾಗೃತಿ ಸಮಿತಿ, ಬೀಚಿ ಬಳಗ ನರೇಗಲ್, ಶರಣ ಸಾಹಿತ್ಯ ಪರಿಷತ್ ಹೋಬಳಿ ಘಟಕ ನರೇಗಲ್, ನಿರಂತರ ಪ್ರಕಾಶ ಗದಗ ಇವರ ಆಶ್ರಯದಲ್ಲಿ ನರೇಗಲ್ ಪಟ್ಟಣದ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಬುಧವಾರ ಸಂಜೆ ನಡೆದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮೊಬೈಲ್ ಬಿಡಿ ಪುಸ್ತಕ ಹಿಡಿಯಿರಿ ಎಂಬ ಆಶಯಕ್ಕೆ ಕರ್ನಾಟಕ ಸರ್ಕಾರ ಒತ್ತು ನೀಡಿದೆ. ಹಾಗಾಗಿ ಮನೆಗೊಂದು ಗ್ರಂಥಾಲಯ ಎಂಬ ಅಭಿಯಾನವನ್ನು ನಡೆಸುತ್ತಿದ್ದೇವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ನ ಹೋಬಳಿ ಘಟಕದ ಅಧ್ಯಕ್ಷ ಎಂ. ಎಸ್. ಧಡೇಸೂರಮಠ ಮಾತನಾಡಿ, ಪಠ್ಯಪುಸ್ತಕಗಳಲ್ಲಿ ಪ್ರಕಟವಾಗುವ ಬರಹ, ಕವಿತೆ, ಕತೆ, ಪಾಠ ಹಾಗೂ ಲೇಖನಗಳಲ್ಲಿ ಕೇವಲ ದಕ್ಷಿಣ ಭಾರತದ ಸಾಹಿತಿಗಳಿಗೆ ಮಾತ್ರ ಮಹತ್ವ ನೀಡಲಾಗುತ್ತದೆ. ನಮ್ಮ ಉತ್ತರ ಕರ್ನಾಟದಲ್ಲೂ ಉತ್ತಮ ಸಾಹಿತಿಗಳಿದ್ದು ಇಲ್ಲಿಯವರಿಗೂ ಸಮಾನ ಅವಕಾಶಗಳನ್ನು ನೀಡಲು ಕನ್ನಡ ಪುಸ್ತಕ ಪ್ರಾಧಿಕಾರದವರು ಮುಂದಾಗಬೇಕು ಎಂದು ಬೇಡಿಕೆಯಿಟ್ಟರು.

ಕಾರ್ಯಕ್ರಮದ ಆರಂಭ ಮೊದಲು ನರೇಗಲ್ ಪಟ್ಟಣದ ಅರುಣ ಕುಲಕರ್ಣಿ, ಕೆ. ಪಿ. ಸಾಲಿಮಠ, ವಿ. ವಿ. ಅಣ್ಣಿಗೇರಿ, ದೊಡ್ಡಯ್ಯ ಅರವಟಗಿಮಠ ಸೇರಿದಂತೆ ಅನೇಕರ ಮನೆಗಳಲ್ಲಿರುವ ಕಿರು ಗ್ರಂಥಾಲಯಕ್ಕೆ ಭೇಟಿ ನೀಡಲಾಯಿತು. ಈ ವೇಳೆ ಸಾಹಿತಿ ರವೀಂದ್ರನಾಥ ದೊಡ್ಡಮೇಟಿ, ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ಸವಿತಕ್ಕ, ಗದಗ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ನರೇಗಲ್ ಬೀಚಿ ಬಳಗದ ಅಧ್ಯಕ್ಷ ಶಿವಯೋಗಿ ಜಕ್ಕಲಿ, ಗಜೇಂದ್ರಗಡ ತಾಲ್ಲೂಕು ಕನ್ನಡ ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಕೆ. ಬೇವಿನಕಟ್ಟಿ, ಮನೆಗೊಂದು ಗ್ರಂಥಾಲಯದ ಗದಗ ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕ ಎ. ಎಸ್. ಮಕಾನದರ, ಅರುಣ ಕುಲಕರ್ಣಿ, ರವಿ ದೇರಡ್ಡಿ, ವಿ. ಎ. ಕುಂಬಾರ, ಎ. ಪಿ. ಸಾಲಿಮಠ, ಎಸ್. ವಿ. ಹಳ್ಳಿಕೇರಿ, ಎಂ. ವಿ. ವೀರಾಪೂರ, ಶ್ವೇತಾ ಕೊಟಗಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-23-227341162

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.